ಬೆಂಗಳೂರು: ಕನಕಪುರದ ಕಿಂಗ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪುತ್ರಿ ಐಶ್ವರ್ಯ ವಿವಾಹ ಫೆ. 14 ರಂದು ನೆರವೇರಲಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ (SM Krishna) ಅವರ ಮೊಮ್ಮಗ, ಕಾಫಿಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ ಹೆಗಡೆ ಪುತ್ರ ಅಮರ್ಥ್ಯ ಜೊತೆ ಕನಕಪುರದ ರಾಜಕುಮಾರಿ ಐಶ್ವರ್ಯಾ ಕಲ್ಯಾಣ ನೆರವೇರಲಿದೆ. ಕರೋನಾ ಮಾರ್ಗಸೂಚಿ ನಡುವೆಯೇ ಈ ಹೈಪ್ರೊಫೈಲ್ ಮದುವೆ ನಡೆಯಲಿದೆ.


COMMERCIAL BREAK
SCROLL TO CONTINUE READING

ಇಡೀ ಕನಕಪುರದಲ್ಲಿ ಮದುವೆ ಸಂಭ್ರಮ : 
ಕನಕಪುರದ ಮಟ್ಟಿಗೆ ಡಿಕೆ ಶಿವಕುಮಾರ್ (DK Shivakumar) ಅನಭಿಷಿಕ್ತ ದೊರೆ. ಅವರ ಸಹೋದರ ಡಿಕೆ ಸುರೇಶ್ (DK Suresh) ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ. ತಮ್ಮ ನೆಚ್ಚಿನ ನಾಯಕ ಡಿಕೆಶಿ ಅವರ ಮುದ್ದಿನ ಮಗಳ ಮದುವೆ ಸಂಭ್ರಮಕ್ಕೆ ಇಡೀ ಕನಕಪುರ ಖುಷಿಪಡುತ್ತಿದೆ. ಬ್ಯುಸಿ ರಾಜಕೀಯದ ನಡುವೆಯೇ ಬಿಡುವು ಮಾಡಿಕೊಂಡು ಡಿಕೆಶಿ (DKS) ತಮ್ಮ ಮಗಳ ಮದುವೆ ಆಮಂತ್ರಣ ಪತ್ರಿಕೆಯನ್ನು ಗಣ್ಯಾತಿಗಣ್ಯರಿಗೆ ಹಂಚುತ್ತಿದ್ದಾರೆ.


ಇದನ್ನೂ ಓದಿ : ಡಿಕೆಶಿ ಪುತ್ರಿ ಐಶ್ವರ್ಯ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್..!


ದಿಬ್ಬಣಕ್ಕೆ ಬರುವ ದೊಡ್ಡವರು ಯಾರು.? : 
ಕಾಂಗ್ರೆಸ್ (Congress) ಟ್ರಬಲ್ ಶೂಟರ್ ಡಿಕೆಶಿ ಮಗಳ ಮದುವೆ ಅಂದ್ರೆ ಸುಮ್ನೇನಾ..? ಮದುವೆಗೆ ರಾಹುಲ್ ಗಾಂಧಿ (Rahul Gandhi) ಆಗಮಿಸುವ ಸಾಧ್ಯತೆ ಇದೆ. ರಾಹುಲ್ ಗಾಂಧಿ ಜೊತೆ ಕೆ.ಸಿ ವೇಣುಗೋಪಾಲ್ (KC Venugopal), ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ರಣದೀಪ್ ಸುರ್ಜೇವಾಲಾ ಇತ್ಯಾದಿ ಘಟಾನುಘಟಿ ನಾಯಕರೇ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ (BS Yediyurappa) ಮತ್ತು ಅವರ ಸಹೋದ್ಯೋಗಿಗಳಿಗೆ ಡಿಕೆಶಿ ಖುದ್ದು ಹೋಗಿ ಆಮಂತ್ರಣ ನೀಡಿದ್ದು, ಘಟಾನುಘಟಿ ಬಿಜೆಪಿ (BJP) ನಾಯಕರೂ ಮದುವೆಗೆ ಬರಲಿದ್ದಾರೆ. ನೆನಪಿರಲಿ, ಅಮರ್ಥ್ಯ ತಾತ ಎಸ್ ಎಂ ಕೃಷ್ಣ ಈಗ ಬಿಜೆಪಿಯಲ್ಲಿದ್ದಾರೆ.


ವ್ಯಾಲೆಂಟಿನ್ ಡೇಯಂದೇ ಮದುವೆ..! : 
ಫೆ. 14 ರಂದು ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ. ಅಂದು ವಾಲೈಂಟೆನ್ ಡೇ (Valentain day) ಆಗಿರುವುದು ಕೂಡಾ ವಿಶೇಷ.  ಪ್ರತಿಷ್ಠಿತ ಹೊಟೇಲಿನಲ್ಲಿ ಫೆ. 17ರಂದು ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ. ಕರೋನಾ ಕಾರಣದಿಂದಾಗಿ ಮದುವೆಗೆ 800 ಮಂದಿ ಹಾಗೂ ಆರತಕ್ಷತೆಗೆ 1400 ಮಂದಿ ಪಾಲ್ಗೊಳ್ಳಲು ಅವಕಾಶವಿದೆ. 


ಇದನ್ನೂ ಓದಿ : D.K.Shivakumar: ವಿನಯ್‌ ಗುರೂಜಿ ಜೊತೆ 20 ನಿಮಿಷ ಮಾತುಕತೆ ನಡೆಸಿದ ಡಿ.ಕೆ.ಶಿವಕುಮಾರ್


ಕಾಫೀಡೇ ಸಾಮ್ರಾಜ್ಯದ ಒಡೆಯ ಅಮಥ್ರ್ಯ.!
ವಿದೇಶದಲ್ಲಿ ಕಲಿಯುತ್ತಿದ್ದ ಅಮರ್ಥ್ಯ ತಮ್ಮ ತಂದೆ ಸಿದ್ದಾರ್ಥ  ನಿಧನದ ನಂತರ ಕಾಫಿಡೇ ಸಾಮ್ರಾಜ್ಯ ನೋಡಿಕೊಳ್ಳುತ್ತಿದ್ದಾರೆ. ಐಶ್ವರ್ಯಾ ತನ್ನ ತಂದೆ ಕಟ್ಟಿರುವ ಗ್ಲೋಬಲ್ ಇಂಜನೀಯರಿಂಗ್ ಕಾಲೇಜನ್ನು ಮುನ್ನಡೆಸುತ್ತಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.