ಬೆಂಗಳೂರು : ನೀವು ತಿಂದು ಕಾಂಗ್ರೆಸ್‌ ಮೂತಿಗೆ ಒರೆಸುವ ಪ್ರಯತ್ನ ಮಾಡಬೇಡಿ ಎಂದು ಆಡಳಿತ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದಿರುವ ಹಗರಣಗಳ ಆರೋಪ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು. 


COMMERCIAL BREAK
SCROLL TO CONTINUE READING

ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಏನ್ರೀ 35ಸಾವಿರ ಕೋಟಿ ಹಗರಣ ಅಂದ್ರೆ?, ನಿಮ್ದು ಪ್ರತಿಯೊಂದು ಬಿಚ್ಚಿ ಇಟ್ಟಿದ್ದೀವಲ್ಲ ನಾವು. ಔಷಧಿ ಬೆಡ್ ನಲ್ಲೂ ಸ್ಕ್ಯಾಂ. ಎಸ್‌ಸಿ ಎಸ್‌ಟಿ ಕಾರ್ಪೋರೇಷನ್ ಎಂಡಿಯನ್ನು ನಿನ್ನೆ ಸಸ್ಪೆಂಡ್ ಮಾಡಿದ್ದೀರಿ. ಕೋಟ್ಯಾಂತರ ರೂಪಾಯಿ ದಲಿತರ ಮಠಮಾನ್ಯಗಳ ದುಡ್ಡನ್ನು ಕಮಿಷನ್ ಹೊಡೆದಿದ್ದೀರಲ್ಲ. ಬಿಜೆಪಿಗರು ತಿಂದು ಕಾಂಗ್ರೆಸ್ ಮೂತಿಗೆ ಒರೆಸುವ ಪ್ರಯತ್ನ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಇದನ್ನೂ ಓದಿ: KR Market Flyover: ಫ್ಲೈಓವರ್ ಮೇಲಿನಿಂದ ಹಣದ ಮಳೆ ಸುರಿಸಿದ ವ್ಯಕ್ತಿ!


ಅಲ್ಲದೆ, ಟೆಂಟ್ ಗಿಂಟ್ ಪ್ಯಾಕ್ ಮಾಡ್ಕೊಂಡು ವಿಧಾನಸೌಧವನ್ನು ಡೆಟಾಲ್ ಹಾಕಿ ಕ್ಲೀನ್ ಮಾಡಿ, ದುಷ್ಟ ಸರ್ಕಾರವನ್ನು ಜನ ಓಡಿಸ್ತಿದ್ದಾರೆ. ನಾನೂ ಗಂಜಲ ಗಿಂಜಲ ತಂದು ಕ್ಲೀನ್ ಮಾಡ್ತೀನಿ. ಸುಧಾಕರ ಮೇಲೆ ಭ್ರಷ್ಟಾಚಾರದ ಕೂಪ ಕೂತಿದೆ, ಮುತ್ತು ರತ್ನಗಳೆಲ್ಲೆ ಇದಾರಲ್ಲ ಬಿಜೆಪಿ ಕೈಲಿ, ಆಪರೇಷನ್ ಲೋಟಸ್ ಆದವರ ಕೈಯ್ಯಲ್ಲೇ ಮಾತಾಡಿಸ್ತೀರಲ್ಲ. ನಮ್ಮ ಬಸ್ ಫುಲ್ ಆಗಿದೆ ಯಾರನ್ನೂ ನಾವು ಕರೆದುಕೊಳ್ಳಲ್ಲ. ಬಿ ರಿಪೋರ್ಟ್ ಸರ್ಕಾರ ಇದು, ಎಂದು ಸುಧಾಕರ್ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು.


ಬಿಜೆಪಿಯವರಿಗೆ ತಲೆ ಕೆಟ್ಟು ಹೋಗಿಬಿಟ್ಟಿದೆ, ಅವೆ ಸರ್ವೆಯಲ್ಲಿ 60-70 ಸೀಟು ದಾಟ್ತಾ ಇಲ್ಲ. ಅದಕ್ಕೆ ಸುಧಾಕರ್‌ ಅವನನ್ನು ಬಿಟ್ಟು 35 ಸಾವಿರ ಕೋಟಿ ಹೊಡೆದಿದ್ದಾರೆ ಅಂತ ಆರೋಪ ಮಾಡಿಸ್ತಿದ್ದಾರೆ. ಬಿಜೆಪಿಯಲ್ಲಿ 37 ಗುಂಪಿದೆ, ಬಸವರಾಜ ಬೊಮ್ಮಾಯಿಯವರೇ ಹೇಳಿ ಬಿಡಿ. ನಿಮ್ಮ ಮಂತ್ರಿಗಳಿಗೆ ಪ್ಯಾಕಪ್ ಮಾಡೋಕೆ. ನೀವು ಪ್ಯಾಕಪ್ ಮಾಡಿಕೊಂಡು ಹೊರಡಿ ಎಂದು ರಾಜ್ಯ ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್‌ ಅವರು ವಾಗ್ದಾಳಿ ನಡೆಸಿದರು.