ಬೆಂಗಳೂರು : ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬೆನ್ನಲ್ಲೆ ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣ ಮಾಡುವ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಜೂನ್ 11 ರಿಂದ ಇಲ್ಲಿವರೆಗೂ ನಿಗಮಕ್ಕೆ ನಲವತ್ತು ಕೋಟಿಗೂ ಅಧಿಕ ಮೌಲ್ಯ ಲಾಸ್ ಆಗಿದೆ.


COMMERCIAL BREAK
SCROLL TO CONTINUE READING

ದಿನಕಳೆದಂತೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಉಚಿತ ಪ್ರಯಾಣ ಬೆಳೆಸುತ್ತಿರುವ ಮಹಿಳಾ ಪ್ರಯಾಣಿಕರು ಆನ್ ಲೈನ್ ಟಿಕೆಟ್ ಬುಕ್ಕಿಂಗ್ ನತ್ತಲೂ ಮುಖ ಮಾಡಿದ್ದಾರೆ. ಇದರಿಂದಾಗಿ ಪ್ರತಿನಿತ್ಯವೂ ಯಾವುದೇ ಸಮಸ್ಯೆ ನೀಡದೇ ತನ್ನ ಕಾರ್ಯನಿರ್ವಹಿಸುತ್ತಿದ್ದ ಕೆಎಸ್ಆರ್‌ಟಿಸಿ ನಿಗಮದ ವೆಬ್‌ ಸೈಟ್ ಕೈ ಕೊಟ್ಟಿದೆ. ದೂರದ ಊರುಗಳಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಅಡ್ವಾನ್ಸ್ ಬುಕ್ಕಿಂಗ್ ಅಂತ ಮಾಡ್ತಿದ್ರೆ ನಿಗಮದ ಸರ್ವರ್ ಕೈ ಕೊಡುತ್ತಿದೆ. ಇದರಿಂದಾಗಿ ಟ್ವಿ ನಲ್ಲಿ ಸರ್ವರ್ ಡೌನ್ ಸಮಸ್ಯೆಯನ್ನ ಟ್ರೋಲ್ ಮಾಡಲಾಗ್ತಿದೆ.


ಇದನ್ನೂ ಓದಿ: ಕೇಂದ್ರದ ದ್ವೇಷ ರಾಜಕಾರಣ, ಬಡವರ ವಿರೋಧಿ ನೀತಿ ವಿರುದ್ಧ ಜೂ. 20 ಪ್ರತಿಭಟನೆ


ಟಿಕೆಟ್ ಬುಕ್ ಮಾಡಿದ್ರೆ ಅಮೌಂಟ್ ಕಟ್ ಆಗ್ತಿದೆ ಸೀಟ್ ಬುಕ್ ಆಗ್ತಿಲ್ಲ : ಅನಿವಾರ್ಯತೆ ಇರುವ ಕಡೆ ಪ್ರಯಾಣ ಬೆಳೆಸಲು ಟಿಕೆಟ್‌ ಅಡ್ವಾನ್ಸ್ ಬುಕ್ಕಿಂಗ್ ಮಾಡಿದರೆ ನಿಗಮದ ವೆಬ್ ಸೈಟ್ ನಲ್ಲಿ ಬುಕ್ ಆಗ್ತಿಲ್ಲ ಆದ್ರೆ ಅಮೌಂಟ್ ಮಾತ್ರ ಕಟ್ ಆಗ್ತಿದೆ ಎಂದು ಪ್ರಯಾಣಿಕರು ಕೆಎಸ್ಆರ್‌ಟಿಸಿ ನಿಗಮದ ವಿರುದ್ಧ ಅಸಮಧಾನ ಹೊರ ಹಾಕ್ತಿದ್ದಾರೆ. ಕೂಡಲೇ ನಮ್ಮ ಹಣ ಹಿಂತಿರುಗಿಸಿ ಎಂದು ನೇರವಾಗಿ ನಿಗಮದ ಅಧಿಕಾರಿಗಳಿಗೆ ಆಗ್ರಹ ಮಾಡುತ್ತಿದ್ದಾರೆ.


ಕೆಎಸ್ಆರ್‌ಟಿಸಿ ಸಹಾಯವಾಣಿಗೆ ಕರೆ ಮಾಡಿದ್ರು ನೋ ರೆಸ್ಪಾನ್ಸ್ : ಇನ್ನು ಯಾವಾಗ ನಮ್ಮ ಹಣ ವಾಪಸ್ ಮಾಡ್ತಿರಾ ಎಂದು ಪ್ರಶ್ನೆ ಗಳ ಸುರಿಮಳೆ ಕೆಎಸ್ ಆರ್ ಟಿ ಸಿ ನಿಗಮಕ್ಕೆ ಒತ್ತಾಯ ಮಾಡಲಾಗ್ತಿದೆ. ಇದಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ ಕೆಎಸ್ಆರ್ಟಿಸಿ ಟೆಕ್ನಿಕಲ್ ಸಮಸ್ಯೆಯಿಂದ ‌ಸರ್ವರ್ ಡೌನ್ ಆಗಿದೆ. ಹಾಗಾಗಿ ಐದರಿಂದ ಏಳು ದಿನದೊಳಗೆ ನಿಮ್ಮ ಹಣ ರೀ ಫಂಡ್ ಆಗುತ್ತದೆ ಉತ್ತರವನ್ನ ಅಧಿಕಾರಿಗಳು ನೀಡಿದ್ದಾರೆ.


ಇದನ್ನೂ ಓದಿ: ಶಕ್ತಿ ಯೋಜನೆ ಪರಿಣಾಮ: ಬಸ್ ಇಲ್ಲದೇ ವಿದ್ಯಾರ್ಥಿಗಳ ಪರದಾಟ, ಹಲವೆಡೆ ಪ್ರತಿಭಟನೆ


ದಿನೆ ದಿನೆ ಏರುತ್ತಲೇ ಇದೆ ಶಕ್ತಿ ಫಲಾನುಭವಿಗಳ ಸಂಖ್ಯೆ : ರಾಜ್ಯದ್ಯಂತ ಶಕ್ತಿಗೆ ಸಿಕ್ಕಾ ಪಟ್ಟೆ ಡಿಮ್ಯಾಂಡ್ ಹೆಚ್ಚಾಗಿದೆ. ರಾಜ್ಯದ ನಾಲ್ಕೂ ನಿಗಮಗಳಲ್ಲಿ ಮಹಿಳೆಯರ ಕಾರುಬಾರು ಶುರುವಾಗಿದ್ದು, ನಿತ್ಯವೂ ಬಸ್ ಗಳಲ್ಲಿ ಪ್ರಯಾಣ ಮಾಡುವ ಮಹಿಳೆಯರ ಸಂಖ್ಯೆ ಏರುಗತಿಯಲ್ಲೇ ಇದೆ. ಜೂನ್ 15 ರಂದ ದಾಖಲೆ ಪ್ರಮಾಣದಲ್ಲಿ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ.


ಶಕ್ತಿ ಯೋಜನೆ ಅಡಿಯಲ್ಲಿ ಜೂನ್ 15 ರಂದು ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ವಿವರ


  • ಕೆಎಸ್ಆರ್‌ಟಿಸಿ 16,01,986. ಮಹಿಳಾ ಪ್ರಯಾಣಿಕರು ಪ್ರಯಾಣ

  • ಇದರಿಂದ ನಿಗಮಕ್ಕೆ ಪ್ರಯಾಣದ ಮೌಲ್ಯ- 4,56,12,987

  • ಬಿಎಂಟಿಸಿ- 17,67,486.

  • ಮಹಿಳಾ ಪ್ರಯಾಣಿಕರ ಪ್ರಯಾಣ

  • ಇದರಿಂದ ನಿಗಮಕ್ಕೆ ಆದ ಮೌಲ್ಯ-2,28,17,189.

  • ವಾಯುವ್ಯ ಸಾರಿಗೆ- 13,18,021.

  • ಮಹಿಳಾ ಪ್ರಯಾಣಿಕರ ಪ್ರಯಾಣ

  • ಇದರ ಮೌಲ್ಯ-3,21,81,665.

  • ಕಲ್ಯಾಣ ಕರ್ನಾಟಕ - 7,18,136

  • ಮಹಿಳಾ ಪ್ರಯಾಣಿಕರ ಪ್ರಯಾಣ

  • ಇದರ ಮೌಲ್ಯ-2,31,77,744.

  • ಒಟ್ಟು ಪ್ರಯಾಣ ‌ಮಾಡಿದ‌ ಮಹಿಳೆಯರ ಸಂಖ್ಯೆ- 54,05,629.

  • ಒಟ್ಟು ಮಹಿಳೆಯರ ಪ್ರಯಾಣದ ಮೌಲ್ಯ- 12,37,89,585.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.