ಮಾಲೂರಿನಲ್ಲಿ ಮೋದಿ ನಿವಾಸದ ಅದ್ಧೂರಿ ಗೃಹ ಪ್ರವೇಶ

ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಕೃಷ್ಣಯ್ಯಶೆಟ್ಟಿ ನಂತರದಲ್ಲಿ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಂತಿರುವ ಬಿಜೆಪಿ ಮುಖಂಡ ಹೂಡಿ ವಿಜಯ್​ ಕುಮಾರ್ ಇಂದು ತಮ್ಮ ಮೋದಿ ನಿವಾಸದ ಗೃಹ ಪ್ರವೇಶ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಿದ್ದಾರೆ.

Written by - Zee Kannada News Desk | Last Updated : Dec 11, 2022, 05:00 PM IST
  • ಹತ್ತು ಹಲವು ಆಕರ್ಶಣೆಗಳೊಂದಿಗೆ ನಡೆದ ಮೋದಿ ನಿವಾಸ ಸದ್ಯ ಮಾಲೂರಿನಲ್ಲಿ ಆಕರ್ಶಣೆಯ ಕೇಂದ್ರವಾಗಿತ್ತು
  • ಹಲವು ಜನ ರಾಜ್ಯ ನಾಯಕರು ಮೋದಿ ನಿವಾಸಕ್ಕೆ ಬಂದು ಶುಭಹಾರೈಸಿದ್ದಾರೆ.
  • ಕ್ಷೇತ್ರದಲ್ಲೇ ಇರಬೇಕು ಜನರೊಟ್ಟಿಗೆ ಇರಬೇಕು ಅನ್ನೋ ನಿಟ್ಟಿನಲ್ಲಿ ಮೋದಿ ನಿವಾಸದ ಗೃಹಪ್ರವೇಶ ನೆರವೇರಿಸಿದ್ದಾರೆ.
ಮಾಲೂರಿನಲ್ಲಿ ಮೋದಿ ನಿವಾಸದ ಅದ್ಧೂರಿ ಗೃಹ ಪ್ರವೇಶ title=
screengrab

ಕೋಲಾರ : ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಕೃಷ್ಣಯ್ಯಶೆಟ್ಟಿ ನಂತರದಲ್ಲಿ ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಂತಿರುವ ಬಿಜೆಪಿ ಮುಖಂಡ ಹೂಡಿ ವಿಜಯ್​ ಕುಮಾರ್ ಇಂದು ತಮ್ಮ ಮೋದಿ ನಿವಾಸದ ಗೃಹ ಪ್ರವೇಶ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಿದ್ದಾರೆ.

ಇದನ್ನೂ ಓದಿ : ನಾನು 4 ಮಕ್ಕಳಿಗೆ ಜನ್ಮ ನೀಡಲು ಕಾಂಗ್ರೆಸ್ ಪಕ್ಷವೇ ಕಾರಣ”

ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು, ಕ್ಷೇತ್ರದ ಜನರ ಜೊತೆಗೆ ಹಲವು ಜನ ರಾಜ್ಯ ನಾಯಕರು ಮೋದಿ ನಿವಾಸಕ್ಕೆ ಬಂದು ಶುಭಹಾರೈಸಿದ್ದಾರೆ. ಹೂಡಿ ವಿಜಯ್​ ಕುಮಾರ್​ ಅವರು ವಿಧಾನಸಭಾ ಚುನಾವಣೆಯ ತಯಾರಿಯಲ್ಲಿದ್ದು ಇನ್ನು ಮುಂದೆ ಮಾಲೂರು ಕ್ಷೇತ್ರದಲ್ಲೇ ಇರಬೇಕು ಜನರೊಟ್ಟಿಗೆ ಇರಬೇಕು ಅನ್ನೋ ನಿಟ್ಟಿನಲ್ಲಿ ಮೋದಿ ನಿವಾಸದ ಗೃಹಪ್ರವೇಶ ನೆರವೇರಿಸಿದ್ದಾರೆ. ಮೋದಿ ನಿವಾಸವನ್ನು ತಮ್ಮ ಕ್ಷೇತ್ರದ ಸಾವಿರಾರು ಜನರೊಂದಿಗೆ, ನೂರಾರು ನಾಯಕರೊಂದಿಗೆ ಮೋದಿ ನಿವಾಸವನ್ನು ಪ್ರವೇಶ ಮಾಡಿದ್ದಾರೆ.

ಇದನ್ನೂ ಓದಿ : Himachal Pradesh: ನೂತನ ಮುಖ್ಯಮಂತ್ರಿಯಾಗಿ ಇಂದು ಸುಖ್ವಿಂದರ್ ಸಿಂಗ್ ಸುಖು ಪ್ರಮಾಣವಚನ

ಅತ್ಯಂತ ಅದ್ದೂರಿಯಾಗಿ ಆಯೋಜನೆ ಮಾಡಿದ್ದ ಮೋದಿ ನಿವಾಸದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಮನೆಗೆ ಅದ್ದೂರಿ ಅಲಂಕಾರ, ಮನೆಯ ಸ್ವಾಗತದಲ್ಲೇ ಭಾರತಾಂಭೆ ಬಾವಚಿತ್ರಕ್ಕೆ ವಿಶೇಷ ಅಲಂಕಾರ ವಿಶೇಷ ಪೂಜೆ, ನಂತರ ಮನೆಯಲ್ಲಿ ಮಂತ್ರ ಘೋಷ, ಮಂಗಳ ವಾದ್ಯ, ತಾಳ ಮೇಳ, ಚಂಡೆ ವಾಧ್ಯದೊಂದಿಗೆ ಸ್ವಾಗತ, ಒಳಗೆ ಶಾಸ್ತ್ರೋಕ್ತವಾಗಿ ನಡೆದ ಗೃಹ ಪ್ರವೇಶ, ಮಹಾಲಕ್ಷ್ಮೀ ಪೂಜೆ, ಸತ್ಯನಾರಾಯಣ ಪೂಜೆ, ಹೋಮ ಹವನ, ನಂತರ ಗೃಹ ಪ್ರವೇಶಕ್ಕೆ ಬರುವ ಸಾವಿರಾರು ಗಣ್ಯರಿಗೆ ಅಥಿತಿಗಳಿಗೆ ಮನೆಯ ಪಕ್ಕದಲ್ಲೇ ಹಾಕಿದ್ದ ಜರ್ಮನ್​ ಟೆಂಟ್​ ಅಡಿಯಲ್ಲಿ ಭರ್ಜರಿ ಭೂರಿ ಭೋಜನ, ಗೃಹ ಪ್ರವೇಶಕ್ಕೆ ಬಂದ ಮಹಿಳೆಯರಿಗೆ ಅರಿಶಿನ ಕುಂಕುಮವಿಟ್ಟು, ಕೈಗೆ ಬಳೆ ತೊಡಿಸಿ ಸತ್ಕರಿಸಿ, ಹೀಗೆ ಹತ್ತು ಹಲವು ಆಕರ್ಶಣೆಗಳೊಂದಿಗೆ ನಡೆದ ಮೋದಿ ನಿವಾಸ ಸದ್ಯ ಮಾಲೂರಿನಲ್ಲಿ ಆಕರ್ಶಣೆಯ ಕೇಂದ್ರವಾಗಿತ್ತು. ಇನ್ನು ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಸಾವಿರಾರು ಜನರ ಜೊತೆಗೆ ಸಂಸದ ಮುನಿಸ್ವಾಮಿ, ಸಚಿವ ಭೈರತಿ ಬಸವರಾಜು, ಚಲವಾದಿ ನಾರಾಯಣಸ್ವಾಮಿ, ವೈ.ಎ.ನಾರಾಯಣಸ್ವಾಮಿ. ಖ್ಯಾತ ಜ್ಯೋತಿಷಿ ಆನಂದ ಗುರೂಜಿ ಸೇರಿದಂತೆ ಹಲವಾರು ಗಣ್ಯರು ಆಗಮಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News