ಬೆಂಗಳೂರು : ಹಿಜಾಬ್ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ವಕೀಲೆ ಸುಧಾಕಾಟ್ವ ಎಂಬುವವರಿಂದ ದೂರು ನೀಡಲಾಗಿದೆ.


COMMERCIAL BREAK
SCROLL TO CONTINUE READING

ಹಿಜಾಬ್ ವಿಚಾರದ ತೀರ್ಪಿಗೆ ಸಂಬಂಧಪಟ್ಟ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ(High Court Judge) ವೈರಲ್ ವಾಟ್ಸ್ ಆಪ್ ವೀಡಿಯೋ ಮೂಲಕ ಕೊಲೆ ಬೆದರಿಕೆ ಹಾಕಿದ್ದಾರೆ.


ಇದನ್ನೂ ಓದಿ : ಪಾವಗಡ ಬಸ್ ದುರಂತ : ಮೃತಪಟ್ಟವರ ಕುಟುಂಬದವರಿಗೆ ಸಿಎಂ ಪರಿಹಾರ ಘೋಷಣೆ


ಅಪರಿಚಿತ ವ್ಯಕ್ತಿ ನ್ಯಾಯಮೂರ್ತಿಗಳಿಗೆ ತಮಿಳು‌ ಭಾಷೆ ಬಳಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ(Death Threats) ಹಾಕಿದ್ದಾನೆ. ಇದರಿಂದ ರಾಷ್ತ್ರಿಯ ಏಕತೆ ಮತ್ತು ಸಮಗ್ರತೆಗೆ ಧಕ್ಕೆಯುಂಟಾಗುತ್ತದೆ. ನ್ಯಾಯಮೂರ್ತಿಗಳನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಅಪರಿಚಿತರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ವೈರಲ್ ಆಗುತ್ತಿರುವ ವಾಟ್ಸಾಫ್ ವಿಡಿಯೋ ಸಮೇತ ವಕೀಲೆ ಸುಧಾ ಕಾಟ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ದೂರಿನನ್ವಯ ವಿಧಾನಸೌಧ ಪೊಲೀಸ್ ಠಾಣೆ(Vidhana Soudha Police Station) ಯಲ್ಲಿ IPC 109, 153A, 501, 506, 504, 505, ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ : ಸರ್ವಪಕ್ಷ ನಿಯೋಗವನ್ನು ಪ್ರಧಾನಿ ಮೋದಿ ಮುಂದೆ ತೆಗೆದುಕೊಂಡು ಹೋಗೋಕೆ ಹೆದರಿಕೆ ಯಾಕೆ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.