ಹಾವೇರಿ : ರೈತರು ಬಿತ್ತಿದ ಬೆಳೆಗೆ ಸಮರ್ಪಕ ನೀರು ಸಿಗುತ್ತಿಲ್ಲವೆಂದು ತೆಲೆ ಮೇಲೆ ಕೈ ಹೊತ್ತು ಕುತಿದ್ದಾರೆ. ಬೆಳೆದ ಬೆಳೆ ತಮ್ಮ ಕೈ ಸೇರೊತ್ತೋ ಇಲ್ವೋ ಅಂತಾ ಚಿಂತಿಸುತ್ತಿದ್ದ ರೈತರಿಗೆ. ಈಗ ತಡವಾಗಿ ಬಂದ ಮುಂಗಾರು ಮಳೆ ಕೊಂಚ ರೈತರಿಗೆ ಸಂತೋಷ ನೀಡಿತ್ತು. ಈ ಬೆನ್ನಲೇ ಮತ್ತೆ ಅನ್ನದಾತ ಚಿಂತೆಗೆ ಗುರಿಯಾಗುವಂತೆ ಮಾಯಾಮೃಗ ಮಾಡುತ್ತಿದೆ. ಅಷ್ಟಕ್ಕೋ ಏನು ರೈತರಿಗೆ ಸಮಸ್ಯೆ ಅಂತೀರಾ ಈ ಸ್ಟೋರಿ ನೋಡಿ....


COMMERCIAL BREAK
SCROLL TO CONTINUE READING

ಹೌದು.. ಹೀಗೆ ಹಸಿರಿನಿಂದ ಮೊಳಕೆಯೊಡೆದು ಕಂಗೊಳಿಸುತ್ತಿರುವ ರೈತನ ಜಮೀನು. ಮತ್ತೊಂದೆಡೆ ಸಾಲುಗಟ್ಟಿ ನಿಂತ ರೈತರ ಜಮೀನಿನಲ್ಲಿ ಜಿಂಕೆಗಳ ದಂಡು. ಈ ಎಲ್ಲ ದೃಶ್ಯ ಹಾವೇರಿ ಜಿಲ್ಲೆಯ ಹಾನಗಲ್, ಬ್ಯಾಡಗಿ, ರಾಣಿಬೇನ್ನೂರು, ಹಿರೆಕೇರೂರು, ಸವಣರೂ, ತಾಲೂಕಿನ ರೈತರ ಕೃಷಿ ಜಮೀನಲ್ಲಿ ಕಂಡು ಬಂದಿದೆ. ಹೌದು, ತಿಂಗಳವಿಡಿ ಕೃಷಿ ಭೂಮಿ ಹದಮಾಡಿ ಬೆಳೆದ ಬೆಳೆಗೆ ಮಳೆ ಇಲ್ವೆಂದು ರೈತರು ಕಣ್ಣಿರು ಹಾಕ್ತಿದ್ದಾರೆ. 


ಇದನ್ನೂ ಓದಿ: ಘೋಸ್ಟ್ ಸಿನಿಮಾದ ʼಬಿಗ್​ ಡ್ಯಾಡಿ’ ಪೋಸ್ಟರ್ ರಿಲೀಸ್‌ ; ಶಿವಣ್ಣನ ಲುಕ್​ಗೆ ಫ್ಯಾನ್ಸ್‌ ಫಿದಾ..!


ರೈತ ಬೆಳೆದ ಸೊಯಬಿನ, ಗೋವಿನ ಜೋಳ, ಶೇಂಗಾ ಬೆಳಗಳಿಗೆ ಸಮಪರ್ಕ ನೀರಿಲ್ಲ ಅಂತಾ ಆಂತಕಗೊಂಡ ರೈತರಿಗೆ ಜಿಂಕೆಗಳ ಕಾಟ ಹೆಚ್ಚಾಗಿದೆ. ಹೌದು, ರೈತರ ಕೃಷಿ ಜಮೀನುಗಳಿಗೆ ಹಿಂಡು ಹಿಂಡಾಗಿ ಜಿಂಕೆಗಳು ನುಗ್ಗಿ. ರೈತರು ಬೆಳೆದ ಬೆಳೆಯನ್ನ ಸಾಲುಗಟ್ಟಿ ತಿನ್ನುತ್ತವೆ. ಈ ಹಿನ್ನಲೆ ಮಳೆರಾಯ ರೈತನ ಜೊತೆ ಚಲ್ಲಾಟವಾಡುತ್ತಿದ್ದರೆ. ಇನ್ನೊಂದೆಡೆ ಮಾಯಾಮೃಗದ ದಂಡುಗಳು ರೈತ ಬೆಳೆದ ಬೆಳೆ ಕೈಗೆ ಬಾರದಂತಾಗಿದೆ ಮಾಡ್ತಿವೆ ಅಂತಾ ಜಿಲ್ಲೆಯ ರೈತರು ತಮ್ಮ ಆಳಿಲು ತೊಡಿಕೊಳ್ಳುತ್ತಿದ್ದಾರೆ..


ಇನ್ನು ರೈತರು ಮುಂಗಾರು ಮಳೆ ಇಲ್ಲದೆ ರೈತ ಕಂಗಾಲಾಗಿದ್ದಾರೆ. ಇದೀಗ ಮುಂಗಾರು ಮಳೆ ಕೊಂಚ ಮಟ್ಟಿಗೆ ತಡವಾಗಿ ಆಗಮಿಸಿದರು ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದ್ದ. ಆದ್ರೆ ಇದೀಗ ಆ ರೈತ ತಾನು ಬೆಳೆದ ಬೆಳೆಗೆ ಸಮರ್ಪಕವಾಗಿ ಮಳೆ ಇಲ್ದೆ ಕಣ್ಣಿರು ಹಾಕ್ತಿದ್ರೆ. ಈ ನಡುವೆ ಕಾಡು ಪ್ರಾಣಿಗಳಿಂದ ರಕ್ಷಣೆ ಇಲ್ಲದೆ ಬೆಳೆದ ಬೆಳೆ ತಮ್ಮ ಕೈ ಸೇರಲ್ಲ ಅಂತಾ ಆತಂಕಗೊಂಡಿದ್ದಾನೆ. ಇನ್ನು ಮೆಳೆ ಇಲ್ಲದ ಕಾರಣ ಬೋರವೆಲ್ಲಗಳಿಂದ ಹನಿ ನೀರಾವರಿಯಿಂದ ರೈತರು ಬೆಳೆ ಬೆಳೆಯುತ್ತಿದ್ದಾರೆ. 


ಇದನ್ನೂ ಓದಿ:  ಕರಣ್ ಜೋಹರ್ ಗೆ ನೀವು ಸಲಿಂಗಕಾಮಿಯೇ? ಎಂದು ಪ್ರಶ್ನಿಸಿದ ನೆಟ್ಟಿಗ...! ಕರಣ್ ನೀಡಿದ ಉತ್ತರವೇನು ಗೊತ್ತಾ?


ಇನ್ನು ತಿಂಗಳವಿಡಿ ಕಷ್ಟಪಟ್ಟು ರೈತ ಬೆಳೆದ ಬಳೆ ಮೊಳಕೆ ಒಡೆದ ಮಾರನೆ ದಿನವೆ ಜಿಂಕೆಗಳ ಹಿಂಡು ಬೆಳೆ ಚಿಗುರನ್ನ ಸಾಲು ಹಿಡಿದು ತಿಂದು ಮುಗಿಸುತ್ತಿವೆ. ಈ ಹಿನ್ನಲೆ ಜಿಂಕೆ ಹಾವಳಿಯಿಂದ ತಪ್ಪಿಸಿಕೊಳ್ಳಲು ಅನ್ನದಾತರು ಬೆಳಗ್ಗೆಯಿಂದ ರಾತ್ರಿವರೆಗೂ ಏನೇ ಹರಸಾಹಸ ಪಟ್ಟರು‌ ಜಿಂಕೆಗಳ ಹಾವಳಿ ತಪ್ಪಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಜಮೀನಿಗೆ ಜಿಂಕೆಗಳು ಬರದಂತೆ ಅದರ ಹಾವಳಿ ತಪ್ಪಿಸುವಂತೆ ಕಣ್ಣರಿಟ್ಟ ರೈತರು ಆಗ್ರಹಿಸಿದರು.


ಒಟ್ಟಾರೆಯಾಗಿ ರೈತರು ಸಾಲಶೂಲ ಮಾಡಿ ಬೆಳೆದ ಬೆಳೆಗೆ ಸಮಪರ್ಕ ಮಳೆ ಇಲ್ಲ ಅಂತಾ ಕೊರಗುತ್ತಿದ್ದರು. ಈ ನಡುವೆ ತಡವಾಗಿ ಎಂಟ್ರಿಕೊಟ್ಟ ಮುಂಗಾರು ಮಳೆ ರೈತನ ಮೊಗದಲ್ಲಿ ಅಲ್ಪ ಪ್ರಮಾಣದಲ್ಲಿ ಮಂದಹಾಸ ಮೂಡಿಸಿತ್ತು. ಆದ್ರೆ, ಜಿಂಕೆಗಳು ರೈತರ ಈ ಮಂದಹಾಸಕ್ಕೆ ಬೆಳೆದ ಬೆಳೆ ತಿನ್ನುವ ಮೂಲಕ ರೈತನಲ್ಲಿ ಆತಂಕ ಮೂಡಿಸಿದ್ದು ಮಾತ್ರ ಸುಳ್ಳಲ್ಲ. ಈಗ್ಲಾದ್ರು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತುಕೊಂಡು ರೈತರಿಗೆ ಜಿಂಕೆಗಳ ಹಾವಳಿಯಿಂದ ಮುಕ್ತಿ ನೀಡ್ತಾರಾ ಅಂತಾ ಕಾದು ನೋಡಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.