ಬೆಂಗಳೂರು : ಟಿಕೆಟ್ ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ‌ನಾಯಕರ ನಡುವೆ ಶೀತಲ ಸಮರ ಶುರುವಾಗಿದೆ. ಸರ್ವೆ ಆಧಾರದಲ್ಲಿ ಟಿಕೆಟ್ ಹಂಚಿಕೆ ಅಂತ ಕೈ ಹೈಕಮಾಂಡ್ ಸೂಚನೆ ಇದ್ರು, ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲೇಬೇಕು ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜಿದ್ದಿಗೆ ಬಿದ್ದಿದ್ದಾರೆ.


COMMERCIAL BREAK
SCROLL TO CONTINUE READING

ಟಿಕೆಟ್ ಹಂಚಿಕೆಗಾಗಿ ಕೈ ನಾಯಕರ ನಡುವ ಕೊಲ್ಡ್ ವಾರ್..!


 ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ಸಿನಲ್ಲಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಮೂರು ಬಾರಿ ಚುನಾವಣಾ ಸಮಿತಿ ಸಭೆ ಕೂಡ ನಡೆದಿದೆ. ಆದ್ರೆ ಮೊದಲ‌ಪಟ್ಟಿ ಸಿದ್ದ ಮಾಡಿ‌ ಸ್ಕ್ರೀನಿಂಗ್ ಕಮಿಟಿಗೆ ಸಾಧ್ಯವಾಗಿಲ್ಲ. ಇದಕ್ಕೆ ಕಾಂಗ್ರೆಸ್ ಕೈ ನಾಯಕರ ನಡುವೆ ಶೀತಲ ಸಮರ ನಡೆಯುತ್ತಿರುವುದು. ಅದರಲ್ಲೂ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡುವೆ ಟಿಕೆಟ್ ಹಂಚಿಕೆ ವಿಚಾರವಾಗಿ ಸಹಮತವಾಗುತ್ತಿಲ್ಲ. ಹೈಕಮಾಂಡ್ ಮಾತ್ರ ಕನಗೋಳ್ ಟೀಮ್ ಕೊಡುವ ಸರ್ವೆ ವರದಿಯೇ ಅಂತಿಮ ಅಂತಿದ್ದಾರೆ. ಆದ್ರೆ ಹೇಗಾದರೂ ಮಾಡಿ ತಮ್ಮ ಬೆಂಬಲಿಗರಿಗೆ ಡಿ‌ಕೆ ಶಿವಕುಮಾರ್ ಟಿಕೆಟ್ ಕೊಡಿಸಬೇಕು ಅಂತ ಜಿದ್ದಿಗೆ ಬಿದ್ದಾರೆ.


ಇದನ್ನೂ ಓದಿ : Basavaraj Bommai : 'ಅಪ್ಪು ಸಮಾಧಿಯನ್ನ ಅದ್ಬುತ ಸ್ಮಾರಕ : ರೇಸ್ ಕೋರ್ಸ್‌ ರಸ್ತೆಗೆ ಅಂಬಿ ಹೆಸರು'


ಹಾಗದ್ರೆ ಡಿ ಕೆ ಶಿವಕುಮಾರ್ ತಮ್ಮ ಬೆಂಬಲಿಗರಿಗೆ ಟಿಕೆಟಿಗಾಗಿ ಬ್ಯಾಟಿಂಗ್ ಮಾಡುತ್ತಿರುವುದು ಅಂತ ನೋಡುವುದಾದ್ರೆ, ರಾಜಾಜಿನಗರ- ಜಿ ಪದ್ಮಾವತಿಗ, ಮಹಾಲಕ್ಷ್ಮಿ ಲೇಔಟ್- ಸಂಸದ ಜಿ ಸಿ ಚಂದ್ರಶೇಖರ್, ಪುಲಕೇಶಿ ನಗರ- ಪ್ರಸನ್ನ ಕುಮಾರ, ಸಿ ವಿ ರಾಮನ್ ನಗರ - ಸಂಪತ್ ರಾಜ್,ಯಲಹಂಕ - ಹೊಸ ಮುಖ ಕೇಶವ್ ರಾಜಣ್ಣ, ಮೂಡಬಿದರೆ- ಅತ್ಯಾಪ್ತ ಮಿಥುನ್ ರೈ, ಕಲಘಟಗಿ - ನಾಗರಾಜ್ ಛಬ್ಬಿ, ಬಳ್ಳಾರಿ- ಅತ್ಯಾಪ್ತ ಆಂಜನೇಯಲು, ತೀರ್ಥಹಳ್ಳಿ- ಮಂಜುನಾಥ್ ಗೌಡ,ಸಿರಸಿ- ಬೀಮಣ್ಣ ನಾಯಕ್, ದಾಸರಹಳ್ಳಿ‌- ಧನಂಜಯ, ಬೆಂಗಳೂರು ದಕ್ಷಿಣ- ಸುಷ್ಮಾ ರಾಜಗೋಪಾಲರೆಡ್ಡಿ  ಪರಮಾಪ್ತ ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಗೆ ಟಿಕೆಟ್ ಕೊಡಿಸಲು ಕಸರತ್ತು ಡಿ ಕೆ ಶಿವಕುಮಾರ್ ಕಸರತ್ತು ನಡೆಸಿದ್ದಾರೆ.


ಸದ್ಯದಲ್ಲಿ ಕಾಂಗ್ರೆಸ್ ಮೊದಲ ಪಟ್ಟಿ ಸಾಧ್ಯತೆ..!


 ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಪೈನಲ್ ಗಾಗಿ ಸ್ಕ್ರೀನಿಂಗ್ ಕಮಿಟಿ ರಚಿಸಿದೆ. ಮೋಹನ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ಸ್ಕ್ರೀನಿಂಗ್ ಕಮಿಟಿ ರಚನೆಯಾಗಿದ್ದು, ರಾಜ್ಯದ ಐವರು ನಾಯಕರಿಗೆ ಸ್ಕ್ರೀನಿಂಗ್ ಕಮಿಟಿಯಲ್ಲಿ ಅವಕಾಶ ನೀಡಲಾಗಿದೆ.ಸದ್ಯದಲ್ಲೆ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯುವುದು ದಟ್ಟವಾಗಿದೆ. ಈಗಾಗಲೆ ಹಾಲಿ ಶಾಸಕರು ಸೇರಿದಂತೆ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತ ಅಭ್ಯರ್ಥಿಗಳನ್ನು ಸೇರಿಸಿ, ಸ್ಕ್ರೀನಿಂಗ್ ಕಮಿಟಿಯಿಂದ ಮೊದಲ ಪಟ್ಟಿ ಬಿಡುಗಡೆಯಾಗಲಿದೆ.


ಒಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಸರ್ವೆ ವರದಿಯೆ ಟಿಕೆಟ್ ಹಂಚಿಕೆಗೆ ಮಾನದಂಡ ಅಂತಿದೆ. ಆದ್ರೆ ಡಿಕೆ ಶಿವಕುಮಾರ್ ಇನ್ನೂಳಿದ ನಾಯಕರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ‌ಕಸರತ್ತು ನಡೆಸಿದ್ದಾರೆ. ಇದಕ್ಕೆ ಹೈಕಮಾಂಡ್ ಬ್ರೇಕ್ ಹಾಕುವ ಸಾಧ್ಯತೆಯಿದೆ.


ಇದನ್ನೂ ಓದಿ : Aero India 2023 : ಏರೋ ಇಂಡಿಯಾ 2023 ರ ಭವ್ಯತೆಗೆ ಸಾಕ್ಷಿ : ಇಲ್ಲಿದೆ ಈ ಭಾರಿಯ ವಿಶೇಷತೆಗಳು!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.