Govind Karjol: ರಾಜ್ಯದ ಉಪಮುಖ್ಯಮಂತ್ರಿಗೆ `ಕೊರೋನಾ ಪಾಸಿಟಿವ್`..।
ಮಾರ್ಚ್ 10 ಮತ್ತು 11 ರಂದು ಸಿಎಂ ಬಿಎಸ್ ಯಡಿಯೂರಪ್ಪ ಅವರ ಜೊತೆ ಮಸ್ಕಿ ಕ್ಷೇತ್ರದಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ
ಬೆಂಗಳೂರು: ರಾಜ್ಯದ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರಿಗೆ ಮಹಾ ಮಾರಿ ಕೊರೋನಾ ದೃಢಪಟ್ಟಿದೆ
ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಗೋವಿಂದ ಕಾರಜೋಳ(Govind Karjol), ಕಳೆದ ಎರಡು ದಿನಗಳಿಂದ ನಾನು ಕೊರೋನಾ ನಿವಾರಣೆಗಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದೇನೆ, ಹಾಗಾಗಿ ನನಗೆ ಮಸ್ಕಿ ಚುನಾವಣಾ ಪ್ರಚಾರಕ್ಕೆ ಬರಲಾಗುವುದಿಲ್ಲ ಎಂದು ಅಣವೀ ಪಾತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ : BS Yediyurappa: 'ಸಾರಿಗೆ ಸಿಬ್ಬಂದಿಗಳೇ ಹಠಮಾರಿಗಳಾಗಬೇಡಿ, ಮುಷ್ಕರ ಕೈಬಿಡಿ'
ಮಾರ್ಚ್ 10 ಮತ್ತು 11 ರಂದು ಸಿಎಂ ಬಿಎಸ್ ಯಡಿಯೂರಪ್ಪ ಅವರ ಜೊತೆ ಮಸ್ಕಿ ಕ್ಷೇತ್ರದಲ್ಲಿ ನಮ್ಮ ಬಿಜೆಪಿ(BJP) ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವುದಿತ್ತು. ಆದರೆ ನನಗೆ ಕೋವಿಡ್ ದೃಢಪಟ್ಟಿರುವ ಕಾರಣ ನಾನು ಪ್ರಚಾರ ಕಾರ್ಯಕ್ಕೆ ಬರಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
Bus strike: ಸಾರಿಗೆ ನೌಕರರ ಮುಷ್ಕರ; ನಾಳೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಕರೆದ ಸಿಎಂ!
ಸಧ್ಯ ನನಗೆ ಆಸ್ಪತ್ರೆ(Hospital)ಯಲ್ಲಿ ಅನುಭವಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಈಗ ನನ್ನ ಅರೋಗ್ಯ ಸುಧಾರಿಸುತ್ತಿದೆ.
ಇದನ್ನೂ ಓದಿ : Bengaluru in Section 144: ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿ! ಜಿಮ್, ಸ್ವಿಮಿಂಗ್ ಫೂಲ್ ಏಪ್ರಿಲ್ 20 ರವರೆಗೆ ಬಂದ್!
ಮಸ್ಕಿ ವಿಧಾನ ಸಭಾ ಕ್ಷೇತ್ರ(Maski ByElection)ದ ಮತದಾರರಿಗೆ ಕೊಟ್ಟ ಮಾತನ್ನು ಇಂದಿನ ಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಲಿಲ್ಲ, ಇದಕ್ಕಾಗಿ ವಿಷಾದಿಸಿ ಮತದಾರರ ಕ್ಷೇಮೆ ಕೋರುತ್ತೇನೆ ಎಂದು ಕಾರಜೋಳ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : Karnataka Congress: 'ಬಿಜೆಪಿ ಸರ್ಕಾರ ಸಾರಿಗೆ ನೌಕರರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.