ಶಿಕ್ಷಣ ಇಲಾಖೆ ವಿರುದ್ಧ ಪೋಷಕರು, ಖಾಸಗೀ ಶಾಲಾ ಒಕ್ಕೂಟ ಗರಂ: ಮೂರು ಮೂರು ಪರೀಕ್ಷೆ ಬೇಕಾ ಎಂದು ಪ್ರಶ್ನೆ
Education Department vs Parents : ಶಿಕ್ಷಣ ಇಲಾಖೆಯ ನೂತನ ಪರೀಕ್ಷಾ ಪದ್ಧತಿಯಿಂದ ಮಕ್ಕಳಿಗೆ ಫೋಬಿಯಾ ಶುರುವಾಗಿದೆ ಎಂಬ ಆತಂಕ ಪೋಷಕರಲ್ಲಿ ಮನೆ ಮಾಡಿದೆ. ವರ್ಷಕ್ಕೆ ಮೂರ ಮೂರು ಪರೀಕ್ಷೆ ಮಾಡಲು ಹೊರಡಿರುವ ಶಿಕ್ಷಣ ಇಲಾಖೆಗೆ ಬುದ್ದಿ ಕೆಟ್ಟಿದೆಯಾ ಎಂಬ ಪ್ರಶ್ನೆ ಪೋಷಕರು ಹಾಕಿದ್ದಾರೆ.
ಬೆಂಗಳೂರು: ಏಕಾಏಕೀ ತೆಗೆದುಕೊಂಡಿರುವ ಪರೀಕ್ಷೆ ನಿರ್ಧಾರಕ್ಕೆ ನಮ್ಮ ಕಡೆಯಿಂದ ವಿರೋಧವಿದೆ ಎಂದು ಶಿಕ್ಷಣ ಇಲಾಖೆಗೆ ತಿಳಿಸಿದ್ದಾರೆ. ಎಸ್ ಎಸ್ ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆ ಅಗತ್ಯವಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಮೊದಲೇ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯದ್ದೇ ಟೆನ್ಶನ್ ಲ್ಲಿದ್ದಾರೆ. ಇದ್ರ ನಡುವೆ ಮೂರು ಪರೀಕ್ಷೆಗೆ ಪ್ರತ್ಯೇಕ ಪರೀಕ್ಷಾ ಶುಲ್ಕ ಕಟ್ಟಬೇಕು, ಪರೀಕ್ಷೆ ಹೆಸರಿನಲ್ಲಿ ಎರಡು ತಿಂಗಳು ಸುದೀರ್ಘ ಪ್ರಕ್ರಿಯೆ ಇರೋದ್ರಿಂದ ಮಕ್ಕಳ ಮನಸ್ಥಿತಿ ಏನಾಗಬೇಕು. ಮೊದಲ ಪರೀಕ್ಷೆಯಲ್ಲಿ ತೇರ್ಗಡೆ ಆದ ವಿದ್ಯಾರ್ಥಿಗಳು ಎರಡು ತಿಂಗಳು ಕಾಯಬೇಕು.
ಇದನ್ನೂ ಓದಿ-ಬಟ್ಟೆ ಬದಲಿಸುವಂತೆ ಮಹಿಳೆಯರನ್ನ ಬದಲಿಸುತ್ತಾನೆ : ಇನ್ಸ್ಪೆಕ್ಟರ್ ವಿರುದ್ಧ ಪತ್ನಿ ದೂರು
2ನೇ, 3ನೇ ಪರೀಕ್ಷೆ ಬರೆದು ಮೌಲ್ಯಮಾಪನ ಮುಗಿಯುವವರೆಗೂ ಕಾಯಬೇಕು. ಹೀಗಾಗಿ ವಿದ್ಯಾರ್ಥಿಗಳು, ಪೋಷಕರು, ಖಾಸಗಿ ಶಿಕ್ಷಣ ಸಂಘಟನೆಗಳಿಂದ ವಿರೋಧ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಇಲಾಖೆ ಏನೇ ತೀರ್ಮಾನ ತೆಗೆದುಕೊಂಡ್ರೂ ಶಿಕ್ಷಣ ತಜ್ಞರ ಸಲಹೆ ಪಡೆದು ಪರಿಶೀಲಿಸಬೇಕು ಅಲ್ಲದೇ ಮೂರು ಪರೀಕ್ಷೆ ಶುಲ್ಕ ಯಾರು ಕಟ್ಟಬೇಕು ಅನ್ನೋದು ತಿಳಿಸಬೇಕು ಎಂದು ಆಗ್ರಹವ್ಯಕ್ತಪಡಿಸಿದ್ದಾರೆ. ಈ ಮೂಲಕ ಶಿಕ್ಷಣ ಸಚಿವರ ಅವೈಜ್ಞಾನಿಕ ನಿರ್ಧಾರವಿದು ಎಂದು ರುಪ್ಸಾ ಖಾಸಗಿ ಶಾಲಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ವಿರೋಧನ್ನ ಹೊರ ಹಾಕಿದ್ದಾರೆ.
ಇದನ್ನೂ ಓದಿ-ಹಿಂದೂ ಧರ್ಮ ಹುಟ್ಟಿದ್ದು ಯಾವಾಗ, ಅದನ್ನು ಯಾರು ಸೃಷ್ಟಿಸಿದವರು..? : ಗೃಹ ಸಚಿವರ ಪ್ರಶ್ನೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.