ಬೆಂಗಳೂರು: ನಗರದ ವಾಣಿ ವಿಳಾಸದ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷದಿಂದಾಗಿ ಮೂರು ದಿನದ ಮಗು ಸಾವನ್ನಪ್ಪಿದೆ ಎಂದು ಮಗುವಿನ ಪೋಷಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ನೆಲಮಂಗಲ ಮೂಲದ ಅನಿತಾ ರಮೇಶ್ ದಂಪತಿಗೆ ಕಳೆದ ಶುಕ್ರವಾರ ಜನಿಸಿದ್ದ ಮಗು, ಮೂರು ದಿನದಿಂದ ಆರೋಗ್ಯವಾಕ್ಕೀಡಾಗಿತ್ತು, ಭಾನುವಾರ ಮಧ್ಯಾಹ್ನ 2:45ಕ್ಕೆ ಮಗು ಹಾಲು ಕುಡಿಯುತ್ತಿಲ್ಲ, ಮೂತ್ರ ವಿಸರ್ಜನೆ ಮಾಡುತ್ತಿಲ್ಲ ಎಂದು ವೈದ್ಯರಿಗೆ ತಿಳಿಸಿದಾಗ ಮಗು ತಪಾಸಣೆ ನಡೆಸಿದ ವೈದ್ಯರು ಮಗು ಚೆನ್ನಾಗಿದೆ ಎಂದು ತಿಳಿಸಿದ್ದರು. ನಂತರ ಸಂಜೆ ಅಸ್ವಸ್ಥಗೊಂಡಿದ್ದ ಮಗುವನ್ನು ಮತ್ತೆ ವೈದ್ಯರಿಗೆ ತೋರಿಸುವಷ್ಟರಲ್ಲಿ ಮಗು ಸಾವನ್ನಪ್ಪಿದೆ. ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದ ಕಾರಣ ಮಗು ಸಾವನ್ನಪ್ಪಿದೆ ಎಂದು ಪೋಷಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮತ್ತೊಂದೆಡೆ ಮಗುವಿಗೆ ಮಧ್ಯಾಹ್ನ ಪರೀಕ್ಷೆ ನಡೆಸಿದಾಗ ಮಗು ಚೆನ್ನಾಗಿಯೇ ಇತ್ತು, ಮಗುವಿಗೆ ಎಲ್ಲಾ ರೀತಿಯ ಚಿಕಿತ್ಸೆಯನ್ನು ನೀಡಲಾಗಿತ್ತು. ನಂತರ ಸಂಜೆ ಮತ್ತೆ ಮಗು ಅಸ್ವಸ್ಥಗೊಂಡಾಗ ವೈದ್ಯರು ಪರೀಕ್ಷೆ ನಡೆಸಲು ತೆರಳಿದ್ದಾರೆ, ಅಷ್ಟರಲ್ಲಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಪ್ರತಿಕ್ರಿಯಿಸಿದ್ದಾರೆ.


ಹಾಲುಣಿಸಿದಾಗ ಮಗುವಿನ ಎದೆ ಸವರಬೇಕು, ಮಗುವಿಗೆ ಹಾಲುಣಿಸಿ ಸರಿಯಾಗಿ ನೋಡಿಕೊಳ್ಳಲಿಲ್ಲ ಅನ್ನಿಸುತ್ತೆ ಅದರಿಂದ ಮಗು ಸಾವನ್ನಪ್ಪಿರಬೇಕು. ಕೆಲವು ಭಾರಿ ಇದ್ರಿಂದ ಉಸಿರಾಟ ತೊಂದರೆಯಾಗಿ ಸಾವನ್ನಪ್ಪುವ ಸಾಧ್ಯತೆ ಇದೆ. ಮಗುವಿನ ಸಾವಿನ ಬಗ್ಗೆ ವೈದ್ಯಕೀಯ ವರದಿ ಬಂದ ನಂತರ ಕಾರಣ ತಿಳಿಯಲಿದೆ ಎಂದು ವಾಣಿವಿಲಾಸ ಅಸ್ಪತ್ರೆ ಡಾ.ರವೀಂದ್ರನಾಥ್ ಮೇಟಿ ಹೇಳಿಕೆ ನೀಡಿದ್ದಾರೆ.