ಹೊಸನಗರ: ನಿರ್ಲಕ್ಷ್ಯ ಒಳಗಾದ ಹೊಸನಗರ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದ್ದಿದೆ. ಈ ಮಧ್ಯೆ ಟ್ಯಾಂಕರ್​ಗಳಲ್ಲಿ ಹಳ್ಳಿಹಳ್ಳಿಗೆ ನೀರಿ ಸೌಕರ್ಯಗಳನ್ನ ಒದಗಿಸಲಾಗುತ್ತಿದೆಯಾದರೂ, ಅದರ ಬಿಲ್​ ಮಂಜೂರಾತಿ ಆಗುತ್ತಿಲ್ಲ. ಈ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಮಲಾಕರ್ ಶೆಟ್ಟಿ ಇವತ್ತು ಹೊಸನಗರ ತಾಲ್ಲೂಕು ಪಂಚಾಯಿತಿ ಎದುರು ಸಗಣಿ ನೀರನ್ನ ಮೈಮೇಲೆ ಎರಚಿಕೊಂಡು ಪ್ರತಿಭಟನೆ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಹಿಂದೆ ತಾಲ್ಲೂಕು ಪಂಚಾಯಿತಿಯಲ್ಲಿ ಕಸಗುಡಿಸಿ ಪ್ರತಿಭಟಿಸಿದ್ದ ಕರುಣಾಕರ್ ಶೆಟ್ಟರು, ಈ ಸಲ ಇಡೀ ತಾಲ್ಲೂಕಿಗೆ ಕುಡಿಯುವ ನೀರಿನ ಸೌಕರ್ಯ ಒದಗಿಸಲು, ಹಣ ಮಂಜೂರು ಏಕೆ ಮಾಡುತ್ತಿಲ್ಲ. ಹೊಸನಗರಕ್ಕೆ ಮಾತ್ರವೇ ಈ ನಿರ್ಲಕ್ಷ್ಯವೇ ಏಕೆ ಎಂದು ಪ್ರಶ್ನಿಸಿದ್ದಾರೆ. ಜನರು ಕುಡಿಯುವ ನೀರು ಒದಗಿಸಿ ಎಂದು ಪ್ರಶ್ನಿಸುತ್ತಾರೆ. ಆದರೆ ಪಂಚಾಯಿತಿಗಳಿಗೆ ಹಣ ಒದಗಿಸುತ್ತಿಲ್ಲ. ನೀರಿನ ಟ್ಯಾಂಕರ್​ಗಳ ಮೂಲಕ ನೀರು ಒದಗಿಸಲು ಸಾಧ್ಯವಾಗದೇ, ಜನರಿಂದ ಮಾತು ಕೇಳಬೇಕಾದ ಸನ್ನಿವೇಶವಿದೆ ಎಂದು ಅಳಲು ತೋಡಿಕೊಂಡಿದ್ಧಾರೆ. 


ಇದನ್ನೂ ಓದಿ: ವಿದ್ಯುತ್ ಬಿಲ್ ಕಟ್ಟಬೇಡಿ: ಮಹಿಳೆಯರು ಪ್ರಯಾಣಕ್ಕೆ ಟಿಕೆಟ್ ಪಡೆಯಬೇಡಿ: ಜನರಿಗೆ ವಿಪಕ್ಷಗಳ ಕರೆ


ಕಳೆದ ಒಂದುವರೆ ತಿಂಗಳಿನಿಂದ ಮನೆ ಮನೆಗೆ ನೀರನ್ನ ಟ್ಯಾಂಕರ್ ಮೂಲಕ ಒದಗಿಸಲಾಗಿದೆ. ಈ ಮಧ್ಯೆ   ಜಿಲ್ಲಾಡಳಿತ ನಡೆಸಿದ ಟಾಸ್ಕ್​ ಫೋರ್ಸ್ ಸಭೆಯಲ್ಲಿ, ಪ್ರತಿ ತಾಲ್ಲೂಕಿಗೆ 15 ಲಕ್ಷ ರೂಪಾಯಿ ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ಧರು. ನೀರಿನ ಸೌಲಭ್ಯ ಒದಗಿಸಿ ಎಂದು ಹೇಳಿದ್ದರು. ಆದರೆ ಇದುವರೆಗೂ ಬಿಡಿಗಾಸನ್ನು ಸಹ ನೀಡಿಲ್ಲ . ಈ ಬಗ್ಗೆ ಅಧಿಕಾರಿಗಳನ್ನ ಕೇಳಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ. ಆದರೆ ನಾವು ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ. ನಾವಿಲ್ಲಿ ಶುದ್ಧವಾಗಿದ್ದೇವೆ , ನಾವು ಶುದ್ಧವಾಗಿದ್ದೇವೆ ಎನ್ನುವುದನ್ನ ತೋರಿಸುವುದ್ದಕ್ಕಾಗಿಯೇ ಕಚೇರಿ ಮುಂದೆ ಸಗಣಿ ನೀರನ್ನ ಸುರಿದುಕೊಂಡು ಶುದ್ಧವಾಗಿದ್ದೇನೆ. ಹಾಗಾಗಿ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದೇನೆ ಎಂದು ಆಕ್ರೋಶ ಹೊರಹಾಕಿದ್ಧಾರೆ. 


ಇನ್ನೂ ಕರುಣಾಕರ್​ ಶೆಟ್ಟರ ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಉಪವಿಭಾಗೀಯ ಅಧಿಕಾರಿಯವರು ಹೊಸನಗರ ತಾಲ್ಲೂಕಿಗೆ,  ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಗೆ 20 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ಈ ಪೈಕಿ 10 ಲಕ್ಷ ರೂಪಾಯಿ ಅನುದಾನ ಮೊದಲ ಕಂತಿನಲ್ಲಿ ಬಂದಿದೆ. ನಗರ ಪಂಚಾಯ್ತಿಯಿಂದಲೇ ಮೊದಲು ಹಣ ಬಿಡುಗಡೆ ಮಾಡಿ, ಕುಡಿಯುವ ನೀರಿನ ಸೌಕರ್ಯಕ್ಕೆಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಈಹಿನ್ನೆಲೆಯಲ್ಲಿ ಕರುಣಾಕರ್ ಶೆಟ್ಟರು ಪ್ರತಿಭಟನೆಯನ್ನ ಕೈ ಬಿಟ್ಟಿದ್ಧಾರೆ.


ಇದನ್ನೂ ಓದಿ: ಶಾದಿ.ಕಾಮ್ ನಲ್ಲಿ ಪರಿಚಯ,  ಓಯೋದಲ್ಲಿ ಮಜಾ: ಕೊನೆಗೆ ಯುವತಿಗೆ ಕೈಕೊಟ್ಟು ಬೇರೆ ನಿಖಾ ಆದ ಐನಾತಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.