ಬೆಂಗಳೂರು: ಲಾಕ್‍ಡೌನ್ (Lockdown)  ಹಿನ್ನೆಲೆಯಲ್ಲಿ ವಾಹನ ಸಂಚಾರ, ಜನರ ಓಡಾಟ ನಿರ್ಭಂದಿಸಿರುವುದರಿಂದ ಆರೋಗ್ಯ, ತುರ್ತು ವೈದ್ಯಕೀಯ ತಪಾಸಣೆಗಾಗಿ ಮಾನವೀಯತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯವಿರುವವರಿಗೆ ಪಾಸ್ ನೀಡುವ ಸೌಲಭ್ಯ ಕಲ್ಪಿಸಿದೆ. ಆದರೆ ಇಲ್ಲಿನ‌ ನರೇಂದ್ರ ಗ್ರಾಮದಲ್ಲಿ ಡಿವೈಎಸ್‍ಪಿ ರವಿನಾಯಕ್ ರೌಂಡ್ಸ್ ನಲ್ಲಿದ್ದಾಗ ವೈದ್ಯಕೀಯ ಪಾಸ್ ಪಡೆದು ಮದುವೆ ಕಾರ್ಯ ಮುಗಿಸಿ ಬಂದ ವಾಹನವನ್ನು ಜಪ್ತಿ ಮಾಡಿದ್ದಾರೆ. 


ಕ್ಯಾರೆಂಟೈನ್ ಸಮಯದಲ್ಲಿ ಅನುಷ್ಕಾ ಪತಿ ಕೊಹ್ಲಿಗೆ ಮಾಡಿದ ಹೇರ್ ಸ್ಟೈಲ್ ನೀವೂ ಒಮ್ಮೆ ನೋಡಿ


COMMERCIAL BREAK
SCROLL TO CONTINUE READING

ಪಾಸ್ ದುರಪಯೋಗ ಪಡಿಸಿಕೊಂಡಿರುವವರು ವಧುವಿನ ಕಡೆಯವರಾಗಿದ್ದು, ಉಪ್ಪಿನ ಬೇಟಗೇರಿ ಗ್ರಾಮದವರೆಂದು ತಿಳಿಸಿದ್ದಾರೆ. ನಿನ್ನೆ ದಿನ ಹುಬ್ಬಳ್ಳಿಯಲ್ಲಿ ಮದುವೆ ಕಾರ್ಯ ಮುಗಿಸಿಕೊಂಡು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸ್ಥಾಪಿಸಿರುವ ಚೆಕ್ ಪೋಸ್ಟ್‍ಗಳನ್ನು ತಪ್ಪಿಸಿ, ಹುಬ್ಬಳ್ಳಿಯಿಂದ ಕೆಎ-22 ಝೆಡ್-5691 ಸಂಖ್ಯೆಯ ಇನೋವಾ ವಾಹನದಲ್ಲಿ ಒಂದು ಮಗು ಸೇರಿದಂತೆ ಒಟ್ಟು 9 ಜನ ಹೊರಟಿದ್ದರು.


Covid-19 ಲಾಕ್‌ಡೌನ್ ವೇಳೆ ಉದ್ಯೋಗ ನಷ್ಟ, ವೇತನ ಕಡಿತ ಭಾರತೀಯರನ್ನು ಹೆಚ್ಚು ಕಾಡುತ್ತಿದೆ: ಸಮೀಕ್ಷೆ


ಡಿವೈಎಸ್‍ಪಿ ವಾಹನ ನಿಲ್ಲಿಸಿ ಪರಿಶಿಲಿಸಿದಾಗ ತುರ್ತು ವೈದ್ಯಕೀಯ ಅಗತ್ಯಕ್ಕಾಗಿ ನೀಡಿದ್ದ ಪಾಸ್ ದುರುಪಯೋಗ ಮಾಡಿಕೊಂಡಿದ್ದು ಅವರ ಗಮನಕ್ಕೆ ಬಂದಿದೆ. ಎಸ್‍ಪಿ ವರ್ತಿಕಾ ಕಟಿಯಾರ್ ಅವರ ಮಾರ್ಗದರ್ಶನದಲ್ಲಿ ತಕ್ಷಣ ಕಾರ್ಯಪ್ರವೃತರಾದ ಡಿವೈಎಸ್‍ಪಿ ರವಿ ನಾಯಕ ಅವರು ಇನೋವಾ ವಾಹನದಲ್ಲಿದ್ದ 9 ಜನರನ್ನು ವೈದ್ಯಕೀಯ ತಪಾಸಣೆಗಾಗಿ ಪೊಲೀಸ್ ವಾಹನದಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿ, ಇನೋವಾ ವಾಹನವನ್ನು ಜಪ್ತಿ ಮಾಡಿದ್ದಾರೆ.


ಅಲ್ಲದೇ ತಪಾಸಣೆ ನಂತರ ಈ ಎಲ್ಲ 9 ಜನರಿಗೆ ಹೋಮ್ ಕ್ವಾರಂಟೈನ್ (Home quarantine) ಕಡ್ಡಾಯಗೊಳ್ಳಿಸಿ, ಸಂಬಂಧಿಸಿದವರಿಗೆ ನಿರ್ದೇಶನ ನೀಡಿದ್ದಾರೆ. ಮಾನವೀಯ ಹಿನ್ನೆಲೆಯಲ್ಲಿ ಅಗತ್ಯ ಮತ್ತು ತುರ್ತು ನೇರವಿಗಾಗಿ ಜಿಲ್ಲಾಡಳಿತ ನೀಡುವ ಪಾಸ್‍ಗಳನ್ನು ದುರುಪಯೋಗಪಡಿಸಿಕೊಂಡರೆ ಅಂತಹವರ ವಾಹನಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆದು, ಹೆಚ್ಚಿನ ಮೊತ್ತದ ದಂಡ ವಿಧಿಸಲಾಗುವುದು ಮತ್ತು ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ್ದರಿಂದ ಅಂತವರ ವಿರುದ್ಧ ಐಪಿಸಿ ಸೆಕ್ಷನ್ 188 ರಡಿ ಪ್ರಕರಣ ದಾಖಲಿಸಲಾಗುವದು ಎಂದು ಡಿವೈಎಸ್‍ಪಿ ಎಚ್ಚರಿಸಿದ್ದಾರೆ.


PF ಹಣ ಹಿಂಪಡೆಯುವ ನಿಯಮ ಬದಲಾವಣೆ


ಧಾರವಾಡ ಗ್ರಾಮೀಣ ಜಿಲ್ಲೆಯಲ್ಲಿ ಲಾಕ್‍ಡೌನ್ ಉಲ್ಲಂಘಿಸಿ, ಅನಗತ್ಯವಾಗಿ ರಸ್ತೆಗಿಳಿದ  ಒಂದು ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಈಗಾಗಲೇ ಜಪ್ತಿ ಮಾಡಲಾಗಿದೆ. ಇನ್ನೂ ಮುಂದೆ ಜಿಲ್ಲಾಡಳಿತ ಅಥವಾ ಇತರ ಇಲಾಖೆಗಳು ಅಗತ್ಯ ಸೇವೆಗಾಗಿ ನೀಡುವ ಪಾಸ್‍ಗಳನ್ನು ದುರುಪಯೋಗ ಪಡಿಸಿಕೊಂಡಿದ್ದು ಕಂಡು ಬಂದರೆ ಅಂತವರ ವಿರುದ್ಧ ಕ್ರೀಮಿನಲ್ ಪ್ರಕರಣ ದಾಖಲಿಸಿ, ನಿರ್ಧಾಕ್ಷಿಣ್ಯವಾಗಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.