ವಿಜಯಪುರ: ಬುರ್ಖಾ ಧರಿಸಿರುವ ಮಹಿಳೆಯರು ನನ್ನ ಕಚೇರಿ ಸುತ್ತ ಸುಳಿಯಲು ಬಿಡುವುದಿಲ್ಲ. ಮುಸ್ಲಿಮರ ಪರ ಕೆಲಸ ಮಾಡುವುದಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ವಿವಾದ ಸೃಷ್ಟಿಸಿದ್ದಾರೆ.


COMMERCIAL BREAK
SCROLL TO CONTINUE READING

ನಗರದ ಸಿದ್ದೇಶ್ವರ ಕಲಾಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ಕಚೇರಿ ಬಳಿ ಬುರ್ಕಾ ಹಾಕಿದವರು, ಟೋಪಿ ಹಾಕಿದವರಿಗೆ ಅವಕಾಶವಿಲ್ಲ. ಮಸ್ಲಿಮರು ನನಗೆ ಮತ ಹಾಕಿಲ್ಲ. ಹಾಗಾಗಿ ಕಾರ್ಪೋರೇಟರ್ಗಳಿಗೆ ನಾನು ಹೇಳಿದ್ದೇನೆ ಮುಸ್ಲಿಮರ ಪರ ಕೆಲಸ ಮಾಡಬೇಡಿ ಎಂದು. ಹಿಂದೂಗಳು ಮಾತ್ರ ನನಗೆ ಮತ ಹಾಕಿದ್ದಾರೆ. ಹಾಗಾಗಿ ಕೇವಲ ಹಿಂದುಗಳಿಗೆ ಮಾತ್ರ ನನ್ನ ಕಚೇರಿಗೆ ಅವಕಾಶ ಎದ್ನು ವಿವಾದಾತ್ಮಕ ಹೇಳಿಕೆ ನಿಡುವ ಮೂಲಕ ಯತ್ನಾಳ್ ಸಂಕಷ್ಟದಲ್ಲಿ ಸಿಲುಕಿದ್ದಾರೆ. 


ಈ ವಿವಾದಾತ್ಮಕ ಹೇಳಿಕೆ ಎಲ್ಲೆಡೆ ಬಹಳಷ್ಟು ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯತ್ನಾಳ್ ಅವರು, ಅಲ್ಪಸಂಖ್ಯಾತರ ಮನವೊಲಿಸಲು ದೇಶ ವಿರೋಧಿ ಹೇಳಿಕೆ ನೀಡಿದವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಓವೈಸಿ ಮಾತನಾಡಿದರೆ ಅದು ಸರಿ, ಆದರೆ ನಾನು ಹಿಂದೂಪರ ಮಾತನಾಡುವುದು ತಪ್ಪೇ" ಎಂದು ಪ್ರಶ್ನಿಸಿದರು. 


ಈವರೆಗೆ ಬಿಜೆಪಿ ಶಾಸಕ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆಗಳಿಗೆ ಪ್ರಸಿದ್ಧಿಯಾಗಿದ್ದರು. ಆದರೀಗ ಇವರ ಸಾಲಿಗೆ ಯತ್ನಾಳ್ ಅವರೂ ಸಹ ಸೇರಿದಂತಾಗಿದೆ.