DKS vs Siddu: ಕೊನೆಪಕ್ಷ ಸಿದ್ದರಾಮಯ್ಯಗೆ ಟಿಕೆಟ್ ಆದ್ರೂ ಕೊಡ್ತಾರಾ ಡಿಕೆಶಿ?
#BharatTodoYatra ಸಭೆಗಳಿಗೂ ಸಿದ್ದರಾಮಯ್ಯರಿಗೆ ಆಹ್ವಾನ ಇರಲಿಲ್ಲ. ನಿನ್ನೆಯ ಟಿಕೇಟ್ ಆಕಾಂಕ್ಷಿಗಳ ಸಭೆಗೂ ಆಹ್ವಾನ ಇರಲಿಲ್ಲ. ಕೊನೆಪಕ್ಷ ಡಿಕೆಶಿಯವರು ಸಿದ್ದರಾಮಯ್ಯನವರಿಗೆ ಟಿಕೇಟ್ ಆದ್ರೂ ಕೊಡ್ತಾರಾ? ಅಂತಾ BJP ಪ್ರಶ್ನಿಸಿದೆ.
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಬಣ ರಾಜಕೀಯ ಶುರುವಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನವೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ‍್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರದ ಕಾಳಗ ನಡೆಯುತ್ತಿದೆ. ಇಬ್ಬರು ನಾಯಕರು ತೋರಿಕೆಗೆ ಚೆನ್ನಾಗಿ ಕಂಡರೂ ಪರಸ್ಪರ ಕಾಲೆಳೆಯುತ್ತಾ, ಎಟಿಗೆ-ಎದಿರೇಟಿನಂತೆ ನಡೆದುಕೊಳ್ಳುತ್ತಿದ್ದಾರೆ.
ಕೊಪ್ಪಳದಲ್ಲಿ ಸಿದ್ದರಾಮಯ್ಯನವರು ಮುಂದಿನ ವಿಧಾನಸಭೆ ಚುನಾವಣೆಗೆ ಐವರು ಅಭ್ಯರ್ಥಿಗಳನ್ನು ಘೋಷಿಸಿದ್ದರು. ಕೊಪ್ಪಳ ಜಿಲ್ಲೆಯಲ್ಲಿ ಬಸವರಾಜ ರಾಯರಡ್ಡಿ, ಅಮರೇಗೌಡ ಬಯ್ಯಾಪೂರ, ಶಿವರಾಜ ತಂಗಡಗಿ, ಇಕ್ಬಾಲ್ ಅನ್ಸಾರಿ ಮತ್ತು ರಾಘವೇಂದ್ರ ಹಿಟ್ನಾಳ್‍ರನ್ನು ಗೆಲ್ಲಿಸಬೇಕು ಅಂತಾ ಮನವಿ ಮಾಡಿದ್ದರು.
ಬೆಳಗಾವಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಕಿತ್ತೂರು ತಹಶೀಲ್ದಾರ ಲೋಕಾಯಕ್ತ ಬಲೆಗೆ..!
ಆದರೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಸಿದ್ದರಾಮಯ್ಯನವರ ನಡೆಗೆ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದರು. ‘ಅಭ್ಯರ್ಥಿ ಘೋಷಣೆ ಮಾಡುವ ಹಕ್ಕು ಸಿದ್ದರಾಮಯ್ಯಗೆ ಇಲ್ಲ, ನನಗೂ ಇಲ್ಲ, ಅದು ಇರುವುದು ಕೇವಲ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರಿಗೆ ಮಾತ್ರ’ ಅಂತಾ ಹೇಳುವ ಮೂಲಕ ಸಿದ್ದುಗೆ ಡಿಕೆಶಿ ತಿರುಗೇಟು ನೀಡಿದ್ದರು.
ಐಸಿಸ್ ಟ್ರೈನಿಂಗ್ ಪಡೆದಿದ್ದ ಮಂಗಳೂರು ಸ್ಫೋಟದ ಆರೋಪಿಯಿಂದ 40 ಮಂದಿಗೆ ತರಬೇತಿ: ಶೋಭಾ ಕರಂದ್ಲಾಜೆ
‘ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರ ನೆಮ್ಮದಿಗೆ ಮತ್ತೆ ಭಂಗಬಂದಿದೆ. ಮೇಲ್ನೋಟಕ್ಕೆ ಅವರ ಪರಮಾಪ್ತರಂತೆ ನಟಿಸುವ ಚೋಡೋ ಗೆಳೆಯ ಡಿಕೆಶಿ ಇನ್ನೊಂದು ಬಾಣ ಬಿಟ್ಟಿದ್ದಾರೆ. 5 ಜಿಲ್ಲೆಗಳಿಗೆ ದಿಢೀರಂತ ಅಧ್ಯಕ್ಷರನ್ನು ನೇಮಿಸಿ, ಸಿದ್ದರಾಮಯ್ಯನವರು ಬಾಲ ಬಿಚ್ಚದಂತೆ ನೋಡಿಕೊಂಡಿದ್ದಾರೆ’ ಅಂತಾ ಬಿಜೆಪಿ ಕುಟುಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.