ಮೇಕೆದಾಟು ಹೋರಾಟದಲ್ಲಿ ರಾಹುಲ್ ಗಾಂಧಿ ಸಾಥ್ ನೀಡುತ್ತಿಲ್ಲವೇಕೆ?: ಬಿಜೆಪಿ

ಒಂದು ಕಡೆ ಓಟಿಗಾಗಿ ತಮಿಳುನಾಡು ಪರ ಕಾಂಗ್ರೆಸ್ ಪಕ್ಷದ ನಾಯಕರು ಅಲ್ಲಿನ ನಾಯಕರ ಕೈ ಹಿಡಿಯುತ್ತಾರೆ, ಮತ್ತೊಂದೆಡೆ ನೀರಿಗಾಗಿ ಪರದಾಡುತ್ತಿರುವ ಕರ್ನಾಟಕದ ಜನತೆಗೆ ಕೈಕೊಡುತ್ತಿದ್ದಾರೆ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.

Written by - Zee Kannada News Desk | Last Updated : Feb 28, 2022, 09:21 PM IST
  • ಮೇಕೆದಾಟು ಯೋಜನೆ ವಿಚಾರವಾಗಿ ರಾಹುಲ್ ಗಾಂಧಿ ಕರ್ನಾಟಕ ಜೊತೆ ಯಾವಾಗ ನಿಲ್ಲುತ್ತಾರೆ?
  • ತಮಿಳುನಾಡು ಜೊತೆ ರಾಹುಲ್ ಗಾಂಧಿ ಎಂದು ಕಾಂಗ್ರೆಸ್ ಪ್ರಾಯೋಜಿತ ಟ್ವಿಟ್ಟರ್ ಟ್ರೆಂಡ್ ನಡೆಯುತ್ತಿದೆ
  • ತಮಿಳುನಾಡು ಸಿಎಂ ಜೊತೆಗಿದ್ದ ರಾಹುಲ್ ಗಾಂಧಿ ಮೇಕೆದಾಟು ಯೋಜನೆ ಬಗ್ಗೆ ಆಗ್ರಹಿಸಬಹುದಿತ್ತಲ್ಲವೇ?
ಮೇಕೆದಾಟು ಹೋರಾಟದಲ್ಲಿ ರಾಹುಲ್ ಗಾಂಧಿ ಸಾಥ್ ನೀಡುತ್ತಿಲ್ಲವೇಕೆ?: ಬಿಜೆಪಿ title=
ಮೇಕೆದಾಟು ಹೋರಾಟದಲ್ಲಿ ರಾಹುಲ್ ಸಾಥ್ ನೀಡುತ್ತಿಲ್ಲವೇಕೆ?

ಬೆಂಗಳೂರು: ಮೇಕೆದಾಟು ಯೋಜನೆ(Mekedatu Project) ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ಕರ್ನಾಟಕ ಜೊತೆ ಯಾವಾಗ ನಿಲ್ಲುತ್ತಾರೆ? ಅಂತಾ ಬಿಜೆಪಿ ಟ್ವೀಟ್ ಮಾಡಿದೆ. #ಸುಳ್ಳಿನಜಾತ್ರೆ ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ ಮೇಕೆದಾಟು ಯೋಜನೆ ಜಾರಿಗಾಗಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪಾದಯಾತ್ರೆಯನ್ನು ಟೀಕಿಸಿದೆ.

‘ತಮಿಳುನಾಡು ಜೊತೆ ರಾಹುಲ್ ಗಾಂಧಿ(Rahul Gandhi) ಎಂದು ಕಾಂಗ್ರೆಸ್ ಪ್ರಾಯೋಜಿತ ಟ್ವಿಟ್ಟರ್ ಟ್ರೆಂಡ್ ನಡೆಯುತ್ತಿದೆ. ರಾಹುಲ್ ಗಾಂಧಿ ಅವರು ಕರ್ನಾಟಕ ಜೊತೆ ಯಾವಾಗ ನಿಲ್ಲುತ್ತಾರೆ? ಮೇಕೆದಾಟು ಹೋರಾಟದಲ್ಲಿ ಸಾಥ್ ನೀಡುತ್ತಿಲ್ಲವೇಕೆ?’ ಅಂತಾ ಬಿಜೆಪಿ ಪ್ರಶ್ನಿಸಿದೆ.

ಇದನ್ನೂ ಓದಿ: DK Suresh : ಮೇಕೆದಾಟು ಪಾದಯಾತ್ರೆ :ಬಂಟಿಂಗ್- ಬ್ಯಾನರ್ ತೆರವು; ಡಿಕೆ ಸುರೇಶ್ ಅಧಿಕಾರಿಗೆ ಆವಾಜ್! 

ಮೇಕೆದಾಟು ಪಾದಯಾತ್ರೆ ಮೂಲಕ ಬೆಂಗಳೂರು ಕಡೆ ಹೊರಟಿರುವ ಡಿಕೆಶಿ & ಸಿದ್ದರಾಮಯ್ಯ(DK Shivakumar and Siddaramaiah) ಅವರೇ ತಮಿಳುನಾಡಿನಲ್ಲಿ ನಿಮ್ಮ ಯುವರಾಜರು ತಮಿಳುನಾಡಿನ ಸಿಎಂ ಅವರೊಂದಿಗಿದ್ದರು. ಅವರ ಬಳಿಯೇ ಮೇಕೆದಾಟು ಯೋಜನೆ ಬಗ್ಗೆ ಆಗ್ರಹಿಸಬಹುದಿತ್ತಲ್ಲವೇ?’ ಅಂತಾ ಪ್ರಶ್ನಿಸಿದೆ.

‘ಒಂದು ಕಡೆ ಓಟಿಗಾಗಿ ತಮಿಳುನಾಡು ಪರ ಕಾಂಗ್ರೆಸ್ ಪಕ್ಷದ ನಾಯಕರು ಅಲ್ಲಿನ ನಾಯಕರ ಕೈ ಹಿಡಿಯುತ್ತಾರೆ, ಮತ್ತೊಂದೆಡೆ ನೀರಿಗಾಗಿ ಪರದಾಡುತ್ತಿರುವ ಕರ್ನಾಟಕದ ಜನತೆಗೆ ಕೈಕೊಡುತ್ತಿದ್ದಾರೆ. ಡಿಕೆಶಿಯವರೇ ನಿಮ್ಮ ಮೇಕೆದಾಟು ಪಾದಯಾತ್ರೆ(Mekedatu Padayatre) ಬರಿ ಪ್ರಹಸನವೇ?’ ಅಂತಾ ಬಿಜೆಪಿ ವ್ಯಂಗ್ಯವಾಡಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಹೆದ್ದಾರಿ ಪಕ್ಕ ಜಲಶಕ್ತಿ ಯೋಜನೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

‘ಕಾಂಗ್ರೆಸ್ ನಾಯಕರೇ ದೆಹಲಿಯ ಭೇಟಿಯ ವೇಳೆ ರಾಹುಲ್ ಗಾಂಧಿ ಅವರ ಬಳಿ ಮೇಕೆದಾಟು ಪಾದಯಾತ್ರೆ ಬಗ್ಗೆ ತಿಳಿಸಿದ್ದೀರಾ? ರಾಜ್ಯ ಕಾಂಗ್ರೆಸ್ ನಾಯಕರನ್ನು ರಾಹುಲ್ ಗಾಂಧಿ ಅವರು ಗಣನೆಗೆ ತೆಗೆದುಕೊಳ್ಳುತ್ತಿಲ್ಲ, ಇಲ್ಲದಿದ್ದಲ್ಲಿ ಸ್ಟಾಲಿನ್ ಜೊತೆ ಅವರ ಪರವಾಗಿ ಧ್ವನಿ ಎತ್ತುತ್ತಿದ್ದರು’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News