ಕರಡು ಮತದಾರರ ಪಟ್ಟಿ ಬಿಡುಗಡೆ: ವರ್ಷಾಂತ್ಯದೊಳಗೆ ಬಿಬಿಎಂಪಿ ಚುನಾವಣೆ
ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ದಿನೆ ದಿನೆ ಗರಿಗೆದರುತ್ತಿದೆ. ಪಾಲಿಕೆ ವ್ಯಾಪ್ತಿಯ ಪ್ರತೀ ಕೆಲಸದಲ್ಲಿ ಪಾಲಿಕೆ ತೊಡಗಿದ್ದು, ಇಂದು ಅಧಿಕೃತವಾಗಿ ಆರಂಭಗೊಂಡಿದೆ. ಈ ಮೂಲಕ ರಾಜ್ಯ ಚುನಾವಣಾ ಆಯೋಗ ಇಂದು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಿದ್ದು, 2022ರ ಅಂತ್ಯದೊಳಗೆ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಬಸವರಾಜ್ ತಿಳಿಸಿದರು.
ಬೆಂಗಳೂರು: ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ದಿನೆ ದಿನೆ ಗರಿಗೆದರುತ್ತಿದೆ. ಪಾಲಿಕೆ ವ್ಯಾಪ್ತಿಯ ಪ್ರತೀ ಕೆಲಸದಲ್ಲಿ ಪಾಲಿಕೆ ತೊಡಗಿದ್ದು, ಇಂದು ಅಧಿಕೃತವಾಗಿ ಆರಂಭಗೊಂಡಿದೆ. ಈ ಮೂಲಕ ರಾಜ್ಯ ಚುನಾವಣಾ ಆಯೋಗ ಇಂದು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಿದ್ದು, 2022ರ ಅಂತ್ಯದೊಳಗೆ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಬಸವರಾಜ್ ತಿಳಿಸಿದರು.
ಗುರುವಾರ ಸಂಜೆ ಪಾಲಿಕೆಯ ಮಲ್ಲೇಶ್ವರದ ಕಚೇರಿಯಲ್ಲಿ ಸಭೆ ಆಯೋಜನೆ ಮಾಡಲಾಗಿತ್ತು. ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಸವರಾಜ್, www.bbmp.gov.in ನಲ್ಲಿ ಮತದಾರರ ಕರಡು ಪ್ರತಿ ಪ್ರಕಟವಾಗಿದೆ. ಸೆಪ್ಟೆಂಬರ್ 3ರಿಂದ ಸೆಪ್ಟೆಂಬರ್ 9ರವರೆಗೆ ಮತದಾರರ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು. ಸೆಪ್ಟೆಂಬರ್ 16ರ ಒಳಗೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಪಟ್ಟಿಯಲ್ಲಿ ಯಾವುದೇ ಲೋಪದೋಷ ಇದ್ದರೆ ಈಗಲೇ ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: Ind vs WI : ಇಂದು ಟೀಂ ಇಂಡಿಯಾಗೆ ಎಂಟ್ರಿ ನೀಡಲಿದ್ದಾನೆ ಈ ಮಾರಕ ಬ್ಯಾಟ್ಸ್‌ಮನ್!
ಪ್ರತೀ ವಾರ್ಡ್ ನಲ್ಲಿ ಗರಿಷ್ಠ 52,653 ಮತದಾರರು;
198 ವಾರ್ಡ್ ಗಳಿಂದ 243 ವಾರ್ಡ್ ಗಳಿಗೆ ಬಿಬಿಎಂಪಿ ವ್ಯಾಪ್ತಿ ಹೆಚ್ಚಳವಾಗಿದೆ. ಒಟ್ಟು 79,08,394 ಮತದಾರರಿದ್ದು, 41,09,496 ಪುರುಷರು, 37,97,497 ಮಹಿಳೆಯರು, 1401 ತೃತೀಯ ಲಿಂಗಿಗಳು ಇದ್ದಾರೆ. ಒಂದು ವಾರ್ಡ್‌ನಲ್ಲಿ ಕನಿಷ್ಠ 18,604 ಗರಿಷ್ಠ 51,653 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
ಕೋರ್ಟ್ ಅರ್ಜಿಗಳಿಂದ ಚುನಾವಣೆ ನಡೆಸಲು ಯಾವುದೇ ಅಡ್ಡಿಯಿಲ್ಲ;
2022ರೊಳಗೆ ಚುನಾವಣೆ ನಡೆಸುವ ಪ್ರಕ್ರಿಯೆ ಮಾಡಲಾಗುತ್ತದೆ, ಹಲವರು ಕೋರ್ಟ್ ಮೊರೆ ಹೋಗಿದ್ದಾರೆ. ಆದ್ರೆ ಪಾಲಿಕೆ ಚುನಾವಣೆ ನಡೆಸಲು ಯಾವುದೇ ಅಡ್ಡಿಯಿಲ್ಲ. ಒಂದು ವೇಳೆ ಕೋರ್ಟ್ ನಿಂದ ಬೇರೆ ನಿರ್ದೇಶನ ಬಂದರೆ ಅದನ್ನು ಪಾಲನೆ ಮಾಡುಲಾಗುತ್ತದೆ ಎಂದು ಚುನಾವಣೆ ಆಯುಕ್ತ ಬಸವರಾಜ್ ತಿಳಿಸಿದರು.
ಆಕ್ಷೇಪಣೆ ಸಲ್ಲಿಸಲು ಬಿಬಿಎಂಪಿ ವೆಬ್ ಸೈಟ್ ನಲ್ಲಿ ಅವಕಾಶ;
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುವ ದಿಕ್ಕಿನಲ್ಲಿ ಮತದಾರರ ಪಟ್ಟಿ ತಯಾರು ಮಾಡಲಾಗಿದೆ. ಇಂದು ಬಿಬಿಎಂಪಿ ಕರಡು ಮತದಾರರ ಪಟ್ಟಿಯನ್ನ ಬಿಬಿಎಂಪಿ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯಾ. ಇಲ್ವಾ? ಎಂಬುವುದರ ಬಗ್ಗೆ ಪರಿಶೀಲನೆ ಮಾಡಿಕೊಳ್ಳಬಹುದು. ಬದಲಾವಣೆ ಇದ್ದಲ್ಲಿ, ಹೆಸರು ಇಲ್ಲದೆ ಇದ್ದಲ್ಲಿ, ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.
ಇದನ್ನೂ ಓದಿ: ಮುನಿರತ್ನ ವಿರುದ್ಧ ಅಬ್ಬರಿಸಿದ್ದ ಪ್ರಧಾನಿ ಮೋದಿ ‘ಮೌನವ್ರತ’ ಪಾಲಿಸುತ್ತಿರುವುದೇಕೆ?: ಕಾಂಗ್ರೆಸ್
ನಗರದಲ್ಲಿ ತಗ್ಗಿದ ಮತದಾನದ ಪ್ರಮಾಣ;
ನಗರದಲ್ಲಿ ಮತದಾನದ ಪ್ರಮಾಣ ತುಂಬಾ ಕಡಿಮೆ ಇದೆ. ಶೇ 42 ಪರ್ಸೆಂಟೇಜ್ ನಷ್ಟು ಮಾತ್ರವೇ ಮತದಾನ ಆಗುತ್ತಿದೆ. ಒಟ್ಟು ನಾಲ್ಕು ಚುನಾವಣಾ ಅಧಿಕಾರಿಯನ್ನ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಅಂತಿಮ ಮತದಾರರ ಪಟ್ಟಿ ಸಪ್ಟೆಂಬರ್ 22 ರಂದು ಬಿಡುಗಡೆ;
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 79,08,394 ಜನ ಮತದಾರರು ಇದ್ದಾರೆ. 2015ರ ಚುನಾವಣೆಯಲ್ಲಿ 71 ಲಕ್ಷದ 22 ಸಾವಿರ ಮತದಾರರು ಇದ್ದರು. ಈ ಬಾರಿ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಅಂತಿಮ ಮತದಾರರ ಪಟ್ಟಿಯನ್ನ ಸಪ್ಟೆಂಬರ್ 22 ರಂದು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.