ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ತಾಯಿ ವರಲಕ್ಷ್ಮಿ ಗುಂಡೂರಾವ್ ಇನ್ನಿಲ್ಲ
ಮಾಜಿ ಮುಖ್ಯಮಂತ್ರಿ ದಿವಂಗತ ಗುಂಡೂರಾವ್ ಅವರು 1993ರ ಆಗಸ್ಟ್‌ನಲ್ಲಿ ರಕ್ತ ಕ್ಯಾನ್ಸರ್‌ನಿಂದ ಇಹಲೋಕ ತ್ಯಜಿಸಿದರು.
ಬೆಂಗಳೂರು : ಮಾಜಿ ಮುಖ್ಯಮಂತ್ರಿ ದಿವಂಗತ ಗುಂಡೂರಾವ್ ಅವರ ಪತ್ನಿ, ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಅವರ ತಾಯಿ ವರಲಕ್ಷ್ಮಿ ಗುಂಡೂರಾವ್ ಅವರು ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ವರಲಕ್ಷ್ಮಿ ಗುಂಡೂರಾವ್ ಅವರು ಕರೋನಾವೈರಸ್ ಸಂಬಂಧಿತ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಮೃತ ವರಲಕ್ಷ್ಮಿ ಗುಂಡೂರಾವ್ ಅವರು ಮೂವರು ಪುತ್ರರಾದ ದಿನೇಶ್ ಗುಂಡೂರಾವ್ (Dinesh Gundurao), ಮಹೇಶ್ ಗುಂಡೂರಾವ್, ರಾಜೇಶ್ ಗುಂಡೂರಾವ್ ಮತ್ತು ಅವರ ಸೊಸೆಯರು, ಮೊಮ್ಮಕ್ಕಳನ್ನು ಅಗಲಿದ್ದಾರೆ. ವರಲಕ್ಷ್ಮಿ ಗುಂಡೂರಾವ್ ಅವರ ಅಂತಿಮ ವಿಧಿ ವಿಧಾನ ದೇವನಹಳ್ಳಿಯ ತೋಟದಲ್ಲಿ ಇಂದು ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಮುಖ್ಯಮಂತ್ರಿ ದಿ. ಗುಂಡೂರಾವ್ ಅವರು 1993ರ ಆಗಸ್ಟ್‌ನಲ್ಲಿ ರಕ್ತದ ಕ್ಯಾನ್ಸರ್‌ನಿಂದ ನಿಧನರಾಗಿದ್ದರು. ಗುಂಡೂರಾವ್ ಅವರ ನಿಧನದ ನಂತರ 1996ರಲ್ಲಿ ವರಲಕ್ಷ್ಮಿ ಗುಂಡೂರಾವ್ ರಾಜಕೀಯ ಪ್ರವೇಶಿಸಿದ್ದರು. ನಂತರ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಅವರು ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಬಿಜೆಪಿ ನಾಯಕ ಅನಂತಕುಮಾರ್ ಎದುರು ಪರಾಭವಗೊಂಡಿದ್ದರು.
ಇದನ್ನೂ ಓದಿ : ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣಗೆ ಕೊರೊನಾ ಪಾಸಿಟಿವ್, ದಿನೇಶ್ ಗುಂಡೂರಾವ್ ಕುಟುಂಬ ಕ್ವಾರೆಂಟೈನ್‌ನಲ್ಲಿ
ವರಲಕ್ಷ್ಮಿ ಅವರ ಸಾವಿಗೆ ಹಲವು ನಾಯಕರು ಕಂಬನಿ ಮಿಡಿದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ವರಲಕ್ಷ್ಮಿ ಅವರ ಸಾವಿನ ಸುದ್ದಿ ಕೇಳಿ ಆಘಾತವಾಯಿತು. ಇಂತಹ ದುಃಖದ ಸಮಯಲ್ಲಿ ಗುಂಡೂರಾವ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.
S Suresh Kumar) ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕೋಮುಭಾವನೆ ಬದಲು ವಿಶ್ವ ಮಾನವ ಸಂದೇಶ ಸಾರಿ- ಪ್ರತಾಪ್ ಸಿಂಹಗೆ ದಿನೇಶ್ ಪತ್ನಿ ಪಾಠ
ನಮ್ಮ ಶಕ್ತಿ, ಸದಾ ನಮ್ಮ ಮಾರ್ಗದರ್ಶಿ ಬೆಳಕು. ನೀವು ನಿಜವಾಗಿಯೂ ಕಷ್ಟಪಟ್ಟು ಹೋರಾಡಿದ್ದೀರಿ. ಆದರೆ ಕೋವಿಡ್ 19 (Covid 19) ನಿಮಗಿಂತ ಶಕ್ತಿಶಾಲಿಯಾಗಿತ್ತು. ನಿಮ್ಮ ನಿಲುವು, ನಿಮ್ಮ ಮಗನ ಬಗ್ಗೆ ನಿಮ್ಮ ಹೆಮ್ಮೆ ಮತ್ತು ನೀವು ಕುಟುಂಬದವರೊಂದಿಗೆ ಕಳೆದ ಕೊನೆಯ ದಿನಗಳು ಯಾವಾಗಲೂ ದೊಡ್ಡ ನೆನಪಾಗಿ ಉಳಿಯಲಿದೆ. ನಿಮ್ಮ ಆತ್ಮಕ್ಕೆ ಶಾಂತಿ ದೊರೆಯಲಿ ಅಮ್ಮಾ.... ನೀವು ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತೀರಿ ಎಂದು ದಿನೇಶ್ ಗುಂಡೂರಾವ್ ಪತ್ನಿ ತಬು ರಾವ್ (Tabu Rao) ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.