ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ  ಗಂಡ-ಹೆಂಡತಿ ಒಂದೇ ಠಾಣೆಯಲ್ಲಿ ಕೆಲಸ‌ ಮಾಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಜಿಪಿ‌ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಕೋರಮಂಗಲ ಕೆಎಸ್ ಆರ್ ಪಿ‌ ಮೈದಾನದಲ್ಲಿ ನಡೆದ ಪೊಲೀಸ್ ಕವಾಯತಿನಲ್ಲಿ ಭಾಗವಹಿಸಿ ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮದಿನ ಸಲುವಾಗಿ ಗೌರವ ವಂದನೆ‌ ಸಲ್ಲಿಸಿ ಬಳಿಕ‌ ಮಾತನಾಡಿದ‌ ಡಿಜಿಪಿ‌ ಪ್ರವೀಣ್ ಸೂದ್, ಪೊಲೀಸರ ಕಲ್ಯಾಣಕ್ಕಾಗಿ ಹಲವು ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಪತಿ-ಪತ್ನಿ  ಪೊಲೀಸರಾಗಿದ್ದರೆ ಒಂದೇ ಕಡೆ ಕಾರ್ಯನಿರ್ವಹಿಸಲು ಅವಕಾಶ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.


ಈ ಹಿಂದೆ ಒಂದೇ ಕಡೆ ಕೆಲಸ‌ ಮಾಡುವ ಅವಕಾಶವಿತ್ತು‌. ಬಳಿಕ ನಾನಾ ಕಾರಣಗಳಿಂದ ಸ್ಥಗಿತವಾಗಿತ್ತು‌. ಹೀಗಾಗಿ ಮತ್ತೆ ಅನುಮತಿ ನೀಡಲು ಕೇಳಿದ್ದು ಸರ್ಕಾರ ಮನವಿ ಪೂರೈಸುವ ಸಾಧ್ಯತೆಯಿದೆ ಎಂದು ಆಶ್ವಾಸನೆ ನೀಡಿದರು.


ಇದನ್ನೂ ಓದಿ- ಗುಜರಾತಿನಲ್ಲೂ #40PercentSarkara ಸ್ಥಾಪಿಸಿದ್ದೀರಾ ಪ್ರಧಾನಿ ಮೋದಿಯವರೇ?: ಕಾಂಗ್ರೆಸ್


ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್  ಹುಟ್ಟುಹಬ್ಬ ದಿನ. ಅವರ ಕೊಡುಗೆ ದೇಶಕ್ಕೆ ಬಹಳ ದೊಡ್ಡದು. ದೇಶವನ್ನ ಒಟ್ಟುಗೂಡಿಸಿದ ಹೆಗ್ಗಳಿಕೆ ಅವರದು. ಅಂತಹ ಒಗ್ಗಟ್ಟನ್ನ ಒಡೆಯಲು ಇಂದು ಕೆಲವು ದುಷ್ಟ ಶಕ್ತಿಗಳು ಪ್ರಯತ್ನ ಮಾಡುತ್ತಿವೆ. ಅದನ್ನ ತಡೆಯುವ ಕೆಲಸ ಪ್ರತಿಯೊಬ್ಬ ನಾಗರೀಕರ ಮೇಲಿದೆ. ಅದರಲ್ಲಿ ಪೊಲೀಸರ ಮೇಲೆ ದೊಡ್ಡ ಜವಾಬ್ದಾರಿಯಿದೆ ಎಂದರು.


ಈ ವರ್ಷ 116 ಪೊಲೀಸ್ ಠಾಣೆಗಳ ನಿರ್ಮಾಣ:
28 ಕೋಟಿ ವೆಚ್ಚದಲ್ಲಿ ಪೊಲೀಸ್ ಜೀಪ್, ಮೋಟಾರ್ ಬೈಕ್ ಹಾಗೂ ಬಸ್ ಖರೀದಿ ಮಾಡಲಾಗಿದೆ. ಈಗಾಗಲೆ ಹಲವು ಪೊಲೀಸ್ ಸ್ಟೇಷನ್ ಗಳನ್ನ ನಿರ್ಮಾಣ ಮಾಡಲಾಗಿದೆ. ಈಗಾಗಲೆ 10 ಸಾವಿರ ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅದರಲ್ಲಿ 2 ಸಾವಿರ ಮನೆಗಳ ನಿರ್ಮಾಣ ಕಾರ್ಯ ಮುಂದುವರೆದಿದೆ. ಈ ವರ್ಷ 116 ಪೊಲೀಸ್ ಠಾಣೆಗಳು ನಿರ್ಮಾಣ ಹಂತದಲ್ಲಿದೆ. ಯಾವ ಬಾರಿಯೂ ಇಷ್ಟರ ಮಟ್ಟಿಗೆ ಪೊಲೀಸ್ ಠಾಣೆ ನಿರ್ಮಾಣದ ಕಾರ್ಯ ನಡೆದಿರಲಿಲ್ಲ ಎಂದವರು ತಿಳಿಸಿದರು.


ಇದನ್ನೂ ಓದಿ- Solar Scam : ಸೋಲಾರ್ ಹಗರಣ ತನಿಖೆ, ಕಾದು ನೋಡಿ ಎಂದ್ರು ಸಿಎಂ ಬೊಮ್ಮಾಯಿ
 
ಇನ್‌ಸ್ಪೆಕ್ಟರ್ ನಂದೀಶ್ ಸಾವು ಪ್ರಕರಣ ಸಂಬಂಧ ನಿನ್ನೆ ಸಿಎಂ ಸೂಚನೆ ಕೊಟ್ಟಿದಾರೆ. ಅದರಂತೆ ನಾವು ತನಿಖೆ ಮಾಡುತ್ತಿದ್ದೇವೆ. ಇಲಾಖಾ ಮಟ್ಟದಲ್ಲಿ ತನಿಖೆ ಮಾಡಲು ಸೂಚನೆ ನೀಡಿದ್ದೇನೆ ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.