ಬೆಂಗಳೂರು: ವಿಶ್ವಸಂಸ್ಥೆಯ ಛೀಮಾರಿ ಮತ್ತು ನಿರ್ಬಂಧಗಳ ಸುರಿಮಳೆಯಾಗಿದ್ದರೂ, ರಷ್ಯಾ ಯುದ್ದ ನಿಲ್ಲಿಸಲು ಸಿದ್ದವಾಗಿಲ್ಲ. ಉಕ್ರೇನ್‌ನ ರಾಜಧಾನಿ ಕೈವ್ ಅನ್ನು ವಶಪಡಿಸಿಕೊಳ್ಳಲು ರಷ್ಯಾ ಪ್ರಮುಖ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಈ ಮಧ್ಯೆ, ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲು ಕೇಳಿಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ (Basavaraj S Bommai) ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಉಕ್ರೇನ್‌ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳ ರಕ್ಷಣೆ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ (Basavaraj S Bommai), ಉಕ್ರೇನ್ ನಿಂದ ಸಾಕಷ್ಟು ವಿದ್ಯಾರ್ಥಿಗಳು ರಾಜ್ಯಕ್ಕೆ ಮರಳಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವವರ ರಕ್ಷಣೆಗಾಗಿ ತೆರಳಿದ್ದ ವಿಮಾನಗಳಲ್ಲಿ ಇಂದು ಬೆಳಗ್ಗೆ 7 ನೇ ಫ್ಲೈಟ್ ಕೂಡ ಬಂದಿದೆ. ಎಲ್ಲಿ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ ಅಲ್ಲಿ ಅವರ ರಕ್ಷಣೆ ಮಾಡಲು ಕೇಳಿಕೊಂಡಿದ್ದೇವೆ ಎಂದು ತಿಳಿಸಿದರು.


ಇದನ್ನೂ ಓದಿ- ತವರಿಗೆ ಮರಳಿದ ಉಕ್ರೇನ್ ನಲ್ಲಿ ಸಿಲುಕಿದ್ದ ಏಳು ವಿದ್ಯಾರ್ಥಿಗಳು


ಮುಂಬೈ-ದೆಹಲಿಯಲ್ಲಿ ಇಬ್ಬರು ಅಧಿಕಾರಿಗಳ ನೇಮಕ:
ಕೇಂದ್ರ ಸರ್ಕಾರದ ವತಿಯಿಂದ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಈ ನಡುವೆ ವಿದ್ಯಾರ್ಥಿಗಳನ್ನು ಸುಗಮವಾಗಿ ರಾಜ್ಯಕ್ಕೆ ಕರೆತರುವ ನಿಟ್ಟಿನಲ್ಲಿ ಮುಂಬೈ ಮತ್ತು ದೆಹಲಿಯಲ್ಲಿ ಇಬ್ಬರು ಅಧಿಕಾರಿಗಳನ್ನು ನೇಮಿಸಲಾಗಿದೆ. ಯುದ್ಧ ಪ್ರದೇಶದಲ್ಲಿ (Russia-Ukrain War) ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳ ರಕ್ಷಣೆ ಕುರಿತಂತೆ ಇಂದು ವಿದೇಶಾಂಗ ಕಾರ್ಯದರ್ಶಿ ಜೊತೆ ಸಹ ಮಾತನಾಡಿದ್ದೇನೆ. ಅವರಿಗೆ ಊಟ ಉಪಚಾರ ವ್ಯವಸ್ಥೆ ಮಾಡಲು ಹೇಳಿದ್ದೇವೆ. ಅವರ ಲೊಕೇಷನ್ ಎಲ್ಲಾ ಕಳುಹಿಸಿಕೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಗಳು ಮಾಹಿತಿ ನೀಡಿದರು.


ಇದನ್ನೂ ಓದಿ- ಮೇಕೆದಾಟು ಹೋರಾಟದಲ್ಲಿ ರಾಹುಲ್ ಗಾಂಧಿ ಸಾಥ್ ನೀಡುತ್ತಿಲ್ಲವೇಕೆ?: ಬಿಜೆಪಿ


ಕಾಂಗ್ರೆಸ್ ಪಾದಯಾತ್ರೆ: ರಾಜಕೀಯ ಲಾಭಕ್ಕೆ ನಗರದಲ್ಲಿ ಪಾದಯಾತ್ರೆ:
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ (Mekedatu Padayatre) ಕುರಿತಂತೆಯೂ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಪಾದಯಾತ್ರೆಯಿಂದ ಬೆಂಗಳೂರಿಗೆ ಯಾವುದೇ ಉಪಯೋಗವಿಲ್ಲ.ಇವರ ರಾಜಕೀಯ ಇಚ್ಚಶಕ್ತಿಯಿಂದ ಬೆಂಗಳೂರರಿಗೆ ಕಷ್ಟ ಕೊಡ್ತಿದ್ದಾರೆ.ಅದು ಒಂದು ಅಲ್ಲ 3 ಮೂರು ದಿನ ಬೆಂಗಳೂರಲ್ಲಿ ಪಾದಯಾತ್ರೆ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


ಬೆಂಗಳೂರು ಟ್ರಾಫಿಕ್ ನಿಮ್ಗೆ ಗೊತ್ತಿದೆ, ಕಾಂಗ್ರೆಸ್ ಪಾದಯಾತ್ರೆಯಿಂದ ಇನ್ನಷ್ಟು ಟ್ರಾಫಿಕ್ ಚಾಮ್ ಆಗಲಿದೆ. ಫ್ರೀಡಂ ಪಾರ್ಕ್ ಗೆ ಬಂದು ಪಾದಯಾತ್ರೆ ಮುಗಿಸಿಬಹುದಿತ್ತು.ಆದ್ರೆ ಇವರು ರಾಜಕೀಯಕ್ಕಾಗಿ ಬೆಂಗಳೂರಲ್ಲಿ ಮೂರು ದಿನ ಪಾದಯಾತ್ರೆ ಮಾಡ್ತಿದ್ದಾರೆ ಎಂದು ಸಿಎಂ ವಿರೋಧ ಪಕ್ಷದ ವಿರುದ್ದ ಟೀಕಾಪ್ರಹಾರ ನಡೆಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.