BS Yediyurappa: 'ಸಾರಿಗೆ ಸಿಬ್ಬಂದಿಗಳೇ ಹಠಮಾರಿಗಳಾಗಬೇಡಿ, ಮುಷ್ಕರ ಕೈಬಿಡಿ'

ಪ್ರಸ್ತುತ ಸಂದರ್ಭದಲ್ಲಿ ನಿಮಗೆ 6 ನೇ ವೇತನ ಆಯೋಗ ಜಾರಿ ಮಾಡಲು ಸಾಧ್ಯವಿಲ್ಲ

Last Updated : Apr 9, 2021, 03:46 PM IST
  • ಪ್ರಸ್ತುತ ಸಂದರ್ಭದಲ್ಲಿ ನಿಮಗೆ 6 ನೇ ವೇತನ ಆಯೋಗ ಜಾರಿ ಮಾಡಲು ಸಾಧ್ಯವಿಲ್ಲ
  • ಕೊರೋನಾದಿಂದ ಸಾರಿಗೆ ಇಲಾಖೆ ನಷ್ಟದಲ್ಲಿದೆ
  • ಕಳೆದ ವರ್ಷದಿಂದ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ ಸಂಬಳ ನೀಡುತ್ತಿದೆ.
BS Yediyurappa: 'ಸಾರಿಗೆ ಸಿಬ್ಬಂದಿಗಳೇ ಹಠಮಾರಿಗಳಾಗಬೇಡಿ, ಮುಷ್ಕರ ಕೈಬಿಡಿ' title=

ಬೆಂಗಳೂರು: 6 ನೇ ವೇತನ ಆಯೋಗದ ಜರಿ ಮಾಡುವಂತೆ ಬೇಡಿಕೆ ಇಟ್ಟು ಕಳೆದ ಮೂರು ದಿನಗಳಿಂದ  ಸಾರಿಗೆ ಸಿಬ್ಬಂದಿಗಳು ಮುಷ್ಕರ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಅವರ ಬೇಡಿಕೆಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರಕ್ಕೆ ಬರುತ್ತಿಲ್ಲ. 

ಇಂದು ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa), ಸಾರಿಗೆ ಸಿಬ್ಬಂದಿಗಳೆ ಇಂದಾದರೂ ಕರ್ತವ್ಯಕ್ಕೆ ಹಾಜರಾಗಿ.  ಹಠಮಾರಿಗಳಾಗಬೇಡಿ, ಮುಷ್ಕರ ಕೈಬಿಡಿ. ಯಾರದೂ ಮಾತು ಕೇಳಿ ಮೊಂಡುತನಕ್ಕೆ ಇಳಿಯಬೇಡಿ  ಮನವಿ ಮಾಡಿದ್ದಾರೆ.

ಇದನ್ನೂ ಓದಿ- Bengaluru in Section 144: ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿ! ಜಿಮ್, ಸ್ವಿಮಿಂಗ್ ಫೂಲ್ ಏಪ್ರಿಲ್ 20 ರವರೆಗೆ ಬಂದ್!

ರಾಜ್ಯಾದ್ಯಂತ ಸರ್ಕಾರಿ ಬಸ್(Bus) ಸೇವೆ ಬಂದ್ ಆಗಿವೆ. ಪ್ರತಿದಿನವೂ ಅವುಗಳನ್ನೇ ಅವಲಂಬಿಸಿರುವ ಅನೇಕ ನಾಗರಿಕರ ಜನ-ಜೀವನ ಅಸ್ತವ್ಯಸ್ತವಾಗಿದೆ. ಈ ಬಿಕ್ಕಟ್ಟನ್ನು ಎದುರಿಸಲು ಅಧಿಕಾರಿಗಳು ಖಾಸಗಿ ಬಸ್‌ಗಳ ಮೊರೆ ಹೋಗಿದ್ದಾರೆ. 

ಇದನ್ನೂ ಓದಿ- Bus strike: ಸಾರಿಗೆ ನೌಕರರ ಮುಷ್ಕರ; ನಾಳೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಕರೆದ ಸಿಎಂ!

ಪ್ರಸ್ತುತ ಸಂದರ್ಭದಲ್ಲಿ ನಿಮಗೆ 6 ನೇ ವೇತನ ಆಯೋಗ(6th Pay Commission) ಜಾರಿ ಮಾಡಲು ಸಾಧ್ಯವಿಲ್ಲ. ಇದನ್ನ ನಿರೀಕ್ಷಿಸುವುದು ತಪ್ಪು ಎಂದು ಹೇಳಿದ್ದಾರೆ.

ಇದನ್ನೂ ಓದಿ- Bus Strike: 'ಮುಷ್ಕರ ನಿರತ ಸಾರಿಗೆ ನೌಕರರನ್ನ ಮಾತುಕತೆಗೆ ಕರೆಯುವುದಿಲ್ಲ'

ನಿಮ್ಮ 9 ಬೇಡಿಕೆ(Demands)ಗಳಲ್ಲಿ 8  ಬೇಡಿಕೆಗಳನ್ನ ಈಡೇರಿಸಲಾಗಿದೆ. ಇನ್ನೇನು ಮಾತನಾಡಲಾಗುವುದಿಲ್ಲ? ಈ ಎಂಟು ಬೇಡಿಕೆಗಳನ್ನು ಈಡೇರಿಸುವಲ್ಲಿ ನಮ್ಮ ಯಾವುದೇ ನ್ಯೂನತೆಗಳು ಇಲ್ಲ. 

ಇದನ್ನೂ ಓದಿ- KSRTC Strike: ಇಂದಿನಿಂದ ಸಾರಿಗೆ ನೌಕರರ ಮುಷ್ಕರ, ಬಸ್ ಸಂಚಾರದಲ್ಲಿ ವ್ಯತ್ಯಯ

ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನು ತಿಳಿಸಿ, ಯಡಿಯೂರಪ್ಪ ರಾಜ್ಯದ ಆದಾಯದ ಶೇಕಡಾ 85 ರಷ್ಟು ನೌಕರರ ಸಂಬಳ(Salary) ಮತ್ತು ಪಿಂಚಣಿಗಳಂತಹ ಯೋಜನೇತರ ವೆಚ್ಚಗಳನ್ನ ಬರೆಸುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ- Karnataka Congress: 'ಬಿಜೆಪಿ ಸರ್ಕಾರ ಸಾರಿಗೆ ನೌಕರರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ' 

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಅವರು ಶಾಸಕಾಂಗ ಅಧಿವೇಶನದಲ್ಲಿ ಅಭಿವೃದ್ಧಿಗೆ ಸರ್ಕಾರ ಕೇವಲ 15 ಶೇಕಡಾ ಹಣವನ್ನು ಹೊಂದಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಾರಿಗೆ ನೌಕರರು ಇಷ್ಟೊಂದು ಕಠಿಣವಾಗಿ ವರ್ತಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ- Sarkari Naukri 2021: 10ನೇ ತರಗತಿ ಪಾಸದವರಿಗೆ KSCCF ಯ ಈ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೊರೋನಾದಿಂದ ಸಾರಿಗೆ ಇಲಾಖೆ ನಷ್ಟದಲ್ಲಿದೆ. ಕಳೆದ ವರ್ಷದಿಂದ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ  ಸಂಬಳ ನೀಡುತ್ತಿದೆ. ಇಲ್ಲಿಯ್ವರೆಗೆ ಒಟ್ಟು 2,300 ಕೋಟಿ ರೂ.ಗಳನ್ನ ನೀಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ- HD Deve Gowda: ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಬಿಡುಗಡೆ!

ಕೊರೋನಾ ದಿಂದ ಇಡೀ ದೇಶವೇ ಕಂಗೆಟ್ಟು ಹೋಗಿದೆ. ಅಂತದ್ರಲ್ಲಿ ನೀವು ಮುಷ್ಕರ ನಡೆಸುತ್ತಿರುವುದು ಅಷ್ಟು ಸರಿ? ಸಾರಿಗೆ ನೌಕರರೇ ನಿಮ್ಮನ್ನು ನೀವೇ ಕೇಳಿಕೊಳ್ಳಬೇಕು ”ಎಂದು ಯಡಿಯೂರಪ್ಪ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News