ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಮತ್ತೊಮ್ಮೆ 40% ಕಮಿಷನ್ ಆರೋಪ ಕೇಳಿಬಂದಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಎಲ್ಲರೂ ಭ್ರಷ್ಟರು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಂಭೀರ ಆರೋಪ ಮಾಡಿದ್ದಾರೆ. ಇದೇ ವಿಚಾರವಾಗಿ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಗುರುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸಚಿವ ‘ಮನಿ’ರತ್ನ ಅವರ ವಿರುದ್ಧ ಹಣ ವಸೂಲಿಯ ಆರೋಪ ಇದು ಮೊದಲೇನಲ್ಲ. ತೋಟಗಾರಿಕಾ ಇಲಾಖೆಯಲ್ಲೂ ಹಣ ವಸೂಲಿ ಮಾಡಿದ ಆರೋಪದ ಬಗ್ಗೆ ಪ್ರಧಾನಿಗೆ ಪತ್ರ ಹೋಗಿತ್ತು. ಹಿಂದೆ ಇದೇ ಮುನಿರತ್ನ ವಿರುದ್ಧ ಅಬ್ಬರಿಸಿ ಬೊಬ್ಬಿರಿದಿದ್ದ ಪ್ರಧಾನಿ ಮೋದಿ ಈಗ ‘ಮೌನವ್ರತ’ ಪಾಲಿಸುತ್ತಿರುವುದೇಕೆ? ಪತ್ರಕ್ಕೆ ಪ್ರತಿಕ್ರಿಯೆ ಇಲ್ಲವೇಕೆ?’ ಎಂದು ಪ್ರಶ್ನಿಸಿದೆ.
‘ಸಿಎಂ ಮಾತಿಗೇ ಗೌರವವಿಲ್ಲ, ಸಿಎಂ ಮಾತನ್ನು ಯಾರೂ ಕೇಳ್ತಿಲ್ಲ. ಬಸವರಾಜ್ ಬೊಮ್ಮಾಯಿಯವರೇ, ತಾವು ಕೇವಲ ಭ್ರಷ್ಟರ ಹಾಗೂ ಸಂಘಪರಿವಾರದ ಕೈಲಾಡುವ #PuppetCM ಮಾತ್ರವೇ? ಅಧಿಕಾರಿಗಳು ನಿಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡ್ತಿಲ್ಲ ಎಂದಾದರೆ ಸರ್ಕಾರ ಯಾರ ಹಿಡಿತದಲ್ಲಿದೆ? ನಿಮಗೂ ಮೀರಿ ಆಳುತ್ತಿರುವ 'ಅಜ್ಞಾತ ಸಿಎಂ' ಯಾರು?’ ಎಂದು ಕಾಂಗ್ರೆಸ್ ಕುಟುಕಿದೆ.
ಇದನ್ನೂ ಓದಿ: ಡಿಜಿಟಲ್ ಆರ್ಥಿಕತೆಗೆ ರಾಜ್ಯದಿಂದ 300 ಬಿಲಿಯನ್ ಡಾಲರ್ ಕೊಡುಗೆ ಗುರಿ: ಅಶ್ವತ್ಥ ನಾರಾಯಣ
ಸಿಎಂ ಬೊಮ್ಮಾಯಿ ರಾಜೀನಾಮೆಗೆ ಸುರ್ಜೆವಾಲಾ ಆಗ್ರಹ
ಇನ್ನು ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಕೇಳಿಬಂದಿರುವ ಹಿನ್ನೆಲೆ ನೈತಿಕ ಹೊಣೆಹೊತ್ತು ಸಿಎಂ ಬೊಮ್ಮಾಯಿ ರಾಜೀನಾಮೆ ನೀಡುತ್ತಾರಾ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಶ್ನಿಸಿದ್ದಾರೆ.
‘ರಾಜ್ಯದಲ್ಲಿ 40% ಕಮಿಷನ್ ಪೆಡಂಭೂತ ತಾಂಡವವಾಡುತಿದೆ. ಈ ಕಮಿಷನ್ ಭೂತಕ್ಕೆ ಬಲಿಯಾದ ಸಂತೋಷ್ ಪಾಟೀಲ್ ಪ್ರಧಾನಿಗೆ ಪತ್ರ ಬರೆದರೂ ಅದು ಪ್ರಧಾನಿ ಸಚಿವಾಲಯದ ಕಸದ ಬುಟ್ಟಿ ಸೇರಿತ್ತು. ಈಗ ಗುತ್ತಿಗೆದಾರರ ಸಂಘದ ಸರದಿ. ಈಗಲಾದರೂ ನಿಷ್ಪಕ್ಷಪಾತ ತನಿಖೆ ನಡೆಯಬಹುದೇ? ಆರೋಪಿತ ಸರ್ಕಾರದ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಾರಾ?’ ಎಂದು ಅವರು ಪ್ರಶ್ನಿಸಿದ್ದಾರೆ.
‘ಬಿಜೆಪಿ ಸರ್ಕಾರ 40% ಕಮಿಷನ್ ಅನ್ನು 50%ಗೆ ಏರಿಸಿ ಭ್ರಷ್ಟಾಚಾರದಲ್ಲಿ ಪ್ರಮೋಷನ್ ಪಡೆದಿದೆ. ಅತಿವೃಷ್ಟಿ, ಅನಾವೃಷ್ಟಿ ಮತ್ತು ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ರಾಜ್ಯಕ್ಕೆ ಆಡಳಿತದ ಬೂಸ್ಟಿಂಗ್ ಡೋಸ್ ನೀಡಬೇಕಾದ ಬಿಜೆಪಿ ಭ್ರಷ್ಟಾಚಾರದಲ್ಲಿ ಬೂಸ್ಟಿಂಗ್ ಡೋಸ್ ಪಡೆದಿದೆ. BBMPಯನ್ನು ಹಗಲುದರೋಡೆಯ ಕೇಂದ್ರವಾಗಿಸಿದ್ದೇ ಸದ್ಯದ ಬಿಜೆಪಿಯ ಸಾಧನೆ’ ಅಂತಾ ಟೀಕಿಸಿದ್ದಾರೆ.
ಇದನ್ನೂ ಓದಿ: DK Shivakumar : ಡಿಕೆಶಿ ಆಪ್ತರಿಗೆ ನೋಟಿಸ್ ; 'ಕಿರುಕುಳ ಕೊಡಕ್ಕೂ ಲಿಮಿಟ್ ಇರಬೇಕು'
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.