ಹಿಮಾಚಲ ಪ್ರದೇಶದಲ್ಲಿ ಭೂಕಂಪ..!
,,,,
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾನುವಾರದಂದು ಭೂಕಂಪ ಸಂಭವಿಸಿದೆ ಎಂದು ಅಧಿಕೃತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಆದರೆ ಯಾವುದೇ ಸಾವು ನೋವುಗಳು ಅಥವಾ ಹಾನಿಗಳ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ತಿಳಿದು ಬಂದಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪ 3.2ರಲ್ಲಿ ಬೆಳಗ್ಗೆ 3.36 ಗಂಟೆಗೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಐಎಎನ್ಎಸ್ ಗೆ ತಿಳಿಸಿದೆ. ಕಿನ್ನೌರ್ ಜಿಲ್ಲೆಯ ಗಡಿಯಲ್ಲಿರುವ ಶಿಮ್ಲಾ ಪ್ರದೇಶವು ಭೂಕಂಪನದ ಅಧಿ ಕೇಂದ್ರವಾಗಿದೆ, ಇದು ಚೀನಾದೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಜಮ್ಮು ಮತ್ತು ಕಾಶ್ಮೀರದ ಪಕ್ಕದಲ್ಲಿರುವ ಚಂಬಾ ಜಿಲ್ಲೆಯು ಜೂನ್ 14ರಂದು ರಿಕ್ಟರ್ ಮಾಪಕದಲ್ಲಿ 4.6 ಭೂಕಂಪ ಸಂಭವಿಸಿತ್ತು