ಬೆಂಗಳೂರು: ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಗೆ ಅಂಜನಾದ್ರಿಯೇ ಮುಖ್ಯ ಅಜೆಂಡ. ಅದಕ್ಕಾಗಿಯೇ ರಾಜ್ಯ ಸರ್ಕಾರ ಈಗಾಗಲೇ ಅಂಜನಾದ್ರಿ ಅಭಿವೃದ್ಧಿಗೆ 120 ಕೋಟಿ ಅನುದಾನ ಘೋಷಿಸಿದೆ. ಇದರ ಬೆನ್ನಲ್ಲೇ ಅಯೋಧ್ಯೆಯನ್ನು ಅಭಿವೃದ್ಧಿ ಮಾಡಿದ ರೀತಿಯಲ್ಲಿಯೇ ಅಂಜನಾದ್ರಿಯನ್ನೂ ಅಭಿವೃದ್ಧಿ ಮಾಡಬೇಕು ಎಂಬ ಕೂಗು ಹೆಚ್ಚಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಚಾಲನೆ ಕೂಡಿಸಲು ಕೊಪ್ಪಳದ ನಾಯಕರು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಹನುಮ ಜನ್ಮಸ್ಥಳ ಅಂಜನಾದ್ರಿ ಅಭಿವೃದ್ಧಿಗೆ ಅಡಿಗಲ್ಲು ಹಾಕಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕರೆತರಲು ಅವಿರತ ಪ್ರಯತ್ನ ಮುಂದುವರೆದಿದೆ. 


COMMERCIAL BREAK
SCROLL TO CONTINUE READING

ಹನುಮ ಜನ್ಮ ಭೂಮಿ ಅಂಜನಾದ್ರಿ! 
ಹೌದು, ಈ ಹಿಂದೆ ಚರ್ಚೆಯಲ್ಲಿದ್ದ ರಾಮ ಜನ್ಮ ಭೂಮಿ ಅಯೋಧ್ಯೆಯಂತೆ ಸದ್ಯ ಚರ್ಚೆಯಲ್ಲಿರೋ ಧಾರ್ಮಿಕ ಸ್ಥಳ ಅಂದ್ರೆ ಅಂಜನಾದ್ರಿ ಬೆಟ್ಟ. ಶ್ರೀರಾಮನ ಜನ್ಮ ಭೂಮಿ  ಅಯೋಧ್ಯೆಯಂತೆ, ರಾಮನ ಬಂಟ ಹನುಮಂತನ ಜನ್ಮ ಭೂಮಿ ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಮಾಡುತ್ತೇವೆ ಅಂತಾ ಈಗಾಗಲೇ ರಾಜ್ಯ ಸರ್ಕಾರ ಘೋಷಿಸಿದೆ. ಅಂಜನಾದ್ರಿ ಅಭಿವೃದ್ಧಿಯ ಜಪದಲ್ಲೇ ಈ ಬಾರಿಯ 2023ರ ವಿಧಾನಸಭೆ ಚುನಾವಣೆ ನಡೆಸಲು ಬಿಜೆಪಿ ಮುಂದಾಗಿದೆ. ಈಗಾಗಲೇ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಯ ಕುರಿತ ಮಾಸ್ಟರ್ ಪ್ಲಾನ್ ಮತ್ತು ಬ್ಲೂ ಪ್ರಿಂಟ್ ಸಿದ್ದಗೊಂಡಿದ್ದು, ಚುನಾವಣೆಗೂ ಮೊದಲೇ ಅಭಿವೃದ್ಧಿಗೆ ಚಾಲನೆ ಸಿಗುವ ಸಾಧ್ಯತೆಯೂ ಇದೆ. ಇದಕ್ಕೆ ಇನ್ನಷ್ಟು ಹೆಚ್ಚು ಪೊಲಿಟಿಕಲ್ ಮೈಲೇಜ್ ನೀಡಲು, ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೂಲಕ ಚಾಲನೆ ಕೊಡಿಸಲು ಸ್ಥಳೀಯ ಶಾಸಕ- ಸಂಸದರು ಮುಂದಾಗಿದ್ದಾರೆ.


ಇದನ್ನೂ ಓದಿ- ಆನೆ-ಮಾನವ ಸಂಘರ್ಷ: ಪರಿಹಾರ ದ್ವಿಗುಣಗೊಳಿಸಲು ರಾಜ್ಯ ಸರ್ಕಾರ ಸಮ್ಮತಿ


ಕೊಪ್ಪಳ ನಗರದಲ್ಲಿ ಸಿದ್ಧಗೊಂಡಿರುವ ಜಿಲ್ಲಾ ಬಿಜೆಪಿ ಕಚೇರಿ ಉದ್ಘಾಟನೆಗೆ ಇದೇ ಡಿಸೆಂಬರ್ 15ಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಅಂಜನಾದ್ರಿ ಅಭಿವೃದ್ಧಿಗೆ ಚಾಲನೆ ನೀಡಲು ಪ್ರಧಾನಿ ಮೋದಿಯವರನ್ನು ಆಹ್ವಾನಿಸಲು ಮಾಸ್ಟರ್ ಪ್ಲಾನ್ ಸಿದ್ಧವಾಗುತ್ತಿದೆ. ಶಾಸಕ‌ ಪರಣ್ಣ ಮುನವಳ್ಳಿ ಮತ್ತು ಸಂಸದರ ಸಂಗಣ್ಣ ಕರಡಿ, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮುಂದೆ ವಿವರವಾಗಿ ತಿಳಿಸಲು ತಯಾರಿ ಮಾಡಿಕೊಂಡಿದ್ದಾರಂತೆ. ಎಲ್ಲ ಅಂದುಕೊಂಡಂತೆ ನಡೆದರೆ ಜನವರಿ ತಿಂಗಳಲ್ಲಿ ರಾಜ್ಯಕ್ಕೆ ಬರುವ ಪ್ರಧಾನಿ ನರೇಂದ್ರ ಮೋದಿ ಕೊಪ್ಪಳಕ್ಕೆ ಬಂದು ಅಂಜನಾದ್ರಿ ಅಭಿವೃದ್ಧಿಗೆ ಚಾಲನೆ ನೀಡುವ ಸಾಧ್ಯತೆ ಇದೇ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ- ಚಳಿಗಾಲದ ಅಧಿವೇಶದಲ್ಲಿ ವಕೀಲರ ರಕ್ಷಣಾ ಮಸೂದೆ ಮಂಡನೆ-ಸಿಎಂ ಬೊಮ್ಮಾಯಿ


ಅಂಜನಾದ್ರಿ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರೆ, ಕೇಂದ್ರ ಸರ್ಕಾರದಿಂದ ದೊಡ್ಡ ಮಟ್ಟದ ಅನುದಾನವೂ ಪಡೆಯಬಹುದು. ಜೊತೆಗೆ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ರಾಜಕೀಯವಾಗಿಯೂ ಹೆಚ್ಚು ಲಾಭವಾಗಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.