Exclusive: ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿಗೆ ಫ್ರೈಡ್ ಚಿಕನ್ ಅಂದ್ರೆ ಪಂಚಪ್ರಾಣವಂತೆ!!

Srinidhi Shetty: ಕೆಜಿಎಫ್ 2 ನಟಿ ಶ್ರೀನಿಧಿ ಶೆಟ್ಟಿ ಅವರು ಜೀ ನ್ಯೂಸ್ ಡಿಜಿಟಲ್ ಜೊತೆಗಿನ ವಿಶೇಷ ಚಾಟ್‌ನಲ್ಲಿ ತಮ್ಮ ಆಹಾರದ ಮೇಲಿನ ಪ್ರೀತಿ ಮತ್ತು ಅವರು ಏನು ತಿನ್ನಲು ಇಷ್ಟಪಡುತ್ತಾರೆ ಎಂಬುದರ ಕುರಿತು ಹೇಳಿದ್ದಾರೆ.

Written by - Chetana Devarmani | Last Updated : Jul 21, 2022, 05:49 PM IST
  • ನಟಿ ಶ್ರೀನಿಧಿ ಶೆಟ್ಟಿ ಅವರು ಮೆಗಾಹಿಟ್‌ ಕೆಜಿಎಫ್‌ ಸಿನಿಮಾದಲ್ಲಿನ ನಟನೆಯ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಬೆಡಗಿ
  • ರಾಕಿ ಭಾಯ್ ಪಾತ್ರಧಾರಿ ರಾಕಿಂಗ್‌ ಸ್ಟಾರ್‌ ಯಶ್ ಜೊತೆಗಿನ ಅವರ ಜೋಡಿಯು ಅಭಿಮಾನಿಗಳ ಮೆಚ್ಚುಗೆ ಗಳಿಸಿತು
  • ಶ್ರೀನಿಧಿ ಅವರು ಆಹಾರದ ಮೇಲಿನ ಪ್ರೀತಿ ಮತ್ತು ಅವರು ಏನು ತಿನ್ನಲು ಇಷ್ಟಪಡುತ್ತಾರೆ ಎಂಬುದರ ಕುರಿತು ಹೇಳಿಕೊಂಡಿದ್ದಾರೆ.
Exclusive: ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿಗೆ ಫ್ರೈಡ್ ಚಿಕನ್ ಅಂದ್ರೆ ಪಂಚಪ್ರಾಣವಂತೆ!!  title=
ನಟಿ ಶ್ರೀನಿಧಿ ಶೆಟ್ಟಿ

ನವದೆಹಲಿ: ನಟಿ ಶ್ರೀನಿಧಿ ಶೆಟ್ಟಿ ಅವರು ಮೆಗಾಹಿಟ್‌ ಕೆಜಿಎಫ್‌ ಸಿನಿಮಾದಲ್ಲಿನ ನಟನೆಯ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಬೆಡಗಿ. ರಾಕಿ ಭಾಯ್ ಪಾತ್ರಧಾರಿ ರಾಕಿಂಗ್‌ ಸ್ಟಾರ್‌ ಯಶ್ ಜೊತೆಗಿನ ಅವರ ಜೋಡಿಯು ಅಭಿಮಾನಿಗಳ ಮೆಚ್ಚುಗೆ ಗಳಿಸಿತು. ಜೀ ನ್ಯೂಸ್ ಡಿಜಿಟಲ್‌ನೊಂದಿಗಿನ ವಿಶೇಷ ಚಾಟ್‌ನಲ್ಲಿ, ಶ್ರೀನಿಧಿ ಅವರು ಆಹಾರದ ಮೇಲಿನ ಪ್ರೀತಿ ಮತ್ತು ಅವರು ಏನು ತಿನ್ನಲು ಇಷ್ಟಪಡುತ್ತಾರೆ ಎಂಬುದರ ಕುರಿತು ಹೇಳಿಕೊಂಡಿದ್ದಾರೆ.

ಸಂದರ್ಶನದ ಆಯ್ದ ಪ್ರಶ್ನೆ ಮತ್ತು ಉತ್ತರ ಇಲ್ಲಿವೆ:

ಪ್ರ 1: ಕೆಜಿಎಫ್ 1 & 2 ರ ಭಾಗವಾಗಿರುವುದು ಹೇಗೆ ಅನಿಸುತ್ತದೆ?

ಉ: ನನಗೆ ತುಂಬಾ ಖುಷಿಯಾಗುತ್ತೆ. ಕೃತಜ್ಞಳಾಗಿರುವೆ.

ಇದನ್ನೂ ಓದಿ: ‘ಗುಮ್ಮಾ ಬಂದ ಗುಮ್ಮಾ..’ ವಿಕ್ರಾಂತ್‌ ರೋಣ ಚಿತ್ರದ ಮತ್ತೊಂದು ಸಾಂಗ್‌ ರಿಲೀಸ್‌

ಪ್ರ 2: ನೀವು ಆಹಾರಪ್ರಿಯರೇ? ಹೌದು ಎಂದಾದರೆ, ಯಾವುದನ್ನು ಹೆಚ್ಚು ಇಷ್ಟಪಡುತ್ತೀರಾ?

ಉ: ನಾನು ಒಬ್ಬ ಆಹಾರಪ್ರೇಮಿ! ಅದಕ್ಕಾಗಿಯೇ ನಾನು KFC ಯೊಂದಿಗಿನ ಈ ಸಹಯೋಗವನ್ನು ತುಂಬಾ ಆನಂದಿಸಿದೆ. ನಾನು ಡಯೇಟ್‌ ಅನುಸರಿಸುತ್ತಿರುವಾಗ, ಪ್ರತಿ ಬಾರಿ ನನ್ನ ನೆಚ್ಚಿನ ಕೆಲವು ಊಟ ಸವಿಯಲು ಇಷ್ಟಪಡುತ್ತೇನೆ. ನನಗೆ ಸಿಹಿ ತುಂಬಾ ಇಷ್ಟ. ಯಾವುದೇ ರೀತಿಯ ಸಿಹಿಭಕ್ಷ್ಯವನ್ನು ಸವಿಯಲು ಇಷ್ಟ ಪಡುವೆ. ಇದನ್ನು ಬಿಟ್ಟು ನಾನು ಫ್ರೈಡ್ ಚಿಕನ್ ಇಷ್ಟ ಪಡುವೆ. ನಾನು ಕೆಎಫ್‌ಸಿಯ ಪಾಪ್‌ಕಾರ್ನ್ ಚಿಕನ್ ಅನ್ನು ತಿನ್ನಲು ಇಷ್ಟ ಪಡುವೆ. 

ಪ್ರ 3: ಕೆಎಫ್‌ಸಿ ಜೊತೆಗಿನ ನಿಮ್ಮ ಒಡನಾಟದ ಬಗ್ಗೆ ನಮಗೆ ತಿಳಿಸಿ. ಪಾಪ್‌ಕಾರ್ನ್ ನ್ಯಾಚೋಸ್‌ನ ವಿಶೇಷತೆ ಏನು?

ಉ: ನಾನು ಕೆಎಫ್‌ಸಿಯೊಂದಿಗೆ ಕೆಲಸ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದೇನೆ. ನಾಣು ಅವರ ಫ್ರೈಡ್ ಚಿಕನ್ ಅನ್ನು ಇಷ್ಟಪಡುತ್ತೇನೆ. ಇದು ಹೊಸ ಪಾಪ್‌ಕಾರ್ನ್ ನ್ಯಾಚೋಸ್‌ನಂತೆಯೇ ಅತ್ಯಾಕರ್ಷಕವಾಗಿದೆ. ಚಿತ್ರೀಕರಣವು ಸಹಜವಾಗಿ ಮೋಜಿನದ್ದಾಗಿದ್ದರೂ, ಅದರ ಉತ್ತಮ ಭಾಗವೆಂದರೆ ನಾನು ಈ ಕುರುಕುಲಾದ ಕಾಂಬೊ - KFC ಯ ಪಾಪ್‌ಕಾರ್ನ್ ಚಿಕನ್ ಮತ್ತು ಡೊರಿಟೋಸ್ ನ್ಯಾಚೋಸ್ ಮತ್ತು ಶಾಟ್‌ಗಳ ನಡುವೆ ಒಂದೋ ಎರಡೋ ತಿಂದಿರುವುದು. ಒಟ್ಟಿನಲ್ಲಿ ಇದೊಂದು ಅಸಾಧಾರಣ ಅನುಭವವಾಗಿದೆ.

ಇದನ್ನೂ ಓದಿ: ಅಪ್ಪಿತಪ್ಪಿಯೂ ಸಹ ಮನೆಯಲ್ಲಿ ಶಿವನ ಇಂತಹ ಫೋಟೋಗಳನ್ನು ಇಡಬೇಡಿ

ಪ್ರ 3: ನಿಮ್ಮ ಭವಿಷ್ಯದ ಯೋಜನೆಗಳೇನು?

ಉ: ಬಹಳಷ್ಟು ಯೋಜನೆಗಳು ಇನ್ನೂ ಮಾತುಕತೆಯಲ್ಲಿವೆ. ಹಾಗಾಗಿ ನಾನು ಇನ್ನೂ ಏನನ್ನೂ ಖಚಿತಪಡಿಸಲು ಬಯಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News