ಬೆಂಗಳೂರು: ಮುಂಬರುವ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನಿರ್ಧರಿಸಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಜೀ ನ್ಯೂಸ್ ಕನ್ನಡಕ್ಕೆ ಸಿಕ್ಕಿರುವ ಸಿದ್ದರಾಮಯ್ಯ ಆಪ್ತ ಮೂಲಗಳ ಮಾಹಿತಿ ಪ್ರಕಾರ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಬದಲಾಗಿ ಪ್ರಚಾರಕ್ಕೆ ಮಾತ್ರ ಸೀಮಿತನಾಗಿರುತ್ತೇನೆ ಎಂದು ಹೈಕಮಾಂಡ್ ಗೆ ತಿಳಿಸಿದ್ದಾರೆ ಎನ್ನಲಾಗಿದೆ.


ಆ ಮೂಲಕ ಸಿದ್ಧರಾಮಯ್ಯನವರ ಈ ನಡೆ ಕಾಂಗ್ರೆಸ್ ಗೆ ನಿರಾಶೆಯನ್ನುಂಟು ಮಾಡಿದ್ದಾರೆ ಎನ್ನಲಾಗಿದೆ. ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಇಡೀ ಮೋದಿ ಸರ್ಕಾರಕ್ಕೆ ನಿದ್ದೆ ಗೆಡಿಸಿದ್ದ ಸಿದ್ಧರಾಮಯ್ಯ, ಅವರ ಅನುಭವವನ್ನು ರಾಷ್ಟ್ರರಾಜಕಾರಣದಲ್ಲಿ ಬಳಸಿಕೊಳ್ಳಲು ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿ ನಿರ್ಧರಿಸಿದ್ದರು, ಆದರೆ ಸಿದ್ದರಾಮಯ್ಯನವರ ನಡೆ ಈಗ ಹೈಕಮಾಂಡನ್ನು ಚಿಂತೆಗೀಡು ಮಾಡಿದೆ ಎನ್ನಲಾಗಿದೆ.