ಬೆಂಗಳೂರು: ಕಳೆದೆರಡು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದು ಡಿಸ್ಚಾರ್ಜ್ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಅಧಿಕ ರಕ್ತದೊತ್ತಡ ಮತ್ತು ತೀವ್ರ ಬೆನ್ನು ನೋವಿನಿಂದ ನವೆಂಬರ್ 1 ರಂದು ಶೇಷಾದ್ರಿಪುರಂ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಡಾ.ಶಂಕರ್ ಚಿಕಿತ್ಸೆ ನೀಡುತ್ತಿದ್ದರು.


ಡಿಕೆಶಿ ಅವರಿಗೆ ಬಿಳಿರಕ್ತಕಣದ ಪ್ರಮಾಣ 88 ಸಾವಿರಕ್ಕೆ ಕುಸಿದಿದ್ದರಿಂದ ಡೆಂಗ್ಯೂ ಜ್ವರದ ಆತಂಕವೂ ಎದುರಾಗಿತ್ತು. ಈ ನಿಟ್ಟಿನಲ್ಲಿ ನಿರಂತರ ಪರೀಕ್ಷೆ, ಚಿಕಿತ್ಸೆಯಿಂದಾಗಿ ಶಿವಕುಮಾರ್ ಚೇತರಿಸಿಕೊಂಡಿದ್ದಾರೆ. ಇದೀಗ ಡಿ.ಕೆ.ಶಿವಕುಮಾರ್‌ಗೆ ಡೆಂಘೀ ಜ್ವರ ಇಲ್ಲ ಎಂದು ಖಚಿತವಾಗಿದ್ದು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.


ಡಿಸ್ಚಾರ್ಜ್ ಆದ ಬಳಿಕ ಮನೆಗೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ವೈದ್ಯರು ತಮಗೆ ಎರಡು ತಿಂಗಳು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಸದ್ಯ ಏನನ್ನೂ  ಮಾತನಾಡಲು ಬಯಸುವುದಿಲ್ಲ ಎಂದು ತಿಳಿಸಿದರು.