GST ಏರಿಕೆಗೆ ವಿರೋಧ : ಇಂದು ಯಶವಂತಪುರ APMC ಯಾರ್ಡ್ ಬಂದ್

ಗೋಧಿ, ಅಕ್ಕಿ, ಬೇಳೆ ಕಾಳಿಗೆ ಕೇಂದ್ರದಿಂದ 5% GST ಹೇರಿಕೆಗೆ ಭಾರೀ ವಿರೋಧ ಕೇಳಿ ಬರುತ್ತಿದೆ. ಕೇಂದ್ರದ GST ಏರಿಕೆಗೆ ವರ್ತಕರು, ಕಾರ್ಮಿಕ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.   

Written by - Ranjitha R K | Last Updated : Jul 15, 2022, 11:03 AM IST
  • GST ಏರಿಕೆಗೆ ವರ್ತಕರ ವಿರೋಧ
  • ಇಂದು ಯಶವಂತಪುರ APMC ಯಾರ್ಡ್ ಬಂದ್
  • ರಾಜ್ಯ ಅಕ್ಕಿ ಗಿರಿಣಿದಾರರ ಸಂಘದಿಂದಲೂ ಪ್ರತಿಭಟನೆ
GST ಏರಿಕೆಗೆ  ವಿರೋಧ : ಇಂದು ಯಶವಂತಪುರ APMC ಯಾರ್ಡ್ ಬಂದ್  title=
APMC Bundh (file photo)

ಬೆಂಗಳೂರು : ಕೇಂದ್ರದ GST ಏರಿಕೆಗೆ ವರ್ತಕರು, ಕಾರ್ಮಿಕ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. GST ಏರಿಕೆಯನ್ನು ವಿರೋಧಿಸಿ  ಇಂದು ಯಶವಂತಪುರ APMC ಯಾರ್ಡ್ ಬಂದ್ ಗೆ  ಕರೆ ನೀಡಲಾಗಿದೆ. ಮಾಲೀಕರು, ವರ್ತಕರು, ಕಾರ್ಮಿಕ ಸಂಘಟನೆಗಳು ಈ ಬಂದ್ ಗೆ ಕರೆ ನೀಡಿದ್ದಾರೆ. 

ಗೋಧಿ, ಅಕ್ಕಿ, ಬೇಳೆ ಕಾಳಿಗೆ ಕೇಂದ್ರದಿಂದ 5% GST ಹೇರಿಕೆಗೆ ಭಾರೀ ವಿರೋಧ ಕೇಳಿ ಬರುತ್ತಿದೆ. ಕೇಂದ್ರದ GST ಏರಿಕೆಗೆ ವರ್ತಕರು, ಕಾರ್ಮಿಕ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಯಶವಂತಪುರದ APMC ಯಾರ್ಡ್ ಬಂದ್ ಮಾಡಲಾಗಿದೆ. ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಯಾರ್ಡ್ ಬಂದ್ ಮಾಡಿ  ಕೇಂದ್ರದ ನಿರ್ಧಾರಕ್ಕೆ ವಿರೋಧ ವ್ಯಕ್ತ ಪಡಿಸಲು ತೀರ್ಮಾನಿಸಲಾಗಿದೆ. 

ಇದನ್ನೂ ಓದಿ : Contractor Santosh Patil : ಗುತ್ತಿಗೆದಾರ ಸಂತೋಷ ಪಾಟೀಲ್ ಪ್ರಕರಣ : ರಾಜ್ಯಪಾಲರ ಮೊರೆ ಹೋದ ಕುಟುಂಬಸ್ಥರು

ಸರ್ಕಾರದ ನಿರ್ಧಾರದಿಂದ ನಾನ್ ಬ್ರಾಂಡೆಡ್ ವಸ್ತುಗಳ ವರ್ತಕರಿಗೆ ಬಹಳ ದೊಡ್ಡ ನಷ್ಟವಾಗಲಿದೆ ಎನ್ನುವುದು ಪ್ರತಿಭಟನಾಕಾರರ ಅಭಿಪ್ರಾಯ.  ಈ ಕಾರಣದಿಂದಾಗಿ APMC ಯಾರ್ಡ್ ಬಂದ್ ಗೆ ಕಾರ್ಮಿಕ ಸಂಘಟನೆಗಳು ಕರೆ ನೀಡಿವೆ. ಕರ್ನಾಟಕ ರಾಜ್ಯ ಅಕ್ಕಿ ಗಿರಿಣಿದಾರರ ಸಂಘದಿಂದಲೂ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಾದ್ಯಂತ ತಮ್ಮ ಎಲ್ಲಾ ಚಟುವಟಿಕೆಗಳನ್ನ ನಿಲ್ಲಿಸಿ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. 

ಕೂಡಲೇ ಈ ಪ್ರಸ್ತಾವನೆಯನ್ನು ಹಿಂಪಡೆಯುವಂತೆ ಆಗ್ರಹ ಮಾಡಲಾಗಿದೆ. ಜಿ.ಎಸ್.ಟಿ ಕೌನ್ಸಿಲ್ ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡಲಾಗಿದೆ. ಇಂದಿನ ಪ್ರತಿಭಟನೆಗೆ  ದಿ ಬೆಂಗಳೂರು ಹೋಲ್ ಸೇಲ್ ಫುಡ್ ಅಂಡ್ ಗ್ರೇನ್ಸ್  ಅಂಡ್ ಪಲ್ಸಸ್, ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಎಪಿಎಂಸಿ ಯಶವಂತಪುರ, ಕರ್ನಾಟಕ ರೋಲರ್ ಫ್ಲೋರ್ ಮಿಲ್ಲರ್ಸ್ ಅಸೋಸಿಯೇಷನ್ ,ಬೆಂಗಳೂರು ಮತ್ತು 
ನ್ಯೂ ತರಗುಪೇಟೆ ಮರ್ಚೆಂಟ್ಸ್ ಅಸೋಸಿಯೇಷನ್ . ಎನ್ಟಿ ಪೇಟೆ, ಬೆಂಗಳೂರು ಬೆಂಬಲ ಘೋಷಿಸಿದ್ದಾರೆ. 

ಇದನ್ನೂ ಓದಿ : Vegetable Price: ಈರುಳ್ಳಿ ಇಳಿಕೆ-ಟೊಮೆಟೋ ಏರಿಕೆ: ಮತ್ತೆ ಏರಿಳಿತವಾಗುತ್ತಿದೆ ತರಕಾರಿ ದರ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News