ಬೆಂಗಳೂರು : ಗೋಹತ್ಯೆ ನಿಷೇಧ ಸಮರ್ಥಿಸಿ ಮಾತಾಡುವ  ಗೋವಾ ಉಸ್ತುವಾರಿ ಸಿ ಟಿ ರವಿಯವರು ಗೋವಾದಲ್ಲಿ ಗೋ ಮಾಂಸ ಸರಬರಾಜಿಗೆ ಟೆಂಡರ್ ಪಡೆದಿದ್ದಾರೆಯೆ? ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.  ಕರ್ನಾಟಕದಂತೆ ಗೋವಾದಲ್ಲೂ ಗೋ ಹತ್ಯೆ ನಿಷೇಧ ಮಾಡಿಸುವ ಧೈರ್ಯ ಸಿ ಟಿ ರವಿಯವರಿಗೆ ಯಾಕಿಲ್ಲ?  ಅಲ್ಲದೆ ಇಲ್ಲಿ  ಪೂಜ್ಯನೀಯವಾದ ಗೋವು ಗೋವಾದಲ್ಲೇನು? ಎಂದು ದಿನೇಶ್ ಗುಂಡೂರಾವ್ ಪ್ರಶ್ನೆ ಎತ್ತಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ದ್ವಂದ್ವ ನಿಲುವಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 
 


COMMERCIAL BREAK
SCROLL TO CONTINUE READING

ಕರ್ನಾಟಕದಲ್ಲಿ ಗೋಹತ್ಯೆ ನಿಷೇಧದ ಬಗ್ಗೆ ಕಠಿಣ ಕಾನೂನು (Cow Slaughter Bill) ರೂಪಿಸಿರುವ ಕಾರಣ ಗೋವಾದಲ್ಲಿ ಗೋಮಾಂಸದ (Beaf) ಕೊರತೆ ಉಂಟಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Pramod Sawanth) ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅಲ್ಲದೆ ಗೋವಾಕ್ಕೆ ಕರ್ನಾಟಕದಿಂದಲೇ ಹೆಚ್ಚಿನ ಪ್ರಮಾಣದಲ್ಲಿ ದನದ ಮಾಂಸ ಪೂರೈಕೆಯಾಗುತ್ತಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಗೋಹತ್ಯೆ ನಿಷೇಧದ ಬಗ್ಗೆ ಕಠಿಣ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಬಿಕ್ಕಟ್ಟು ಎದುರಾಗಿದೆ ಎಂದು ಸಾವಂತ್ ಹೇಳಿದ್ದರು. 
ಇದನ್ನೂ ಓದಿ : ರಾಜ್ಯದಲ್ಲಿ 'ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ': ಅಧಿವೇಶನದಲ್ಲಿ ಮಂಡನೆ!


ದನವನ್ನು  ನಾವು  ಕೂಡಾ ದೇವರೆಂದು ಪೂಜಿಸುತ್ತೇವೆ. ನಮಗೂ ಗೋಮಾತೆಯ ಬಗ್ಗೆ ಗೌರವವಿದೆ. ಆದರೆ ಅಲ್ಪಸಂಖ್ಯಾತರಿಗೆ (Minority)ಇದು ನಿತ್ಯದ ಆಹಾರವಾಗಿದೆ. ಅಲ್ಪಸಂಖ್ಯಾತರ ಆಹಾರದ ಬಗ್ಗೆ ಯೋಚಿಸುವುದು ಕೂಡಾ ನನ್ನ ಜವಾಬ್ದಾರಿಯಾಗಿದೆ. ಹಾಗಾಗಿ ಅವರಿಗೆ ಆಹಾರದ ಕೊರತೆ ಉಂಟಾಗದಂತೆ ನೋಡಿಕೊಳ್ಳುವ ಅನಿವಾರ್ಯತೆಯೂ ಇದೆ ಎಂದಿದ್ದರು. ಈಗ ಗೋವಾ ಸಿಎಂ ನೀಡಿದ ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹಿರಿಯ ನಾಯಕ ದಿನೇಶ್ ಗುಂಡೂರಾವ್ (Dinesh Gundurao) ಬಿಜೆಪಿಯನ್ನು(BJP) ಪ್ರಶ್ನಿಸಿದ್ದಾರೆ. ಇಲ್ಲಿ ಪೂಜನೀಯವಾದ ಗೋವು ಗೋವಾದಲ್ಲಿ ಯಾಕೆ ಅಲ್ಲ ಎಂದು ಸಿಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 


 


ಇದನ್ನೂ ಓದಿ: ದಿನೇಶ್ ಗುಂಡೂರಾವ್ ಒಬ್ಬ ಅಯೋಗ್ಯ: ಎಸ್.ಟಿ.ಸೋಮಶೇಖರ್


ಗೋಹತ್ಯೆ ನಿಷೇಧ ರಾಜ್ಯದಲ್ಲಿ ಭಾರೀ ಚರ್ಚೆಗೆ  ಕಾರಣವಾಗಿತ್ತು. ಪರ ವಿರೋಧ ಮಾತುಗಳ ಮಧ್ಯೆಯೇ ರಾಜ್ಯದಲ್ಲಿ ಗೋಹತ್ಯೆ ನಿಷೇಧದ ಬಗ್ಗೆ ಕಠಿಣ ಕಾನೂನು ರೂಪಿಸಲಾಗಿತ್ತು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.