ಬೆಂಗಳೂರು: ಲಾಕ್‌ಡೌನ್ ಜಾರಿಯಲ್ಲಿ ಇದ್ದುದರಿಂದ ಕಳೆದ 40 ದಿನಗಳಿಂದ ಮದ್ಯ ಮಾರಾಟಕ್ಕೆ ಇದ್ದ ನಿರ್ಭಂದವನ್ನು ತೆರವುಗೊಳಿಸುತ್ತಿದ್ದಂತೆ ಸೋಮವಾರ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಸ್ನೇಹಿತನಿಗೆ ಚೂರಿಯಿಂದ ಇರಿದು ಕೊಲೆ‌ ಮಾಡಿದ್ದಾನೆ‌‌.


COMMERCIAL BREAK
SCROLL TO CONTINUE READING

ಕೊರೋನ ಮಹಾಮಾರಿಯನ್ನು ನಿಯಂತ್ರಿಸಲೆಂದು ಅನಿವಾರ್ಯವಾಗಿ ತಂದ ಲಾಕ್‍ಡೌನ್ (Lockdown)  ವೇಳೆ ಮದ್ಯ ಮಾರಾಟವನ್ನು‌ ನಿಷೇಧಗೊಳಿಸಲಾಗಿತ್ತು. ಇದರಿಂದಾಗಿ ಮದ್ಯ ವ್ಯಸನಿಗಳು ಕಳೆದ 40 ದಿನದಿಂದ ಮದ್ಯ ಸಿಗದೆ ಕಂಗಾಲಾಗಿದ್ದರು. ಸೋಮವಾರ ರಾಜ್ಯ ಸರ್ಕಾರ ಮದ್ಯದ ಮೇಲಿನ ನಿಷೇಧ ಸಡಿಲಿಸಿಗೊಳಿಸುತ್ತಿದ್ದಂತೆ ಬೆಂಗಳೂರಿನಲ್ಲಿ ರೌಡಿಶೀಟರ್ ಒಬ್ಬ ಚೆನ್ನಾಗಿ ಕುಡಿದು ಮತ್ತಿನಲ್ಲಿ ಮತ್ತೊಬ್ಬನ ಎದೆಗೆ ಚಾಕಿ ಇರಿದು ದಾರೂಣಾವಾಗಿ ಕೊಲೆಗೈದಿರುವ ಘಟನೆ ನಡೆದಿದೆ. 


25 ವರ್ಷದ ಕರಣ್ ಸಿಂಗ್ ಎಂಬಾತನೇ ಸ್ನೇಹಿತನಿಂದಲೇ ಮೃತನಾದ ಯುವಕ ಎನ್ನಲಾಗಿದೆ. ಈತನ ಸ್ನೇಹಿತನಾಗಿದ್ದ ಪ್ರಭು ಬಾಗಲಗುಂಟೆ ಚಾಕುವಿನಲ್ಲಿ ಇರಿದಿದ್ದಾನೆ 2017ರಲ್ಲಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕರಣ್ ಸಿಂಗ್ ಹಾಗೂ ಕೊಲೆ ಆರೋಪಿ ಪ್ರಭು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್‌ಗಳಾಗಿದ್ದರು.


ಸೋಮವಾರ ಬೆಳಿಗ್ಗೆಯೇ ಮದ್ಯಪಾನ ಮಾಡಿದ ರೌಡಿಶೀಟರ್‌ಗಳಾದ ಕರಣ್ ಸಿಂಗ್ ಹಾಗೂ ಪ್ರಭು ಬೆಂಗಳೂರಿನ ಬಾಗಲಗುಂಟೆ ಬಳಿಯ ಸಿಡೇದಹಳ್ಳಿ ತುಂಬೆಲ್ಲಾ ತಮ್ಮ ಯಮಹಾ ಎಫ್‌ಜ಼ೆಡ್ ಬೈಕ್ ನಲ್ಲಿ ಸುತ್ತಾಡಿದ್ದರು. ಇದೇ ವೇಳೆ ಕುಡಿದ ಮತ್ತಿನಲ್ಲಿ ಸ್ನೇಹಿತರ ಗುಂಪು ಕಟ್ಟಿಕೊಳ್ಳುವ ವಿಚಾರಕ್ಕೆ ಒಬ್ಬರಿಗೊಬ್ಬರ ಮಧ್ಯ ಮಾತಿನ ಚಕಮಕಿ ನಡೆಯಿತು. ಮಾತಿನ ಚಕಮಕಿ ವಿಕೋಪಗೊಂಡು ರೌಡಿಶೀಟರ್ ಪ್ರಭು ತನ್ನ ಸ್ನೇಹಿತನಾದ ಮತ್ತೊಬ್ಬ ರೌಡಿಶೀಟರ್ ಕರಣ್ ಸಿಂಗ್ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತ ಸ್ತ್ರಾವದಿಂದ ರೌಡಿಶೀಟರ್ ಕರಣ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.


ಸ್ನೇಹಿತನಿಗೆ ಚಾಕುವಿನಿಂದ ಇರಿದ ಕೊಲೆ ಆರೋಪಿ ಪ್ರಭು ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರಲ್ಲದೆ ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ. ಬಳಿಕ ಆರೋಪಿ ಪ್ರಭುಗಾಗಿ ಹುಡುಕಾಟ ನಡೆಸಿದ್ದಾರೆ.