ಐಸಿಸ್ ಟ್ರೈನಿಂಗ್ ಪಡೆದಿದ್ದ ಮಂಗಳೂರು ಸ್ಫೋಟದ ಆರೋಪಿಯಿಂದ 40 ಮಂದಿಗೆ ತರಬೇತಿ: ಶೋಭಾ ಕರಂದ್ಲಾಜೆ

ಕಳೆದ 3 ತಿಂಗಳಿನಿಂದ ಮಂಗಳೂರಿನಲ್ಲಿ ಎನ್‌ಐಎ ಸಕ್ರಿಯವಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯೊಂದಿಗೆ ಸಹಕರಿಸುವಂತೆ ಸ್ಥಳೀಯ ಪೊಲೀಸರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.

Written by - Puttaraj K Alur | Last Updated : Nov 26, 2022, 11:55 AM IST
  • ಮಂಗಳೂರು ಸ್ಫೋಟದ ಆರೋಪಿ ಮೊಹಮ್ಮದ್ ಶಾರಿಕ್ ‘ಇಸ್ಲಾಮಿಕ್ ಸ್ಟೇಟ್(ISIS) ತರಬೇತಿ ಪಡೆದಿದ್ದ
  • ಐಸಿಸ್ ತರಬೇತಿ ಪಡೆದ ಬಳಿಕ 40ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿದ್ದ ಆರೋಪಿ
  • ಕದ್ರಿ ಮಂಜುನಾಥ್ ಸೇರಿ ಹಲವು ದೇವಸ್ಥಾನ & ಹಿಂದು ಮುಖಂಡರನ್ನು ಗುರಿಯಾಗಿಸಿ ದಾಳಿಗೆ ಸಂಚು
ಐಸಿಸ್ ಟ್ರೈನಿಂಗ್ ಪಡೆದಿದ್ದ ಮಂಗಳೂರು ಸ್ಫೋಟದ ಆರೋಪಿಯಿಂದ 40 ಮಂದಿಗೆ ತರಬೇತಿ: ಶೋಭಾ ಕರಂದ್ಲಾಜೆ title=
ISIS ತರಬೇತಿ ಪಡೆದಿದ್ದ ಆರೋಪಿ

ಮಂಗಳೂರು: ಮಂಗಳೂರು ಸ್ಫೋಟದ ಆರೋಪಿಗಳು ‘ಇಸ್ಲಾಮಿಕ್ ಸ್ಟೇಟ್(ISIS) ತರಬೇತಿ’ ಪಡೆದಿದ್ದು, 40ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಸ್ಫೋಟದ ಆರೋಪಿ ಮೊಹಮ್ಮದ್ ಶಾರಿಕ್ (24) ಬಗ್ಗೆ ಲಭ್ಯವಿರುವ ಮಾಹಿತಿಯು ಭಯಾನಕವಾಗಿದೆ. ಭಾರತ ವಿರೋಧಿ ಗೀಚುಬರಹ ಪ್ರಕರಣದಲ್ಲಿ ಆರೋಪಿಗಳು ತೀವ್ರ ತನಿಖೆ ನಡೆಯದ ಕಾರಣ ಜಾಮೀನಿನ ಮೇಲೆ ಹೊರಬಂದಿದ್ದರು’ ಎಂದು ಹೇಳಿದ್ದಾರೆ.   

ಇದನ್ನೂ ಓದಿ: 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪಾಪಿ ಪೂಜಾರಿ..!

ಗೀಚುಬರಹ ಪ್ರಕರಣವು 2020ರ ನವೆಂಬರ್ ತಿಂಗಳಿನಲ್ಲಿ ಮಂಗಳೂರು ನಗರದ ಕೆಲವು ಸಾರ್ವಜನಿಕ ಗೋಡೆಗಳ ಮೇಲೆ ಹೊರಹೊಮ್ಮಿದ ಭಯೋತ್ಪಾದಕ ಗುಂಪುಗಳನ್ನು ಹೊಗಳುವ ಘೋಷಣೆಗಳನ್ನು ಉಲ್ಲೇಖಿಸುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರಿಕ್‍ಅನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಶಾರಿಕ್ 40ಕ್ಕೂ ಹೆಚ್ಚು ಮಂದಿಗೆ ಐಸಿಸ್ ತರಬೇತಿ ನೀಡಿದ್ದ. ಸ್ವತಃ ಐಸಿಸ್ ತರಬೇತಿ ಪಡೆದಿರುವ ಮಾಹಿತಿ ಇದೆ. ಆತ ಕದ್ರಿ ಮಂಜುನಾಥ್ ದೇವಸ್ಥಾನ ಮತ್ತು ಈ ಪ್ರದೇಶಗಳಲ್ಲಿನ ಇತರ ದೇವಾಲಯಗಳು, ಮುಖಂಡರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಮಾಸ್ಟರ್ ಪ್ಲಾನ್ ಮಾಡಿದ್ದನೆಂದು ಕರಂದ್ಲಾಜೆಯವರು ತಿಳಿಸಿದ್ದಾರೆ.  

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ಗೆ ಕಪ್ಪು ಮಸಿ ಬಳಿದ ಮರಾಠಿ ಭಾಷಿಕ ಪುಂಡರು

ಐಸಿಸ್‌ನಿಂದ ಮೊದಲು ತರಬೇತಿ ಪಡೆದಿದ್ದ ಶಾರಿಕ್ ಬಳಿಕ ಇತರೆ ಯುವಕರಿಗೂ ತರಬೇತಿ ನೀಡಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಅಂತಾ ಹೇಳಿದ ಅವರು, ಕಳೆದ 3 ತಿಂಗಳಿನಿಂದ ಮಂಗಳೂರಿನಲ್ಲಿ ಎನ್‌ಐಎ ಸಕ್ರಿಯವಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯೊಂದಿಗೆ ಸಹಕರಿಸುವಂತೆ ಸ್ಥಳೀಯ ಪೊಲೀಸರಿಗೆ ಮನವಿ ಮಾಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News