ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕೆ.ಆರ್.ಮಾರ್ಕೆಟ್‍ನ ಫ್ಲೈಓವರ್ ಮೇಲಿಂದ ವ್ಯಕ್ತಿಯೊಬ್ಬ ಹಣದ ಸುರಿಮಳೆ ಸುರಿಸಿದ್ದಾನೆ. ಮಂಗಳವಾರ ಈ ವಿಚಿತ್ರ ಘಟನೆ ನಡೆದಿದೆ. ಅರುಣ್ ಎಂಬಾತನೇ ಕೆ.ಆರ್.ಮಾರ್ಕೆಟ್‍ನ ಫ್ಲೈಓವರ್ ಮೇಲಿಂದ ಹಣ ಎಸೆದ ವ್ಯಕ್ತಿ. ಆದರೆ ಈತ ಯಾವ ಕಾರಣಕ್ಕೆ ಹಣ ಎಸೆದಿದ್ದಾನೆ ಅನ್ನೋದು ತಿಳಿದುಬಂದಿಲ್ಲ.
ಕೆ.ಆರ್.ಮಾರ್ಕೆಟ್ ಸಿಗ್ನಲ್ ಬಳಿ ಜನನಿಬಿಡ ಪ್ರದೇಶದಲ್ಲಿ ಯುವಕ ಫ್ಲೈ ಓವರ್ ಮೇಲಿಂದ 10 ರೂ. ಮುಖಬೆಲೆಯ ನೋಟುಗಳ 3 ಕಂತೆ ಹಣವನ್ನು ಎಸೆದು ಹೋಗಿದ್ದಾನೆ. ಸುಮಾರು 3-4 ಸಾವಿರ ಹಣವನ್ನು ಎಸೆದಿದ್ದಾನೆ. ಅರುಣ್ ಹಣ ಎಸೆಯುತ್ತಿದ್ದಂತೆ ಮಾರ್ಕೆಟ್‍ನಲ್ಲಿದ್ದ ಜನರು ಅವುಗಳನ್ನು ಎತ್ತಿಕೊಳ್ಳಲು ಮುಗಿಬಿದಿದ್ದಾರೆ. ಗಾಳಿಯಲ್ಲಿ 10 ರೂ. ಮುಖಬೆಲೆಯ ನೋಟುಗಳು ಹಾರಾಡುತ್ತಿದ್ದವು. ಈ ವೇಳೆ ಅನೇಕರು ಅವುಗಳನ್ನು ಸಂಗ್ರಹಿಸುತ್ತಿದ್ದರು.
ಇದನ್ನೂ ಓದಿ: ʼಸಿದ್ದರಾಮಯ್ಯ ಆಡಳಿತದಲ್ಲಿ 35,000 ಕೋಟಿ ರೂ. ದುರ್ಬಳಕೆʼ
ಹಣ ಎಸೆದ ವ್ಯಕ್ತಿಗೆ ಪೊಲೀಸ್ ನೋಟಿಸ್!
ಕೆ.ಆರ್.ಮಾರ್ಕೆಟ್ ಫ್ಲೈ ಓವರ್ ಮೇಲೆ ಹಣ ಎಸೆದ ಪ್ರಕರಣಕ್ಕೆ ಸಂಬಂಧ ಅರುಣ್‍ಗೆ ಪೊಲೀಸರು ನೋಟಿಸ್ ನೀಡಿದ್ದಾರೆ.ಅರುಣ್ ಅವರ ನಾಗರಭಾವಿ ನಿವಾಸಕ್ಕೆ ಕೆ.ಆರ್.ಮಾರ್ಕೆಟ್ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಹೀಗೆ ವರ್ತಿಸಿದ್ದು ಯಾಕೆ? ಎಂದು ಪ್ರಶ್ನಿಸಿರುವ ಪೊಲೀಸರು ಮಾಹಿತಿ ನೀಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಐಪಿಸಿ ಸೆ.283, ಕೆ.ಪಿ.ಆ್ಯಕ್ಟ್ 92d ಅಡಿ ನೋಟಿಸ್ ಜಾರಿ ಮಾಡಲಾಗಿದೆ. ಮನೆಯಲ್ಲಿ ಅರುಣ್ ಇದ್ದಲ್ಲಿ ವಶಕ್ಕೆ ಪಡೆಯಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಈ ಬಗ್ಗೆ ಅರುಣ್ ವಿರುದ್ಧ ಪೊಲೀಸರು ಎನ್‍ಸಿಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಡಾ.ಸುಧಾಕರ್ MBBS ಏನು ಓದಿದ್ದಾನೋ ಗೊತ್ತಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.