ಬೆಂಗಳೂರು : “30-35 ವರ್ಷಗಳ ಹಿಂದೆ ನಾನು ನೀರಾ ಕುಡಿದಿದ್ದೆ. ಅದು ಜ್ಯೂಸ್ ನಂತಿತ್ತು. ನನಗೆ ಯಾವುದೇ ಮತ್ತು ಬರಲಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸದನದಲ್ಲಿ ಹೇಳಿದ್ದಾರೆ. ಪ್ರಶ್ನೋತ್ತರ ಕಲಾಪದ ವೇಳೆ ಬಿ.ಕೆ ಹರಿಪ್ರಸಾದ್, ಸಾರಾಯಿ ನಿಷೇಧದ ನಂತರ ಅನೇಕರು ಬೀದಿಗೆ ಬಂದಿದ್ದು, ಅಬಕಾರಿ ಇಲಾಖೆ ವತಿಯಿಂದ ಇವರಿಗಾಗಿ ಯಾವುದಾದರೂ ಕಾರ್ಯಕ್ರಮ ಹಮ್ಮಿಕೊಂಡಿದೆಯೇ ಎಂದು  ಪ್ರಶ್ನಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಸಂದರ್ಭದಲ್ಲಿ ಸೇಂದಿ, ಸಾರಾಯಿಯನ್ನು ಉಪಕಸುಬಾಗಿಸಿಕೊಂಡಿದ್ದ ಸಮುದಾಯಕ್ಕೆ ನೀರಾ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚೆ ನಡೆಯಿತು.  ಆಗ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ನೀರಾ ಸೇವನೆ ವಿಚಾರವಾಗಿ ನಡೆದ ಚರ್ಚೆ ಸದನವನ್ನು ನಗೆಗಡಲಲ್ಲಿ ತೇಲಿಸಿತು.


ಇದನ್ನೂ ಓದಿ : ಸೀಟು ಹಂಚಿಕೆ ಬಗ್ಗೆ ಜೆ‌ಡಿ‌ಎಸ್-ಬಿ‌ಜೆ‌ಪಿ ನಡುವೆ ಯಾವುದೇ ಗೊಂದಲ ಇಲ್ಲ: ಎಚ್‌ಡಿ‌ಕೆ


 “ಸಾರ್ವಜನಿಕ ಹಿಸಾಸಕ್ತಿಗಾಗಿ ವಿರೇಂದ್ರ ಹೆಗಡೆ ಅವರ ಕಾಲದಲ್ಲಿ ಸೇಂದಿ ಹಾಗೂ ಯಡಿಯೂರಪ್ಪ ಅವರ ಕಾಲದಲ್ಲಿ ಸಾರಾಯಿ ನಿಷೇಧ ಮಾಡಲಾಯಿತು. ಸೇಂದಿ ಬದಲಾಗಿ ನೀರಾ ಬಂದಿದ್ದು ನೀರಾ ಮಳಿಗೆಗಳ ಸ್ಥಾಪನೆಗೆ ಅನುಮತಿ ನೀಡಬೇಕು. ಈ ಸಮುದಾಯದವರಿಗೆ ಎಂಎಸ್ಐಎಲ್ ನಲ್ಲಿ ಅವಕಾಶ ನೀಡಬೇಕು” ಎಂದು ಕೋಟಾ ಶ್ರೀನಿವಾಸ ಪೂಜಾರಿ ಸರ್ಕಾರಕ್ಕೆ ಸಲಹೆ ನೀಡಿದರು. 


ಈ ಸಂದರ್ಭದಲ್ಲಿ  ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ನೀವು ನೀರಾ ಕುಡಿಯುವ ಪ್ರಯತ್ನ ಮಾಡಿಲ್ಲವೇ ಎಂದು ಪೂಜಾರಿ ಅವರನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಪೂಜಾರಿ, “ನಾನು ನೀರಾ ಕುಡಿಯಬೇಕು ಎಂದು ಅಂದುಕೊಂಡೆ. ಆದರೆ, ಅದನ್ನು ಕುಡಿದ ಮೇಲೆ ನಿಂತುಕೊಳ್ಳುವ ಶಕ್ತಿ ನನ್ನಲ್ಲಿರುತ್ತದೆಯೇ ಎಂಬ ಅನುಮಾನ ಮೂಡಿತು. ನಾನು ಡಿ.ಕೆ. ಶಿವಕುಮಾರ್ ಅವರಂತೆ ದಪ್ಪಗಿದ್ದರೆ ಕುಡಿದ ನಂತರವೂ ನಿಲ್ಲುವ ಶಕ್ತಿ ಇರುತ್ತಿತ್ತುಎಂದರು. 


ಇದನ್ನೂ ಓದಿ : ಸುಮಲತಾ ಬಿಜೆಪಿಯೊಳಗೆ ಇರ್ತಾರೆ: ಸಚಿವ ಪ್ರಹ್ಲಾದ ಜೋಶಿ


ನಂತರ ಮಾತು ಮುಂದುವರಿಸಿದ ಶಿವಕುಮಾರ್ ಅವರು, “ಪೂಜಾರಿ ಹಾಗೂ ರವಿ ಕುಮಾರ್ ಅವರು ಈ ಸಮುದಾಯದ ಜನರ ರಕ್ಷಣೆ ಬಗ್ಗೆ ಆಲೋಚಿಸುತ್ತಿದ್ದಾರೆ. ಈಗ ಬೀದಿ ಬದಿಯ ಎಳನೀರನ್ನು 20 ರೂಪಾಯಿಗೆ ಮಾರುತ್ತಾರೆ. ಆದರೆ ಅದನ್ನೇ ಪ್ಯಾಕೆಟ್ ಅಥವಾ ಬಾಟೆಲ್ ನಲ್ಲಿ ಹಾಕಿ ಮಾರಿದರೆ 100 ರೂ. ಕೊಟ್ಟು ಖರೀದಿ ಮಾಡುವ ಜನರೂ ಇದ್ದಾರೆ. ಅದೇ ರೀತಿ ಬಂಡವಾಳ ಹಾಕಿ ನೀರಾ ಉತ್ಪನ್ನವನ್ನು ಮಾಡಿ ಈ ವರ್ಗದ ಜನರಿಗೆ ಎಂಎಸ್ಐಎಲ್ ನಲ್ಲಿ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಇದೇ ಸದನದಲ್ಲಿ ಎಂ.ಸಿ ನಾಣಯ್ಯ ಅವರು ಮಾಡಿದ ಭಾಷಣದಿಂದ ಇಡೀ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನೇ ಬದಲಿಸಿತು. ಆಗ ಕೋಡೆಸ್, ಮಲ್ಯ ಸೇರಿದಂತೆ ಅನೇಕರಿಗೆ ವ್ಯಾಪಾರದಲ್ಲಿ ನಷ್ಟ ಉಂಟಾಯಿತು. ಅದೇ ರೀತಿ ಇಂದು ನೀವು ಎತ್ತಿರುವ ವಿಚಾರ ಹಾಗೂ ಇದರಿಂದೆ ತೆಗೆದುಕೊಳ್ಳುವ ನಿರ್ಧಾರ ಬದಲಾವಣೆಗೆ ದಾರಿಯಾಗಬಹುದು” ಎಂದು ತಿಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.