ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣಗೆ ಕೊರೊನಾ ಪಾಸಿಟಿವ್, ದಿನೇಶ್ ಗುಂಡೂರಾವ್ ಕುಟುಂಬ ಕ್ವಾರೆಂಟೈನ್‌ನಲ್ಲಿ

ಇತ್ತೀಚೆಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಕೂಡ ಕ್ವಾರೆಂಟೈನ್‌ನಲ್ಲಿ ಇದ್ದರು. ಆದರೆ ಕರ್ನಾಟಕದಲ್ಲಿ ಈವರೆಗೆ ಯಾವುದೇ ಜನಪ್ರತಿನಿಧಿಗೆ ಕೊರೊನಾ ಪಾಸಿಟಿವ್ ಬಂದಿರಲಿಲ್ಲ. 

Updated: Jul 4, 2020 , 03:40 PM IST
ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣಗೆ ಕೊರೊನಾ ಪಾಸಿಟಿವ್, ದಿನೇಶ್ ಗುಂಡೂರಾವ್ ಕುಟುಂಬ ಕ್ವಾರೆಂಟೈನ್‌ನಲ್ಲಿ

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ‌. ಸುಧಾಕರ್ ಆಯ್ತು. ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಚಿವ ದಿನೇಶ್ ಗುಂಡೂರಾವ್ ಕೂಡ ಕುಟುಂಬ ಸಮೇತ ಕ್ವಾರೆಂಟೈನ್‌ನಲ್ಲಿ ಇದ್ದಾರೆ‌. ಇದಲ್ಲದೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ತಮಗೆ ಕೊರೊನಾ ಪಾಸಿಟಿವ್ ಇರುವುದನ್ನು ಮೂಲಗಳು ದೃಢಪಡಿಸಿದ್ದಾರೆ. ಅದೇ ರೀತಿ ದಿನೇಶ್ ಗುಂಡೂರಾವ್ (Dinesh Gundurao) ಕೂಡ ತಾವು ಮತ್ತು ತಮ್ಮ ಕುಟುಂಬದವರು ಕ್ವಾರಂಟೈನ್ (Quarantine) ನಲ್ಲಿ ಇರುವುದಾಗಿ ಖಚಿತಪಡಿಸಿದ್ದಾರೆ. ತಮ್ಮ ಗನ್ ಮ್ಯಾನ್ ಗೆ ಕೊರೊನಾ ಪಾಸಿಟಿವ್ ಇತ್ತು. ಅದರಿಂದ ಅವರ ಪ್ರೈಮರಿ ಕಾಂಟ್ಯಾಕ್ಟ್ ಗಳಾದ ನಾವು ಕ್ವಾರಂಟೈನ್ ನಲ್ಲಿ‌ ಇದ್ದೇವೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಕೂಡ ಕ್ವಾರೆಂಟೈನ್‌ನಲ್ಲಿ ಇದ್ದರು. ಆದರೆ ಕರ್ನಾಟಕದಲ್ಲಿ ಈವರೆಗೆ ಯಾವುದೇ ಜನಪ್ರತಿನಿಧಿಗೆ ಕೊರೊನಾ ಪಾಸಿಟಿವ್ ಬಂದಿರಲಿಲ್ಲ. ಈಗ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣಗೆ ಕೊರೊನಾ ಪಾಸಿಟಿವ್ ಬಂದಿರುವುದು ಮೊದಲ ಪ್ರಕರಣವಾಗಿದೆ.