ಬೆಂಗಳೂರು : ಅವರಿಬ್ಬರು ಒಟ್ಟೊಟ್ಟಿಗೆ ಏರಿಯಾದಲ್ಲಿ ಬೆಳೆದವರು, ಒಂದೇ ಫಿಲ್ಡ್‌ನಲ್ಲಿ ಜೊತೆ ಜೊತೆಗೆ ಹೆಜ್ಜೆ ಹಾಕಿದವರು. ಒಂದೇ ನಾಣ್ಯದ ಎರಡು ಮುಖಗಳಂತೆ ಇದ್ದವರು, ಇದೀಗ ಹಾವು ಮುಂಗುಸಿಯಂತಾಗಿದ್ದಾರೆ. ಮಾಜಿ ಸಚಿವರಿಗೆ ಕೊಲೆ ಬೆದರಿಕೆ ಹಾಕಿದ ಮಾಜಿ ಕಾರ್ಪೋರೇಟರ್ ಅಂದರ್ ಆಗಿ ಹೊರಬಂದ ಸ್ಟೋರಿ ಇಲ್ಲಿದೆ..


COMMERCIAL BREAK
SCROLL TO CONTINUE READING

ಹೌದು, ನಿನ್ನೆ ಮಾಜಿ ಸಚಿವ, ಹಾಲಿ ಶಾಸಕರಾಗಿರುವ ಗೋಪಾಲಯ್ಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಡರಾತ್ರಿ ಗೋಪಾಲಯ್ಯನವರಿಗೆ ಮಾಜಿ ಕಾರ್ಪೋರೇಟರ್ ಪದ್ಮರಾಜ್ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರಂತೆ. ಅಷ್ಟೇ ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ನಿಮ್ಮ ಕುಟುಂಬವನ್ನ ನಿರ್ನಾಮ ಮಾಡುವುದಾಗಿ ಅವಾಜ್ ಹಾಕಿದ್ದಾರೆ. ಹೀಗೆ ಬೆದರಿಕೆ ಹಾಖಿದ ಬೆನ್ನಲ್ಲೆ ಶಾಸಕ ಗೋಪಾಲಯ್ಯನವರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೆ ಪದ್ಮರಾಜ್ ಬಂಧನ ಮಾಡಿದ ಪೊಲೀಸರು ಕೋರ್ಟ್ಗೆ ಹಾಜರು ಪಡಿಸಿದ್ದಾರೆ.


ಇದನ್ನೂ ಓದಿ:ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್


ಇನ್ನು ಪ್ರಕರಣ ಸಂಬಂಧ ಜಾಮೀನು ಪಡೆದು ಹೊರಬಂದ ಪದ್ಮರಾಜ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. 2010ರಲ್ಲಿ ನನ್ನನ್ನು ಮೇಯರ್ ಮಾಡುವುದಾಗಿ 1 ಕೋಟಿ ಹಣವನ್ನು ವಿರೋಧಪಕ್ಷದ ನಾಯಕ ಆರ್ ಅಶೋಕ ತೆಗೆದುಕೊಂಡಿದ್ರು. ಇದಕ್ಕೆ ಮೈಸೂರಿನ ಎಂಎಲ್‌ಎ ನಾಗೇಂದ್ರ ಅವರೇ ಸಾಕ್ಷಿ. ಆ ಹಣವನ್ನು ನಾನು ಸದ್ಯ ವಾಪಸ್ ಪಡೆದುಕೊಂಡಿದ್ದೇನೆ. ಆದ್ರೆ ಅದನ್ನ ವಾಪಸ್ ಪಡೆದುಕೊಳ್ಳಲು ಪಟ್ಟ ಕಟ್ಟ ನನಗೆ ಮಾತ್ರ ಗೊತ್ತು. ಇನ್ನು ಪೊಲೀಸರ ತನಿಖೆಯ ವೇಳೆ ಗೋಪಾಲಯ್ಯನವರು ನನಗೆ 15 ಲಕ್ಷ ಹಣ ನೀಡಬೇಕು. ಅದನ್ನ ಕೇಳಲು ಕರೆ ಮಾಡಿರುವುದಾಗಿ ಸ್ಪಷ್ಟ ಪಡಿಸಿದ್ದಾರೆ.


ಇನ್ನು ಬಲ್ಲ ಮೂಲಗಳ ಪ್ರಕಾರ 2023ರ ಲೋಕಸಭಾ ಚುನಾವಣೆಯ ವೇಳೆ ರಾಜಾಜಿನಗರ ಕ್ಷೇತ್ರಕ್ಕೆ ಎಂಎಲ್ಎ ಟಿಕೇಟ್ ಕೊಡಿಸುವುದಾಗಿ ಗೋಪಾಲಯ್ಯ ಭರವಸೆ ನೀಡಿದ್ರು. ಹೋಗಿ ನೀವು ಕ್ಷೇತ್ರದಲ್ಲಿ ಕೆಲಸ ಮಾಡಿ ಅಂತ ಹೇಳಿದ್ರು. ಹಾಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿಸಿ ವಂಚನೆ ಮಾಡಿರುವುದಾಗಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಇದೇ ಕಾರಣಕ್ಕೆ ಗೋಪಾಲಯ್ಯನವರು ಹಾಗು ಪದ್ಮರಾಜ್ ಅವರ ನಡುವೆ ಗಲಾಟೆ ಆಗಿರುವ ಸಾದ್ಯತೆ ಇದೆ ಎನ್ನಲಾಗುತ್ತಿದೆ. ಒಟ್ಟಾರೆ ಒಂದು ಕಾಲದ ಗೆಳೆಯರು ರಾಜಕೀಯ, ಹಣಕಾಸಿನ ವಿಚಾರಕ್ಕೆ ಇದೀಗ ದುಶ್ಮನ್ಗಳಾಗಿರುವುದು ದುರಂತವೇ ಸರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.