ಬೆಂಗಳೂರು : ಸಂಪುಟ ವಿಸ್ತರಣೆಯಾಗಲಿ, ಪುನಾರಚನೆ ಯಾಗಲಿ ಬೆಂಗಳೂರು ಸಚಿವರನ್ನು ಯಾವುದೇ ಕಾರಣಕ್ಕೂ ಕೈಬಿಡದ ಸ್ಥಿತಿಯಲ್ಲಿದ್ದಾರೆ ಯಡಿಯೂರಪ್ಪ. ಇದಕ್ಕೆ ಕಾರಣ ಬಿಬಿಎಂಪಿ ಚುನಾವಣೆ. ಒಂದು ವರ್ಷದಲ್ಲಿ ಬಿಬಿಎಂಪಿ ಚುನಾವಣೆ ಎದುರಾಗಲಿದೆ. ಆ ಚುನಾವಣೆಯನ್ನು ಗೆಲ್ಲುವ ಹೊಣೆಗಾರಿಕೆ ಬಿಜೆಪಿ ಮೇಲಿದೆ.
ಸಪ್ತ ಸಚಿವರ ಸಿಟಿ ಬೆಂಗಳೂರು..!
ಯಡಿಯೂರಪ್ಪ ಸಂಪುಟದಲ್ಲಿ (Cabinet) ಬೆಂಗಳೂರಿನ ಸಪ್ತ ಸಚಿವರಿದ್ದಾರೆ. ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್‌ನಾರಾಯಣ, ಕಂದಾಯ ಸಚಿವ ಆರ್.ಅಶೋಕ್ (R Ashok) , ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ (Suresh Kumar), ವಸತಿ ಸಚಿವ ವಿ.ಸೋಮಣ್ಣ, ಆಹಾರ ಸಚಿವ ಕೆ.ಗೋಪಾಲಯ್ಯ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಈ ಸಪ್ತ ಸಚಿವರು ಯಡಿಯೂರಪ್ಪ (Yadiyurappa) ಸಂಪುಟದಲ್ಲಿದ್ದಾರೆ. ಒಂದು ವೇಳೆ ಕೊಕ್ ನೀಡಬೇಕಾದ ಪ್ರಸಂಗ ಬಂದೊದಗಿದರೆ, ಯಾರಿಗೆ ಕೊಕ್ ನೀಡುವುದು ಎಂಬ ಗೊಂದಲದಲ್ಲಿದ್ದಾರೆ ಯಡಿಯೂರಪ್ಪ.
ಇದನ್ನೂ ಓದಿ : ನಾಳೆ ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಬಹುತೇಕ ಖಚಿತ – ಯಡಿಯೂರಪ್ಪ
ಇನ್ನೂ ಇಬ್ಬರು ಸಚಿವರ ಸೇರ್ಪಡೆ ಸಾಧ್ಯತೆ..!
ಬೆಂಗಳೂರಿನ (Bengaluru) 7 ಸಚಿವರು ಈಗಾಗಲೇ ಸಂಪುಟದಲ್ಲಿದ್ದಾರೆ. ಇನ್ನೂ ಇಬ್ಬರು ಸಚಿವರು ಸೇರ್ಪಡೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನ ಕೋಟಾದಡಿ ಶಾಸಕರಾದ ಲಿಂಬಾವಳಿ (Limbavali), ಮುನಿರತ್ನ (Munirathna) ಸೇರ್ಪಡೆ ಪಟ್ಟಿಯಲ್ಲಿದ್ದಾರೆ. ಮಂತ್ರಿ ಮಾಡುವುದಾಗಿ ಮುನಿರತ್ನಗೆ ಯಡಿಯೂರಪ್ಪ ಮಾತುಕೊಟ್ಟಿದ್ದಾರೆ. ಬಿಜೆಪಿ (BJP) ಅಧಿಕಾರಕ್ಕೆ ಬರಲು ಶ್ರಮಿಸಿದ್ದ ಲಿಂಬಾವಳಿ ಸಂಪುಟ ಸೇರಲು ಎಲ್ಲಾ ಕಸರತ್ತು ನಡೆಸಿದ್ದಾರೆ. ಮುನಿರತ್ನ, ಲಿಂಬಾವಳಿ ಇಬ್ಬರು ಕೂಡಾ ಸಂಪುಟ ಸೇರುವ ಸಾಧ್ಯತೆ ದಟ್ಟವಾಗಿದೆ.
ಇವರು ಸಂಪುಟ ಸೇರಬೇಕಾದರೆ, ಬೆಂಗಳೂರು ಕೋಟಾದಡಿ ಯಾರಾನ್ನಾದರೂ ಡ್ರಾಪ್ ಮಾಡಲೇ ಬೇಕು. ಡ್ರಾಪ್ ಮಾಡಿದರೆ ಬಿಬಿಎಂಪಿ ಚುನಾವಣೆ ಗೆಲ್ಲೋದು ಹೇಗೆ ಎಂಬ ಚಿಂತೆ ಯಡಿಯೂರಪ್ಪನವರಿಗೆ ಎದುರಾಗಿದೆ. ಹಾಗಾಗಿ ಬೆಂಗಳೂರು ಖೋಟಾದಲ್ಲಿ ಯಾರನ್ನ ಸೇರಿಸೋದು, ಯಾರನ್ನ ಬಿಡೋದು ಎಂಬ ವಿಚಾರದಲ್ಲಿ ತೀವ್ರ ಗೊಂದಲದಲ್ಲಿ ಮುಳುಗಿದ್ದಾರೆ ಮುಖ್ಯಮಂತ್ರಿ ಯಡಿಯೂರಪ್ಪ. ಜೊತೆಗೆ ಯಡಿಯೂರಪ್ಪ ಏನು ನಿರ್ಧಾರ ಪ್ರಕಟಿಸಬಹುದು ಅನ್ನೋದು ಕೂಡಾ ಕುತೂಹಲ ಕೆರಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.