ಸರ್ವಪಕ್ಷ ನಿಯೋಗವನ್ನು ಪ್ರಧಾನಿ ಮೋದಿ ಮುಂದೆ ತೆಗೆದುಕೊಂಡು ಹೋಗೋಕೆ ಹೆದರಿಕೆ ಯಾಕೆ?

ರಾಜ್ಯದ ನೀರಾವರಿ ಸಮಸ್ಯೆಗಳ ಬಗ್ಗೆ ಹಾಗೂ ಇದರ ಪರಿಹಾರ ಚರ್ಚೆಗೆ ಸರ್ವಪಕ್ಷ ನಿಯೋಗವನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದೆ ಹೋಗೋಕೆ ಇವರಿಗೆ ಹೆದರಿಕೆ ಏಕೆ? ಎಂದು ಕೆಪಿಸಿಸಿ ನಿಯೋಜಿತ ಪ್ರಚಾರ ಸಮ್ಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ (M B Patil) ಪ್ರಶ್ನಿಸಿದರು.

Written by - Zee Kannada News Desk | Last Updated : Mar 19, 2022, 10:47 PM IST
  • ಈ ವಿಷಯದಲ್ಲಿ ರಾಜ್ಯಕ್ಕೆ ಏನು ಲಾಭ,ಏನು ನಷ್ಟ ಇದೆ ಅರಿಯಬೇಕು.ನಮ್ಮ ಪಾಲಿಗೆ ಎಷ್ಟು ನೀರು ಸಿಗಲಿದೆ ತಿಳಿಯಬೇಕು.
  • ಸರ್ವಪಕ್ಷ ನಿಯೋಗ ಪ್ರಧಾನಿ ಬಳಿಗೆ ಕೊಂಡೊಯ್ಯಬೇಕು.ಪ್ರಧಾನಿ ಮುಂದೆ ಹೋಗೋಕೆ ಹೆದರಿಕೆಯಾಕೆ?
  • ಅವರು ನಮ್ಮ ದೇಶದ ಪ್ರಧಾನಿಗಳಲ್ಲವೇ? ಎಂದು ಪ್ರಶ್ನೆ ಮಾಡಿದರು.
ಸರ್ವಪಕ್ಷ ನಿಯೋಗವನ್ನು ಪ್ರಧಾನಿ ಮೋದಿ ಮುಂದೆ ತೆಗೆದುಕೊಂಡು ಹೋಗೋಕೆ ಹೆದರಿಕೆ ಯಾಕೆ? title=
file photo

ಬೆಂಗಳೂರು: ರಾಜ್ಯದ ನೀರಾವರಿ ಸಮಸ್ಯೆಗಳ ಬಗ್ಗೆ ಹಾಗೂ ಇದರ ಪರಿಹಾರ ಚರ್ಚೆಗೆ ಸರ್ವಪಕ್ಷ ನಿಯೋಗವನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದೆ ಹೋಗೋಕೆ ಇವರಿಗೆ ಹೆದರಿಕೆ ಏಕೆ? ಎಂದು ಕೆಪಿಸಿಸಿ ನಿಯೋಜಿತ ಪ್ರಚಾರ ಸಮ್ಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ (M B Patil) ಪ್ರಶ್ನಿಸಿದರು.

ಇದನ್ನೂ ಓದಿ: Cylinder Blast: ಸಿಲಿಂಡರ್ ಬ್ಲಾಸ್ಟ್ ಆಗಿ ವ್ಯಕ್ತಿಗೆ ಗಂಭೀರ ಗಾಯ

ನಿನ್ನೆ ನಡೆದ ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ಸರ್ವಪಕ್ಷ ಸಭೆಯನ್ನ ಡೆಲ್ಲಿಗೆ ಹೋಗಿ ಚರ್ಚೆ ನಡೆಸಲು ಒತ್ತಾಯ ಮಾಡಿದ್ದೇವೆ, ಅಗತ್ಯ ಬಿದ್ದರೆ ಕೇಂದ್ರ ಜಲಸಂಪನ್ಮೂಲ ಸಚಿವ ಹಾಗೂ ಪ್ರಧಾನಿ ಮುಂದೆ ಹೋಗುವುದಾಗಿ ಮುಖ್ಯಮಂತ್ರಿ ಆಶ್ವಾಸನೆ ನೀಡಿದ್ದಾರೆ ಎಂದು ವಿವರಿಸಿದರು.

ಇನ್ನು ಮೇಕೆದಾಟು ಹಾಗೂ ಇತರೆ ನೀರಾವರಿ ಸಮಸ್ಯೆಗಳ ಚರ್ಚೆ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಇವರು,ನಮ್ಮ ಪಕ್ಷದ ನಿಲುವನ್ನ ನಾವು ವ್ಯಕ್ತಪಡಿಸಿದ್ದೇವೆ.ಕೃಷ್ಣಾ ವಿಚಾರದಲ್ಲಿ ನೊಟಿಫಿಕೇಶನ್ ಆಗಬೇಕು, ನೊಟಿಫಿಕೇಶನ್ ಆದರೆ ನ್ಯಾಷನಲ್ ಪ್ರಾಜೆಕ್ಟ್ ಆಗುತ್ತೆ. 2 ಲಕ್ಷ ಹೆಕ್ಟೇರ್ ಪ್ರದೇಶ ಅದಕ್ಕೆ ಬೇಕು, ಮೇಕೆದಾಟು (Mekedatu project) ಬಗ್ಗೆ ಚರ್ಚೆಯಾಗಿದೆ ಅಂತಾರೆ ಆದರೆ ಏನು ಚರ್ಚೆ ಅನ್ನೋದನ್ನ ಸಿಎಂ ಹೇಳ್ತಿಲ್ಲ. ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆಯುತ್ತೇನೆಂದ್ರು.ನದಿ ಜೋಡಣೆ ವಿಚಾರಲ್ಲೂ ನಮ್ಮ ಅಭಿಪ್ರಾಯ ಪಡೆಯಬೇಕು ಎಂದರು.

ಇದನ್ನೂ ಓದಿ: Harbhajan Singh : ಧೋನಿ ಬಗ್ಗೆ ಹೇಳಿಕೆ ನೀಡಿ ಬಿಸಿಸಿಐ ಕೆಂಗಣ್ಣಿಗೆ ಗುರಿಯಾದ ಹರ್ಭಜನ್ ಸಿಂಗ್!

ಈ ವಿಷಯದಲ್ಲಿ ರಾಜ್ಯಕ್ಕೆ ಏನು ಲಾಭ,ಏನು ನಷ್ಟ ಇದೆ ಅರಿಯಬೇಕು.ನಮ್ಮ ಪಾಲಿಗೆ ಎಷ್ಟು ನೀರು ಸಿಗಲಿದೆ ತಿಳಿಯಬೇಕು.ಸರ್ವಪಕ್ಷ ನಿಯೋಗ ಪ್ರಧಾನಿ ಬಳಿಗೆ ಕೊಂಡೊಯ್ಯಬೇಕು.ಪ್ರಧಾನಿ ಮುಂದೆ ಹೋಗೋಕೆ ಹೆದರಿಕೆಯಾಕೆ?ಅವರು ನಮ್ಮ ದೇಶದ ಪ್ರಧಾನಿಗಳಲ್ಲವೇ? ಎಂದು ಪ್ರಶ್ನೆ ಮಾಡಿದರು.

ಇನ್ನು ಮೇಕೆದಾಟು ಯೋಜನೆ ವಿಚಾರದಲ್ಲಿ 3 ಕ್ಕಿಂತ ಹೆಚ್ವು ಅರ್ಜಿಗಳು ತಮಿಳುನಾಡು ಸುಪ್ರೀಂ ಕೋರ್ಟ್ನಿನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಮದ್ಯೆ ಹೇಗೆ ಯೋಜನೆ ಅನುಷ್ಠಾನ ಮಾಡಬಹುದು ಎಂಬ ಜೀ ಕನ್ನಡ ನ್ಯೂಸ್ ಪ್ರಶ್ನೆಗೆ ಉತ್ತರಿಸಿದ ಇವರು, ಮೇಕೆದಾಟು ಯೋಜನೆಗೆ ಏನಾದ್ರೂ ಸ್ಟೇ ಇದ್ಯಾ? ಸುಮ್ಮಸುಮ್ಮನೆ ಪೆಟಿಷನ್ ಹಾಕಿದರೆ ಏನಾಗುವುದಿಲ್ಲ.ಆದೇಶ ಮಾಡಿದರೆ ಮಾತ್ರ ತಾನೇ ಅನ್ವಯಾಗೋದು. ತಮಿಳುನಾಡಿನವರು ಸುಮ್ಮನೆ ಪೆಟಿಶನ್ ಹಾಕಿದ್ದಾರೆ ಎಂದು ತಿಳಿಸಿದರು.

ಕೆಪಿಸಿಸಿ ಪ್ರಚಾರ ಸಮ್ಮಿತಿ ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮ ಮಾರ್ಚ್ ೨೮ ರಂದು ನಡೆಯಲಿದ್ದು.ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ.ಪ್ರಚಾರ ಸಮಿತಿ ಮೂಲಕ ಪಕ್ಷ ಸಂಘಟನೆ ಮಾಡ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಎಂದು ಹೇಳಿದರು.

ಇದನ್ನೂ ಓದಿ: Arecanut Today Price: ಕರ್ನಾಟಕದ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಬಂಪರ್ ದರ

ಇನ್ನು ಕಾಂಗ್ರೆಸ್ ಪಂಚರಾಜ್ಯಗಳ ಚುನಾವಣೆಯಲ್ಲಿ ಸರಣಿ ಸೋಲು ಕಂಡ ಹಿನ್ನಲೆಯಲ್ಲಿ ಮಾಜಿ ಸಚಿವ ಎಂ ಬಿ ಪಾಟೀಲ್ ಗೆ ಇದು ಸವಾಲು ಎಂಬ ಪ್ರಶ್ನೆಗೆ ಉತ್ತರಿಸಿದ ಇವರು, ಹೌದು ಇದು ಸವಾಲು, ಪಂಜಾಬ್ ನಲ್ಲಿ ಆದ ಪರಿಸ್ಥಿತಿ ಇಲ್ಲಿ ಇಲ್ಲ. ಇಲ್ಲಿ ಸಾಮೂಹಿಕವಾಗಿ ಚುನಾವಣೆ ಎದುರಿಸುತ್ತೇವೆ. ಕೂಸು ಹುಟ್ಟುವ ಮುನ್ನ ಕುಲಾವಿ ಇಲ್ಲ, ಮೊದಲು ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು.ಆ ನಂತರ ಪಕ್ಷದ ಹೈಕಮಾಂಡ್ ಯಾರು ಮುಖ್ಯಮಂತ್ರಿ ಆಗಬೇಕು ಎಂದು ತೀರ್ಮಾನ ಮಾಡುತ್ತದೆ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News