ಬೆಂಗಳೂರು: ಈ ಹಿಂದೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದ ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆ ಯೋಜನೆ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಮೊಟ್ಟೆ ಸೇವನೆಯಿಂದ ಮಕ್ಕಳಿಗೆ ಅನಾರೋಗ್ಯ ಕಾಡಲಿದೆ ಅನ್ನೋ ಚರ್ಚೆ ಶುರುವಾಗಿದೆ. ಹೀಗಾಗಿ ಮಧ್ಯಾಹ್ನದ ಬಿಸಿ ಊಟದಿಂದ ಮೊಟ್ಟೆಯನ್ನು ತೆಗೆದುಹಾಕಬೇಕೆಂದು ಶಿಕ್ಷಣ ಇಲಾಖೆಗೆ NEP ಸಮಿತಿಯ ಶಿಫಾರಸ್ಸು ಮಾಡಿದೆ. ಇದು ಪೋಷಕರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.


COMMERCIAL BREAK
SCROLL TO CONTINUE READING

ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುವುದರಿಂದ ಧಾರ್ಮಿಕ ನಂಬಿಕೆಗೆ ಧಕ್ಕೆ ಬರುತ್ತದೆ ಅನ್ನೋದು ಕೆಲವರ ವಾದವಾಗಿದೆ. ಇದರಿಂದ ಶಾಲೆಗಳಲ್ಲಿ ಮಕ್ಕಳಿಗಾಗಿ ನೀಡುವ ಮಾಂಸಾಹಾರ ಪದ್ಧತಿಯಿಂದ ಪ್ರಾಣಿ ಹತ್ಯಗೆ ಪ್ರೋತ್ಸಾಹ ನೀಡಿದ ಹಾಗಾಗುತ್ತೆ ಎನ್ನಲಾಗುತ್ತಿದೆ. ಇದೇ ವಿಚಾರವಾಗಿ ಕಳೆದ 2 ತಿಂಗಳ ಹಿಂದೆ ಸ್ವಾಮೀಜಿಗಳು ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಎಲ್ಲಾ ವಿಚಾರ ತಣ್ಣಾಗುವ ವೇಳೆ ಇದೀಗ ಮತ್ತೊಮ್ಮೆ ಮೊಟ್ಟೆ ವಿವಾದ ಎದಿದ್ದೆ.


ಇದನ್ನೂ ಓದಿ: 'ನಿಮ್ಮ ತಲೆಗೆ ಹಗರಣಗಳು ಸುತ್ತಿಕೊಂಡ ಕೂಡಲೇ ನಮ್ಮ ಕಾಲದ ಹಗರಣಗಳು ನೆನಪಾಯಿತೇ?'


ಹೌದು, ಮೊಟ್ಟೆ ಸೇವನೆಯಿಂದ ಮಕ್ಕಳಿಗೆ ಅನಾರೋಗ್ಯ ಕಾಡಲಿದೆ. ಹೀಗಾಗಿ ಸಾತ್ವಿಕ ಆಹಾರ ಪದ್ಧತಿಯನ್ನು ಅನುಸರಿಸಬೇಕೆಂದು ಮಧ್ಯಾಹ್ನದ ಬಿಸಿ ಊಟದಿಂದ ಮೊಟ್ಟೆಯನ್ನು ತೆಗೆದುಹಾಕಬೇಕೆಂದು NEP ಸಮಿತಿಯು ಶಿಕ್ಷಣ ಇಲಾಖೆಗೆ ಶಿಫಾರಸ್ಸು ಮಾಡಿದೆ.


NEP ನಡೆಗೆ ಪೋಷಕರು & ವಿದ್ಯಾರ್ಥಿಗಳ ಆಕ್ರೋಶ


NEP ಸಮಿತಿಯು ಶಿಕ್ಷಣ ಇಲಾಖೆ ನೀಡಿರುವ ಶಿಫಾರಸ್ಸು ವಿರುದ್ಧ ಸಾಕಷ್ಟು ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಸಾಹಿತ್ಯಗಳು, ವಿದ್ಯಾರ್ಥಿ‌ ಸಂಘಟನೆಗಳು ಮತ್ತು ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮೊಟ್ಟೆ ಹಾಗೂ ಮಾಂಸ ಸೇವನೆಯಿಂದ ದೇಹಕ್ಕೆ ಪ್ರೋಟಿನ್ ಸಿಗುತ್ತದೆ. ಮಾನವನ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡಿದೆಯೆಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರವು ಮೊಟ್ಟೆಯನ್ನು ಬಿಸಿಯೂಟದಲ್ಲಿ ಸೇರಿಸಿತ್ತು. ಆದರೆ ಈ ಸಮಿತಿಯ ಮೊಟ್ಟೆ ಉತ್ತಮವಲ್ಲ ಅಂತಾ ಶಿಫಾರಸ್ಸು ಮಾಡಿರುವುದು ಅವೈಜ್ಞಾನಿಕವಾಗಿದೆ. ಜನರ ಊಟದ ಪದ್ಧತಿಯಲ್ಲಿ ಇವರದ್ದೇ ನಿಯಮ ಹೇರಲು ಮುಂದಾಗಿದೆ.‌ ಅಲ್ಲದೆ ದೇಶದಲ್ಲಿ ಶೇ.50ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವಾಗ‌ ಈ ಸಮಿತಿಯು ವಾಸ್ತವವನ್ನು ಅಣಕಿಸಿದಂತಿದೆ ಎಂದು‌ ಕಿಡಿಕಾರಿದ್ದಾರೆ.


ಇದನ್ನೂ ಓದಿ: ಜೈಲಲ್ಲಿರುವ ಪ್ರೇಮಿಗೆ ಡ್ರಗ್ಸ್ ಸಪ್ಲೈ ಮಾಡಲು ಯತ್ನ:ಇಬ್ಬರು ಯುವತಿಯರು ಅರೆಸ್ಟ್


ಮಕ್ಕಳಿಗೆ ಮೊಟ್ಟೆ ಸೇವನೆಯಿಂದ ಪೌಷ್ಟಿಕಾಂಶ ಜೊತೆಗೆ ಆರೋಗ್ಯಕ್ಕೆ ಒಳ್ಳೆಯದೆಂಬುದು ತಜ್ಞರ ಸಲಹೆಯಾಗಿದೆ. ಈ ಬಗ್ಗೆ ಮಾತನಾಡಿರುವ ವೈದ್ಯರೊಬ್ಬರು ಮಕ್ಕಳಿಗೆ ಮೊಟ್ಟೆ ನೀಡುವುದು ಬಹಳ ಉತ್ತಮ. ಮೊಟ್ಟೆ ಸೇವನೆಯಿಂದ ಅಪೌಷ್ಟಿಕತೆ ಕೊರತೆ ದೂರವಾಗುತ್ತದೆ. ದಿನಕ್ಕೆ 1 ಮೊಟ್ಟೆ ಸೇವನೆ ಮಕ್ಕಳ ಆರೋಗ್ಯಕ್ಕ ಒಳ್ಳೆಯದು. ಮೊಟ್ಟೆ ತಿನ್ನುವದರಿಂದ ಮಕ್ಕಳ ಕ್ಯಾಲ್ಸಿಯಂ ಲೆವೆಲ್ ಉತ್ತಮಗೊಳ್ಳುತ್ತದೆ. ಇದರಿಂದ ಮೂಳೆಗಳು ಸ್ಟ್ರಾಂಗ್ ಆಗುತ್ತವೆ. ಮೊಟ್ಟೆಯನ್ನು 100% ಬೆಯಿಸಿ ಕೊಡಬೇಕು. ಅರ್ಧಂಬರ್ಧ ಬೇಯಿಸಿದ ಮೊಟ್ಟೆ ಸೇವನೆ ಒಳ್ಳೆಯದಲ್ಲವೆಂದು ಸಲಹೆ ನೀಡಿದ್ದಾರೆ.


ಶಿಕ್ಷಣ ಇಲಾಖೆಗೆ ಒಂದಿಲ್ಲೊಂದು ತಲೆ ನೋವು ಎದುರಾಗುತ್ತಿದೆ. ಇದರ ಮಧ್ಯೆ ಇದೀಗ ಮತ್ತೊಂದು ಕಿರಿಕಿರಿ ಎಂಬಂತೆ ಮೊಟ್ಟೆ ಕಿರಿಕ್ ಶುರುವಾಗಿದೆ. ಹೀಗಾಗಿ NEP ಸಮಿತಿಯಯ ನಡೆ ವಿರೋಧಿಸಿ ಜನರು ಕಿಡಿಕಾರುತ್ತಿದ್ದಾರೆ. ಆದರೆ, ಶಿಕ್ಷಣ ಇಲಾಖೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.