DogMan ರಾಮ್ ಶ್ವಾನಪ್ರೀತಿಗೆ ಪುನೀತ್ ಕೂಡಾ ಶಹಬ್ಬಾಸ್ ಅಂದಿದ್ರು..!
ರಾಮ್ ತಮ್ಮ ನಿವೃತ್ತಿ ಬಳಿಕ, 62 ನೇ ವಯಸ್ಸಲ್ಲೂ ಹತ್ತಾರು ಕಿ.ಮೀ ನಡೆದು, ಸೈಕಲ್ ತುಳಿದು ಸುತ್ತಲಿನ ಬೀದಿ ನಾಯಿಗಳಿಗೆ (Street Dogs) ಹೊಟ್ಟೆತುಂಬಿಸುವ ಮಾನವೀಯ ಕೆಲಸದಲ್ಲಿ ಕಳೆದ ಎರಡು ವರ್ಷದಿಂದ ನಿರತರಾಗಿದ್ದಾರೆ.
ಬೆಂಗಳೂರು: ಬೆನ್ನಲೊಂದು ಬ್ಯಾಗ್, ತಲೆಗೊಂದು ಹ್ಯಾಟ್, ಟೀ ಶರ್ಟ್ -ಪ್ಯಾಂಟ್ ಧರಿಸಿ, ವೇಗವಾಗಿ ಹೆಜ್ಜೆ ಹಾಕುತ್ತಾ ಯುವಕರಂತೆ ಚುರುಕಾಗಿ ಓಡಾಡುವ ಇವರ ವಯಸ್ಸು 62..
ರಾಮ್ ಪ್ರಸಾದ್ ಶಿವಕುಮಾರ್, ಇವರು ಎಲ್ಲರ ಬಾಯಲ್ಲೂ ರಾಮ್, ಡಾಗ್ ಮ್ಯಾನ್ ರಾಮ್ ಎಂದೇ ಪರಿಚಿತರು.
ರಾಮ್ ತಮ್ಮ ನಿವೃತ್ತಿ ಬಳಿಕ, 62 ನೇ ವಯಸ್ಸಲ್ಲೂ ಹತ್ತಾರು ಕಿ.ಮೀ ನಡೆದು, ಸೈಕಲ್ ತುಳಿದು ಸುತ್ತಲಿನ ಬೀದಿ ನಾಯಿಗಳಿಗೆ (Street Dogs) ಹೊಟ್ಟೆತುಂಬಿಸುವ ಮಾನವೀಯ ಕೆಲಸದಲ್ಲಿ ಕಳೆದ ಎರಡು ವರ್ಷದಿಂದ ನಿರತರಾಗಿದ್ದಾರೆ. 25 ಬೀದಿ ನಾಯಿಮರಿಗಳನ್ನು ಸದಾಶಿವನಗರದ ಪೊಲೀಸ್ ಸಿಬ್ಬಂದಿ ಸೇರಿದಂತೆ ಇತರರಿಗೆ ದತ್ತು ನೀಡಿದ್ದಾರೆ.
ಇದನ್ನೂ ಓದಿ- Free Admission: ಉತ್ತರಹಳ್ಳಿ ಪಿಯು ಕಾಲೇಜಿನಲ್ಲಿ ತರಗತಿಗಳಿಗೆ ಉಚಿತ ಪ್ರವೇಶ
ಇನ್ನು ಮೇಕ್ರಿ ಸರ್ಕಲ್ ಬಳಿಯ ಬಿಬಿಎಂಪಿ ಪಾರ್ಕ್ (BBMP Park near Makeri Circle) ನಲ್ಲಿರುವ ಮೂರ್ನಾಲ್ಕು ನಾಯಿಗಳಿಗೆ ಪ್ರತಿನಿತ್ಯ ಊಟ ಹಾಕುವ ರಾಮಪ್ರಸಾದ್ ಶಿವಕುಮಾರ್ (Ram Prasad Shivakumar), ನಟ ಪುನೀತ್ (Puneeth) ಅವರಿಂದಲೂ ಶಹಬ್ಬಾಸ್ ಅನಿಸಿಕೊಂಡಿದ್ದಾರೆ. ಪ್ರತಿನಿತ್ಯ ಅದೇ ಪಾರ್ಕ್ ಗೆ ವಾಕಿಂಗ್ ಬರುತ್ತಿದ್ದ ಪುನೀತ್ ರಾಮ್ ಅವರ ನಿಸ್ವಾರ್ಥ ಕೆಲಸ ನೋಡಿ, ಮಾತನಾಡಿಸುತ್ತಿದ್ದರು. ಪುನೀತ್ ಅವರಿಗೂ ನಾಯಿಗಳಂದ್ರೆ ತುಂಬಾ ಇಷ್ಟ ಇತ್ತು ಅಂತಾರೆ ರಾಮ್.
ಜಾಹಿರಾತು ಏಜೆನ್ಸಿ ನಡೆಸುತ್ತಿದ್ದ ರಾಮ್ ಅವರು ನಿವೃತ್ತಿ ಬಳಿಕ ನಾಯಿಗಳಿಗೆ ಊಟ ಹಾಕುವುದನ್ನೇ ಒಂದು ಹವ್ಯಾಸವಾಗಿ ಮಾಡಿಕೊಂಡಿದ್ದಾರೆ. ಅನ್ನ, ಮಾಂಸಾಹಾರ, ಜೊತೆಗೆ ಪೆಡಿಗಿರಿಗಳನ್ನು ತಮ್ಮ ಬ್ಯಾಗ್ ನಲ್ಲಿ ತುಂಬಿಕೊಂಡು ಮೇಕ್ರಿ ಸರ್ಕಲ್, ಸದಾಶಿವನಗರ, ಭಾಷ್ಯಂ ಸರ್ಕಲ್, ಮಲ್ಲೇಶ್ವರಂ 18 ನೇ ಕ್ರಾಸ್, 11 ನೇ ಕ್ರಾಸ್, ಸಾಯಿಬಾಬಾ ದೇವಸ್ಥಾನ, ಮಲ್ಲೇಶ್ವರಂ ಮಾರ್ಕೆಟ್ ರಸ್ತೆ, ರಾಮಯ್ಯ ಆಸ್ಪತ್ರೆ, 80 ಫೀಟ್ ರಸ್ತೆ, ಕಾವೇರಿ ಥಿಯೇಟರ್ ಸುತ್ತ ಪ್ರತಿನಿತ್ಯ ಓಡಾಡಿ ಊಟ ಹಾಕುತ್ತಾರೆ.
ಇದನ್ನೂ ಓದಿ- ಸಂವಿಧಾನದ ಆಶಯ ರಕ್ಷಿಸಲು ಬಿಜೆಪಿ ಸರ್ಕಾರ ಸಂಪೂರ್ಣ ವಿಫಲ: ಸಿದ್ದರಾಮಯ್ಯ
ಅಷ್ಟೇ ಅಲ್ಲ ಏನೇ ಖಾಯಿಲೆ ಇದ್ದರೂ ಹೆಬ್ಬಾಳ ಪಶುಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಾರೆ. ಬೀದಿ ನಾಯಿಗಳೂ ಅದಕ್ಕೆ ಪ್ರತಿಫಲವಾಗಿ ರಾಮ್ ಅವರಿಗೆ ಪ್ರೀತಿ ನೀಡುತ್ತವೆ. ಎಲ್ಲರೂ ತಮ್ಮ ತಮ್ಮ ಪ್ರದೇಶಗಳ ಬೀದಿಗಳಿವೆ ಊಟ ಹಾಕಿ, ಅವುಗಳನ್ನು ಪ್ರೀತಿಸಿದ್ದಲ್ಲಿ ಕಚ್ಚುವುದಿಲ್ಲ, ದಾಳಿ ಮಾಡುವುದಿಲ್ಲ ಅಂತಾರೆ ರಾಮ್. ಒಟ್ನಲ್ಲಿ ರಾಮ್ ಅವರ ಶ್ವಾನ ಪ್ರೀತಿ, ಅವರು ಮಾಡುತ್ತಿರುವ ನಿಸ್ವಾರ್ಥ ಸೇವೆ ಎಲ್ಲರಿಗೂ ಮಾದರಿಯಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.