ಚಾಮರಾಜನಗರ: ಶಾಲಾ ಕಾಲೇಜುಗಳ ಪಠ್ಯ ಪುಸ್ತಕಗಳಲ್ಲಿ ಶೇಕಡ 30ರಷ್ಟು ಕಡಿತ ಮಾಡಲಾಗುವುದು. ಈ ಬಗ್ಗೆ ಇಂದು ಸಂಜೆ ಶಿಕ್ಷಣ ಆಯುಕ್ತರಿಂದ ಬಗ್ಗೆ ಮಾಹಿತಿ ಬಿಡುಗಡೆ‌ ಮಾಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.


COMMERCIAL BREAK
SCROLL TO CONTINUE READING

ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ ಬಳಿಕ ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್(S.Suresh Kumar), ಖಾಸಗಿ ಶಾಲೆಗಳ ಶುಲ್ಕದ ಬಗ್ಗೆ ಜನವರಿ 15 ರ ನಂತರ ತಜ್ಞರ ಅಭಿಪ್ರಾಯ ಪಡೆಯಲಾಗುವುದು. ತಜ್ಞರ ಮಾಹಿತಿ ಆಧರಿಸಿ ಶಾಲಾ ಕಾಲೇಜುಗಳ ಶುಲ್ಕ ನಿಗದಿಪಡಿಸಲಾಗುವುದು ಎಂದರು.


Cabinet Expansion : ಸಪ್ತ ಸಚಿವರ ಸಿಟಿ ಬೆಂಗಳೂರು ವಿಚಾರದಲ್ಲಿ ಬಿಎಸ್ ವೈಗೆ ಟೆನ್ಶನ್ ಯಾಕೆ..?


ಈಗಾಗಲೇ ಕೆಲವು ಖಾಸಗಿ ಸಂಸ್ಥೆಗಳು ಶೇಕಡ 30ರಷ್ಟು ಶುಲ್ಕ ಖಡಿತಗೊಳಿಸಲು ಮುಂದೆ ಬಂದಿವೆ. ಶುಲ್ಕ ಹೆಚ್ಚು ಕಡಿತಗೊಳಿಸಿದರೆ ಶಿಕ್ಷಕರು, ಉಪನ್ಯಾಸಕರ ವೇತನಕ್ಕೂ ತೊಂದರೆ ಆಗಲಿದೆ. ಇತ್ತ ಪೂರ್ತಿ ಶುಲ್ಕ ತುಂಬಲು ಪೋಷಕರಿಗೆ ಹೊರೆ ಆಗಲಿದೆ. ಶಿಕ್ಷಣ ಸಂಸ್ಥೆ ಮತ್ತು ಪೋಷಕರನ್ನು ಗಮನದಲ್ಲಿ ಇಟ್ಟು ಕೊಂಡು ಶುಲ್ಕ ನಿಗದಿ ಮಾಡಲಾಗುವುದ ಎಂದು ಸಚಿವರು ಹೇಳಿದರು.


B.S.Yediyurappa: ನಾಳೆ ಬಿಎಸ್ ವೈ ಸಚಿವ ಸಂಪುಟ ವಿಸ್ತರಣೆ: ಮೂವರು ಹಾಲಿ ಸಚಿವರಿಗೆ ಕೊಕ್!?


ಒಂದನೇ ತರಗತಿಯಿಂದ ಮಾಮೂಲಿ ತರಗತಿ ಆರಂಭಿಸುವ ಕುರಿತು ಜ. 15ರ ನಂತರ ತಜ್ಞರು ನೀಡುವ ವರದಿ ಬಳಿಕ ತೀರ್ಮಾನ ಮಾಡುತ್ತೇವೆ ಎಂದು ಸುರೇಶ್ ಕುಮಾರ್ ಹೇಳಿದರು.


H.Nagesh: ಸಚಿವ ಹೆಚ್.ನಾಗೇಶ್ ಗೆ 'ಬಿಗ್ ಶಾಕ್': ಸಂಪುಟದಿಂದ ಹೊರಕ್ಕೆ..!?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ