ಶಿರಾಳಕೊಪ್ಪದಲ್ಲಿ ನಡುಗಿದ ಭೂಮಿ, ಭಾರೀ ಶಬ್ದಕ್ಕೆ ಬೆಚ್ಚಿ ಬಿದ್ದ ಜನತೆ.!

ಶಿವಮೊಗ್ಗ  ಜಿಲ್ಲೆ ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.   ಭೂಮಿ ಕಂಪಿಸುವುದರ ಜೊತೆಗೆ  ಭಾರೀ ಶಬ್ದ ಕೇಳಿ ಬಂದಿದ್ದು, ಮನೆಗೆ ಗೋಡೆ ಹಂಚುಗಳು ಅಲುಗಾಡಿವೆ ಎನ್ನಲಾಗಿದೆ.

Written by - Ranjitha R K | Last Updated : Oct 6, 2022, 09:31 AM IST
  • ಶಿವಮೊಗ್ಗ ಜಿಲ್ಲೆಯಲ್ಲಿ ನಡುಗಿದ ಭೂಮಿ
  • ಭೂ ಕಂಪನದ ಜೊತೆಗೆ ಕೇಳಿ ಬಂದಿತ್ತು ಭಾರೀ ಶಬ್ದ
  • ಜಿಲ್ಲೆಯ ಜನತೆಯಲ್ಲಿ ಮೂಡಿದೆ ಆತಂಕ
ಶಿರಾಳಕೊಪ್ಪದಲ್ಲಿ ನಡುಗಿದ  ಭೂಮಿ,  ಭಾರೀ ಶಬ್ದಕ್ಕೆ ಬೆಚ್ಚಿ ಬಿದ್ದ ಜನತೆ.!  title=
Shiralakoppa earthquake

ಶಿವಮೊಗ್ಗ : ಶಿವಮೊಗ್ಗ  ಜಿಲ್ಲೆ ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಮೂಲಗಳ ಪ್ರಕಾರ ಮುಂಜಾನೆ 3.50 ರಿಂದ 4.00 ಗಂಟೆಯವರೆಗೂ ಭೂಮಿ ನಡುಗಿದ ಅನುಭವವಾಗಿದೆ ಎನ್ನಲಾಗಿದೆ.  ಭೂಮಿ ಕಂಪಿಸುವುದರ ಜೊತೆಗೆ  ಭಾರೀ ಶಬ್ದ ಕೇಳಿ ಬಂದಿದ್ದು, ಮನೆಗೆ ಗೋಡೆ ಹಂಚುಗಳು ಅಲುಗಾಡಿವೆ ಎನ್ನಲಾಗಿದೆ.  

ಮುಂಜಾನೆಯ ಸುಖ ನಿದ್ದೆಯಲ್ಲಿದ್ದ ಶಿರಾಳಕೊಪ್ಪದ ಜನ ಭಾರೀ ಶಬ್ದಕ್ಕೆ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೆ ಭೂಮಿ ಕಂಪಿಸುತ್ತಿರುವ ಅನುಭವವಾಗುತ್ತಿದ್ದಂತೆ ಮನೆಯಿಂದ ಹೊರ ಓದಿ ಬಂದಿದ್ದಾರೆ. ರಿಕ್ಟರ್ ಮಾಪನದಲ್ಲಿ ಭೂಕಂಪನದ ತೀವೃತೆ ದ 4.1ರಷ್ಟು ದಾಖಲಾಗಿದೆ ಎಂದು ತಿಳಿದು ಬಂದಿದೆ. ಶಿರಾಳಕೊಪ್ಪದ ಸೇರಿದಂತೆ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಎರಡಕ್ಕೂ ಹೆಚ್ಚು ಸಲ  ಭೂಮಿ ನಡುಗಿದ ಅನುಭವವಾಗಿದೆ ಎಂದು ಹೇಳಲಾಗಿದೆ. 

ಇದನ್ನೂ ಓದಿ : KSRTC ಬಸ್‌ ಟಿಕೆಟ್‌ನಲ್ಲಿ ನಾಡದ್ರೋಹಿ ʼಮಹಾರಾಷ್ಟ್ರ ಸರ್ಕಾರದ ಲಾಂಚನʼ..!

ಭಾರೀ ಶಬ್ದದೊಂದಿಗೆ ಭೂಕಂಪನ ಅನುಭವ ಆಗುತ್ತಿದ್ದಂತೆ ಸುಖ ನಿದ್ದೆಯಲ್ಲಿದ್ದ ಜನ  ಆತಂಕಗೊಂಡಿದ್ದಾರೆ. ಕಂಪನದ ಅನುಭವವಾಗುತ್ತಿದ್ದಂತೆಯೇ  ಮಕ್ಕಳು ಮರಿಗಳನ್ನು ಎದೆಗವಚಿಕೊಂಡು ಹೊರಗೆ ಓಡಿಬಂದಿದ್ದಾರೆ. ಮೊದಲಿಗೆ ಒಮ್ಮೆ ಭೂಮಿ ಕಂಪಿಸಿದೆ. ಇದಾಗಿ ಹತ್ತು ನಿಮಿಷದ ಬಳಿಕ ಮತ್ತೊಮ್ಮೆಭಾರೀ ಶಬ್ದ ಕೇಳಿ ಬಂದಿದೆಯಾದರೂ  ಕಂಪನದ ಅನುಭವ ಆಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಆ್ಯಂಡ್ರಾಯ್ಡ್​ ಆ್ಯಪ್​ನಲ್ಲಿ ಸಿಕ್ಕ ವರದಿಯನ್ನು ನಂಬುವುದಾದರೆ ಇವತ್ತು ಬೆಳಗಿನ ಜಾವ ನಡೆದ ಘಟನೆಯನ್ನು ಭೂಕಂಪನ ಎನ್ನಬಹುದಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕಾರಿಗಳು ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ ಸಸ್ಥಳೀಯರು ಮಾತ್ರ ಕಮೋಣ ಮತ್ತು ಶಬ್ದದಿಂದ ಆತಂಕಗೊಂಡಿದ್ದಾರೆ. 

ಇದನ್ನೂ ಓದಿ : ಬಿಜೆಪಿ-ಕಾಂಗ್ರೆಸ್ ಮುಕ್ತ ಕರ್ನಾಟಕ : ಹೆಚ್‌ಡಿಕೆ, ಕೆಸಿಆರ್ ಸಂಕಲ್ಪ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News