ಶಿರಸಿ: ಇಡಿ ಇಲಾಖೆ ಬಿಜೆಪಿಯ ಎಲೆಕ್ಷನ್ ಡಿಪಾರ್ಟ್ಮೆಂಟ್; ಧೈರ್ಯ ಇದ್ರೆ ಅಮಿತ್ ಶಾ ಮಗನ ಮೇಲೆ ತನಿಖೆ ನಡೆಸಲಿ ಎಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಧಾನಿ ನರೇಂದ್ರ ಮೋದಿಯವರಿಗೆ ನಮ್ಮ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನ ಎದುರಿಸಲು ಸಾಧ್ಯವಾಗದೆ ಭಯ ಸ್ಟಾರ್ಟ್ ಆಗಿದೆ. ಆದ್ದರಿಂದ ಇಡಿ(ಜಾರಿ ನಿರ್ದೇಶನಾಲಯ)ಮೂಲಕ ಬೆದರಿಸಲು ಹೊರಟಿದೆ. ಇಡಿ ಅಧಿಕಾರಿಗಳು ಬಿಜೆಪಿಯ ಎಲೆಕ್ಷನ್ ಡಿಪಾರ್ಟ್ಮೆಂಟ್ ಆಗಿ ಕೆಲಸ ಮಾಡ್ತಿದೆ ಎಂದು ಟೀಕಿಸಿದ್ರು.Exclusive: ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿಗೆ ಫ್ರೈಡ್ ಚಿಕನ್ ಅಂದ್ರೆ ಪಂಚಪ್ರಾಣವಂತೆ!!


ಐಪಿಎಲ್ ನಲ್ಲಿ ಸಾವಿರಾರು ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳಿಗೆ ಉತ್ತರವಿಲ್ಲ. ಸಚಿನ್ ತೆಂಡೂಲ್ಕರ್, ಕ್ರೀಸ್ ಗೇಲ್, ಸುನೀಲ್ ಗವಾಸ್ಕರ್ ಗಿಂತಲೂ ಭಯಾನಕ ಬ್ಯಾಟ್ಸ್‌ಮನ್, ಅವನಿಗಿಂತ ದೊಡ್ಡ ಕ್ರಿಕೆಟರ್ ಜಗತ್ತಿನಲ್ಲೇ ಯಾರೂ ಇಲ್ಲ‌ ಹೀಗಾಗಿ ಆತನಿಗೆ ಬಿಸಿಸಿಐ ಸೆಕ್ರೆಟರಿ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ರು. ನಗುವಿನ ಕಚಗುಳಿ ಇಡಲು ಮತ್ತೆ ಬರುತ್ತಿದೆ ದಿ ಕಪಿಲ್ ಶರ್ಮ ಶೋ ..!


ಡಿಸೆಂಬರ್ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತೆ. ಆ ನಿಟ್ಟಿನಲ್ಲಿ ನಾವು ಚುನಾವಣೆ ಎದುರಿಸಲು ಸಿದ್ದರಾಗಿದ್ದೇವೆ. ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ.


ಶವದ ಮೇಲೂ ಜಿಎಸ್ಟಿ ಬರಬಹುದು. 


ಜನ ಸಾಮಾನ್ಯರು ಬಳಸುವ ದಿನಸಿ ಪದಾರ್ಥಗಳ ಮೇಲೆ ಜಿಎಸ್ಟಿ ಹಾಕುವ ಮೂಲಕ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆದಿದೆ. ಶವಾಗಾರ ನಿರ್ಮಾಣ ಸೇರಿದಂತೆ ಇನ್ನಿತರೆ ವಸ್ತುಗಳ ಮೇಲೆ ಜಿಎಸ್ಟಿ ವಿಧಿಸಿದೆ. ಮುಂದಿನ ದಿನಗಳಲ್ಲಿ ಶವದ ಮೇಲೂ ಜಿಎಸ್ಟಿ ತರಬಹುದು, ಯಾವುದೇ ಅನುಮಾನವಿಲ್ಲ. ಮೋದಿ ನೇತೃತ್ವದ ಸರ್ಕಾರದಲ್ಲಿ ಈಗ ಬದುಕಿರುವವರು ಯಾರು ಸಂತೋಷವಾಗಿಲ್ಲ, ಶವ ಮಾತ್ರ ಸಂತೋಷವಾಗಿದೆ. ಶವದ ಮೇಲೂ ಜಿಎಸ್ಟಿ ತರುವ ಕಾಲ ಬರಲಿದೆ ಎಂದ್ರು.


ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕನ್ನಡ ಡಿಸಿಸಿ ಅಧ್ಯಕ್ಷ ಭಿಮಣ್ಣ ನಾಯ್ಕ್, ಮುಖಂಡರಾದ ಮಂಜುನಾಥ್ ನಾಯ್ಕ್, ಲೋಹಿತ್ ಸೇರಿದಂತೆ ಮುಖಂಡರು ಭಾಗವಹಿಸಿದ್ರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.