ಹೆಂಡತಿಗೆ ಮೋಸ ಮಾಡಿ ಬೇರೆ ಹೆಂಗಸರ ಸಹವಾಸ: ಪೊಲೀಸಪ್ಪನ ವಿರುದ್ದ ಪತ್ನಿಯಿಂದಲೇ ದೂರು

ಪತ್ನಿಗೆ ಯಾಮಾರಿಸಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಮಹಿಳೆಗೆ ಯಾಮಾರಿಸಿ ಮತ್ತೊಬ್ಬಳ ಜೊತೆ ಸಂಪರ್ಕ ಹೊಂದಿದ್ದನಂತೆ. ದೂರು ಕೊಡಲು ಬಂದವಳನ್ನೇ ಪ್ರೀತಿಸಿ ಮದುವೆಗೆ ಸಿದ್ಧತೆ ನಡೆಸಿದ್ದನಂತೆ.

Written by - VISHWANATH HARIHARA | Edited by - Krishna N K | Last Updated : Sep 6, 2023, 05:50 PM IST
  • ಪತ್ನಿಗೆ ಯಾಮಾರಿಸಿ ಮತ್ತೊಬ್ಬಳ ಜೊತೆ ಪತಿ ಅನೈತಿಕ ಸಂಬಂಧ.
  • ಬಟ್ಟೆ ಬದಲಿಸುವಂತೆ ಮಹಿಳೆಯರನ್ನ ಬದಲಿಸುತ್ತಿದ್ದ ಇನ್ಸ್‌ಪೆಕ್ಟರ್.
  • ದೂರು ಕೊಡಲು ಬಂದವಳನ್ನೇ ಪ್ರೀತಿಸಿ ಮದುವೆಗೆ ಸಿದ್ಧತೆ ನಡೆಸಿದ್ದನಂತೆ.
ಹೆಂಡತಿಗೆ ಮೋಸ ಮಾಡಿ ಬೇರೆ ಹೆಂಗಸರ ಸಹವಾಸ: ಪೊಲೀಸಪ್ಪನ ವಿರುದ್ದ ಪತ್ನಿಯಿಂದಲೇ ದೂರು title=

ಬೆಂಗಳೂರು : ಬಟ್ಟೆ ಬದಲಿಸುವಂತೆ ಮಹಿಳೆಯರನ್ನ ಬದಲಿಸುತ್ತಿದ್ದ ಎಂದು ಇನ್ಸ್‌ಪೆಕ್ಟರ್ ವಿರುದ್ಧ ಪತ್ನಿಯೇ ಎಫ್ಐಆರ್ ದಾಖಲಿಸಿದ್ದಾರೆ. ಪತ್ನಿಗೆ ಯಾಮಾರಿಸಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಮಹಿಳೆಗೆ ಯಾಮಾರಿಸಿ ಮತ್ತೊಬ್ಬಳ ಜೊತೆ ಸಂಪರ್ಕ ಹೊಂದಿದ್ದನಂತೆ. ದೂರು ಕೊಡಲು ಬಂದವಳನ್ನೇ ಪ್ರೀತಿಸಿ ಮದುವೆಗೆ ಸಿದ್ಧತೆ ನಡೆಸಿದ್ದ ಎಂದು ಸದ್ಯ ಸಿಐಡಿ ಇನ್ಸ್‌ಪೆಕ್ಟರ್ ಬಿ ಮಲ್ಲಿಕಾರ್ಜುನ ವಿರುದ್ಧ ಪತ್ನಿ ಭವಾನಿ ಯಶವಂತಪುರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. 

ವಂಚನೆ ವರದಕ್ಷಿಣೆ ಪ್ರಕರಣದಲ್ಲಿ ಮಲ್ಲಿಕಾರ್ಜುನ್ ಹಾಗೂ ಆತನ ಅಣ್ಣ ಸರ್ಕಾರಿ ಅಧಿಕಾರಿ ಬಸಪ್ಪ ವಿರುದ್ಧ ದೂರು ದಾಖಲಿಸಿದ್ದಾರೆ. ಮೊದಲು ಪತ್ನಿ ಭವಾನಿಯನ್ನ ಯಾಮಾರಿಸಿ ಶೈಲ ಪೂಜಾರಿ ಎಂಬಾಕೆ ಜೊತೆ ಅನೈತಿಕ‌ ಸಂಬಂಧ ಹೊಂದಿದ್ದಕ್ಕೆ  ಭವಾನಿ ಹಾಗೂ ಶೈಲಾ ಪೂಜಾರಿ ನಡುವೆ ಜಗಳವಾಗಿತ್ತು.

ಇದನ್ನೂ ಓದಿ: ರಮ್ಯಾ ಸಾವಿನ ಸುದ್ದಿ ಸುಳ್ಳು : ಸ್ಯಾಂಡಲ್‌ವುಡ್‌ ಕ್ವೀನ್‌ ಜಿನೀವಾದಲ್ಲಿ ಕ್ಷೇಮ

ನಂತರ ಬಸವೇಶ್ವರನಗರ ಠಾಣೆಗೆ ಸಬ್ ಇನ್ಸ್ ಪೆಕ್ಟರ್ ಆಗಿದ್ದ ವೇಳೆ ಇವರಿಬ್ಬರಿಗೂ ತಿಳಿಯದಂತೆ ದೂರು ನೀಡಲು ಬಂದಿದ್ದ ಅಂಜಲಿ ಠಾಕೂರ್ ಎಂಬಾಕೆಯನ್ನ ಪರಿಚಯ ಮಾಡಿಕೊಂಡು ಪ್ರೀತಿಸುತ್ತಿದ್ದನಂತೆ.
ಈ ವಿಚಾರ ತಿಳಿದು ಬಸವೇಶ್ವರನಗರ ಪೊಲೀಸ್ ಠಾಣೆಗೆ ಬಂದು ಶೈಲಾ ಪೂಜಾರಿ ಗಲಾಟೆ ಮಾಡಿದ್ದರಂತೆ. ಈ ವೇಳೆ ಪೊಲೀಸ್ ಠಾಣೆಯಲ್ಲಿ ಶೈಲಾ ಪೂಜಾರಿ ಮೇಲೆ ಹಲ್ಲೆ ಗಲಾಟೆ ನಡೆಸಿ ಅಂಜಲಿ‌ ಠಾಕೂರ್ ಳನ್ನೆ ಮದುವೆಯಾಗುತ್ತೇನೆ. ಏನು ಬೇಕಾದ್ರು ಮಾಡಿಕೊ ಎಂದು ಬೈದು ಕಳಿಸಿದ್ದನಂತೆ.

ಸದ್ಯ ಮಲ್ಲಿಕಾರ್ಜುನನಿಗೆ ಬುದ್ದಿ ಕಲಿಸಲು ಪತ್ನಿ ಭವಾನಿ ಹಾಗೂ ಶೈಲಾ ಪೂಜಾರಿ ಒಂದಾಗಿದ್ದಾರೆ. ಸದ್ಯ ಹಣ ನೀಡುವಂತೆ ಪೀಡಿಸುತ್ತಿದ್ದಾನೆ. ಹಲ್ಲೆ ನಡೆಸುತ್ತಾನೆ ಎಂದು ಎಂದು ಪತ್ನಿ ಭವಾನಿ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ್ ವಿರುದ್ಧ ದೂರು ನೀಡಿದ್ದಾರೆ‌. ಇದಕ್ಕೆ ಮಲ್ಲಿಕಾರ್ಜುನ ಸಹೋದರ ಬಸಪ್ಪ ಎಂಬಾತ ಕುಮ್ಮಕ್ಕು ಕೊಡುತ್ತಿದ್ದಾನೆಂದು ಆರೋಪ ಮಾಡಿದ್ದು, ಸದ್ಯ ಸಿಐಡಿಯಲ್ಲಿ ಇನ್ಸ್‌ಪೆಕ್ಟರ್ ಆಗಿರುವ ಮಲ್ಲಿಕಾರ್ಜುನ್ ವಿರುದ್ದ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News