ಬೆಂಗಳೂರು: ಚುನಾವಣೆ ಒಂದು ಯುದ್ಧವಿದ್ದಂತೆ. ಸರಿಯಾದ ಮಾರ್ಗದಲ್ಲಿ ಸಾಗುತ್ತಿರುವ ನಾವು ಪಾಂಡವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಬೆಂಗಳೂರಿನಲ್ಲಿ ನಡೆದ ಒಂದು ಸಮಾರಂಭದಲ್ಲಿ ಮಾತನಾಡುತ್ತಾ, ಚುನಾವಣೆ ಒಂದು ಯುದ್ಧವಿದ್ದಂತೆ. ಅದರಲ್ಲಿ ಸರಿಯಾದ ಮಾರ್ಗದಲ್ಲಿ ನಡೆಯುತ್ತಿರುವ ನಾವು 'ಪಾಂಡವರು' ಮತ್ತು ತಪ್ಪು ದಾರಿಯಲ್ಲಿ ನಡೆಯುತ್ತಿರುವ ಬಿಜೆಪಿಯವರು 'ಕೌರವರು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.



ಕೆಲ ದಿನಗಳ ಹಿಂದೆಯೇ, ಸಿದ್ಧರಾಮಯ್ಯ ಅವರು ಬಿಜೆಪಿಯ ಮತ್ತು ಆರ್ಎಸ್ಎಸ್ನಲ್ಲಿ ತನ್ನ 'ಹಿಂದೂ ಭಯೋತ್ಪಾದನೆ'  ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.


ಬಿಜೆಪಿ, ಆರ್ಎಸ್ಎಸ್ ಮತ್ತು ಬಜರಂಗ ದಳ ತಮ್ಮ ಸಂಘಟನೆಗಳೊಳಗೆ ಭಯೋತ್ಪಾದಕರನ್ನು ಹೊಂದಿದೆಯೆಂದು ಸಿದ್ದರಾಮಯ್ಯ ಜನವರಿ 10 ರಂದು ಆರೋಪಿಸಿದ್ದಾರೆ. "ಬಿಜೆಪಿ, ಆರ್ಎಸ್ಎಸ್ ಮತ್ತು ಬಜರಂಗದಳ ಸಹ ಭಯೋತ್ಪಾದಕರನ್ನು ಹೊಂದಿದ್ದಾರೆ" ಎಂದಿದ್ದ ಅವರ ಹೇಳಿಕೆ ಬಿಜೆಪಿಯವರ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು.


ಶುಕ್ರವಾರ, ಮಾಜಿ ರಾಜ್ಯ ಕಾನೂನು ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ನಾಯಕರ ನಿಯೋಗ ಬೆಂಗಳೂರಿನ ಪೋಲಿಸ್ ಕಮೀಷನರ್ ಟಿ. ಸುನೀಲ್ ಕುಮಾರ್ ಅವರನ್ನು ಭೇಟಿಯಾಗಿ ಬಿಜೆಪಿ ಮತ್ತು ಆರ್ಎಸ್ಎಸ್ ಸದಸ್ಯರನ್ನು 'ಭಯೋತ್ಪಾದಕರು' ಎಂದು ಸಿದ್ದರಾಮಯ್ಯ ಆರೋಪಿಸಿ ದೂರು ಸಲ್ಲಿಸಿದರು.