ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ಜಾರಿ ನಿರ್ದೇಶನಾಲಯ (ಇಡಿ) ಮತ್ತೊಮ್ಮೆ ನೊಟೀಸ್ ನೀಡಿದೆ. ಅಲ್ಲದೆ, ಡಿಕೆಶಿ ನೀಡಿದ್ದ ಮನವಿಯನ್ನು ತಿರಸ್ಕರಿಸಿದೆ.


COMMERCIAL BREAK
SCROLL TO CONTINUE READING

ಜಾರಿ ನಿರ್ದೇಶನಾಲಯ ಡಿಕೆ ಶಿವಕುಮಾರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿದೆ. ನಾಳೆ ಅಂದರೆ ಅಕ್ಟೋಬರ್ 7 ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ನೀಡಿದೆ.


ಇದನ್ನೂ ಓದಿ : ಆನೆಗೆ ಗಾಯ! ರಾಹುಲ್ ಗಾಂಧಿ ಪತ್ರಕ್ಕೆ ಸ್ಪಂದಿಸಲಾಗುವುದು: ಸಿಎಂ ಬೊಮ್ಮಾಯಿ


ಅದಕ್ಕೆ ವಿವರಣೆ ನೀಡಿ ಡಿಕೆ ಶಿವಕುಮಾರ್ ಸಮಯ ಕೇಳಿದ್ದರು. ಆದರೆ ಇಂದು 10 ನಿಮಿಷಗಳ ಹಿಂದೆ ಇಂದೇ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದೆ. 


ಇಡಿ ನೊಟೀಸ್ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನೀವು ಡೈರೆಕ್ಟ್ ಬರಲೇಬೇಕು ಎಂದಿದ್ದಾರೆ. 10 ನಿಮಿಷದ ಹಿಂದೆ ನನಗೆ ಮೇಲ್ ಮಾಡಿದ್ದಾರೆ. ನಾನು ನಮ್ಮ ವಕೀಲರ ಜೊತೆ ಮಾತನಾಡ್ತೇನೆ. ಅವರು ಹೋಗು ಅಂದರೆ ಹೋಗ್ತೇನೆ. ನಾನು ಕಾನೂನಿಗೆ ಗೌರವ ಕೊಡುವವನು. ನ್ಯಾಷನಲ್ ಹೆರಾಲ್ಡ್ ವಿಚಾರದಲ್ಲಿ ಕರೆದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಅವರನ್ನ ಕರೆಸಿದ್ರು. ತನಿಖೆ ನಡೆಸುತ್ತಿರುವ ಅಧಿಕಾರಿ ಕರೆದಿದ್ದಾರೆ. ಬಹುಶಃ ನ್ಯಾಷನಲ್ ಹೆರಾಲ್ಡ್ ಬಗ್ಗೆಯೇ ಇರಬೇಕು. ನಿಮಗೆ ಒಂದು ಕಡೆ ಕಿರಿಕಿರಿ ಮಾಡ್ತಿದ್ದಾರೆ. ನನಗೂ ಒಂದು ಕಡೆ ಕಿರಿಕಿರಿ ಮಾಡ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.


ಇದನ್ನೂ ಓದಿ : ಶಿರಾಳಕೊಪ್ಪದಲ್ಲಿ ನಡುಗಿದ ಭೂಮಿ, ಭಾರೀ ಶಬ್ದಕ್ಕೆ ಬೆಚ್ಚಿ ಬಿದ್ದ ಜನತೆ.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.