`ಅಪೂರ್ಣ ರಾಮ ಮಂದಿರದಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದರಿಂದಲೇ ಲೋಕಸಭಾ ಫಲಿತಾಂಶದಲ್ಲಿ ವ್ಯತ್ಯಾಸ`
ಸಂವಿಧಾನವನ್ನು ಎಳ್ಳು ಕಾಳಿನಷ್ಟು ಕೂಡ ತಿರುಚಲು ಕಾಂಗ್ರೆಸ್ ಅವಕಾಶ ಕೊಡುವುದಿಲ್ಲ.ಮುಸ್ಲಿಂ ಮೀಸಲಾತಿ ಮೊದಲಿಂದಲೂ ಇದೆ. ಬಿಜೆಪಿಯವರ ಅಧಿಕಾರಾವಧಿಯಲ್ಲೂ ಇತ್ತು. ಮೋದಿಯವರು ಹತಾಷರಾಗಿದ್ದು, ಅನಗತ್ಯವಾಗಿ ಪ್ರಸ್ತಾಪಿಸುತ್ತಿದ್ದಾರೆ.
ವಿಜಯಪುರ: ಲೋಕಸಭಾ ಚುನಾವಣೆಯ ನಂತರ ನಮ್ಮ ಸರ್ಕಾರ ಪತನವಾಗಲಿದೆ ಎಂಬುದು ಅಸಾಧ್ಯದ ಮಾತು! ಈ ಸರ್ಕಾರ ಬೀಳಿಸುವುದು ಸುಲಭವಲ್ಲ! ಕನಿಷ್ಠವೆಂದರೂ ನಮ್ಮ ಪಕ್ಷದಿಂದ 65 ಶಾಸಕರು ತೆರಳಬೇಕು. ಒಂದಿಬ್ಬರು ಶಾಸಕರು ಕೂಡ ಹೋಗುವುದಿಲ್ಲ! ಬದಲಿಗೆ ಬಿಜೆಪಿ, ಜೆಡಿಎಸ್ ನ ಹಲವು ಶಾಸಕರೇ ನಮ್ಮತ್ತ ಬರಲು ಸಿದ್ದವಾಗಿದ್ದಾರೆ. ಲೋಕಸಭಾ ಚುನಾವಣೆಯ ನಂತರ ರಾಜಕೀಯ ಧೃವೀಕರಣ ಆಗಬಹುದು ಎಂದು ಸಚಿವ ಎಂ.ಪಾಟೀಲ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುಂದುವರಿದ ರೇವಣ್ಣ ಚಡಪಡಿಕೆ
ಮಾಧ್ಯಮಗಳ ಜೊತೆ ಮಾತನಾಡಿದ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠವೆಂದರೂ 20 ಸ್ಥಾನಗಳನ್ನು ಗೆಲ್ಲಲಿದೆ.ಗ್ಯಾರಂಟಿಗಳು ‘ಅಂಡರ್ ಕರೆಂಟ್’ ನಂತೆ ನಮ್ಮ ಪಕ್ಷದ ಪರವಾಗಿ ಕೆಲಸ ಮಾಡಿದೆ. ಉತ್ತರ ಕರ್ನಾಟಕ , ಕರಾವಳಿ ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿಯೇ ಪರಿಣಾಮಕಾರಿಯಾಗಿದ್ದು, ಬಡ, ಸಾಮಾನ್ಯ ಮಹಿಳೆಯರು ಕಾಂಗ್ರೆಸ್ ಪರವಾದ ಒಲವು ತೋರಿಸಿದ್ದಾರೆ.ವಿಜಯಪುರದ ಕಾಂಗ್ರೆಸ್ ಅಭ್ಯರ್ಥಿ ಕನಿಷ್ಠವೆಂದರು 1ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ.
ಇದನ್ನೂ ಓದಿ: ಬಡವರ ಪರವಾಗಿ ಮೋದಿ ಹತ್ತು ವರ್ಷ ಪ್ರಧಾನಿಯಾಗಿ ಏನೂ ಮಾಡಿಲ್ಲ-ಸಿಎಂ ಸಿದ್ದರಾಮಯ್ಯ
ಪ್ರಜ್ವಲ್ ರೇವಣ್ಣ ಪ್ರಕರಣವನ್ನು ತನಿಖೆ ಮಾಡಲು ಈಗಾಗಲೆ ನಮ್ಮ ಸರ್ಕಾರ SIT ರಚನೆ ಮಾಡಿದ್ದು, ಅವರು ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲಿದ್ದಾರೆ ಎಂದು ಹೇಳಿದರು.ಸಂವಿಧಾನವನ್ನು ಎಳ್ಳು ಕಾಳಿನಷ್ಟು ಕೂಡ ತಿರುಚಲು ಕಾಂಗ್ರೆಸ್ ಅವಕಾಶ ಕೊಡುವುದಿಲ್ಲ.ಮುಸ್ಲಿಂ ಮೀಸಲಾತಿ ಮೊದಲಿಂದಲೂ ಇದೆ. ಬಿಜೆಪಿಯವರ ಅಧಿಕಾರಾವಧಿಯಲ್ಲೂ ಇತ್ತು. ಮೋದಿಯವರು ಹತಾಷರಾಗಿದ್ದು, ಅನಗತ್ಯವಾಗಿ ಪ್ರಸ್ತಾಪಿಸುತ್ತಿದ್ದಾರೆ.
ರಾಮಮಂದಿರದ ವಿಷಯದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿಲ್ಲ. ಶ್ರೀ ರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಮಾಡಲು ಪದ್ಧತಿಗಳಿವೆ, ಆದರೆ ಅಪೂರ್ಣ ಮಂದಿರದಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡಿದ್ದರಿಂದಲೇ ಫಲಿತಾಂಶ ವ್ಯತ್ಯಾಸವಾಗಬಹುದು.ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ. ಪಕ್ಷದ ಸೂಚನೆಯಂತೆ ಪಿತ್ರೋಡಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.