ಬೆಂಗಳೂರು: ಒಂದೆಡೆ ತೈಲ ಬೆಲೆ ಗಗನಕ್ಕೇರುತ್ತಿದೆ. ಇದರ ಬೆನ್ನಲ್ಲೇ ಸರ್ಕಾರ ಸಿಲಿಂಡರ್ ಬೆಲೆಯನ್ನೂ ಏರಿಸಿ ಜನರಿಗೆ ಮತ್ತಷ್ಟು ಹೊರೆಯಾಗುವಂತೆ ಮಾಡಿದ್ದರೆ, ಇನ್ನೊಂದೆಡೆ ಈ ವರ್ಷ ಎರಡನೇ ಬಾರಿಗೆ ವಿದ್ಯುತ್ ದರ ಹೆಚ್ಚಿಸಲು ಮುಂದಾಗಿರುವ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಪ್ರತಿ ಯೂನಿಟ್ ಗೆ 14 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. 


COMMERCIAL BREAK
SCROLL TO CONTINUE READING

ಈ ಹಿಂದೆ ಮೇ ತಿಂಗಳಲ್ಲಿ ಯೂನಿಟ್ ಗೆ 25 ರಿಂದ 38 ಪೈಸೆ ಏರಿಕೆ ಮಾಡಲಾಗಿತ್ತು. ಇದೀಗ ಅಕ್ಟೋಬರ್ 1 ರಿಂದ ಪರಿಷ್ಕೃತ ದರ ಜಾರಿಗೆ ಬರುವಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಎಲ್ಲಾ ವಿದ್ಯುತ್ ಪ್ರಸರಣ ನಿಗಮಗಳಿಗೆ ಆದೇಶ ನೀಡಿದೆ. ಹೆಚ್ಚುವರಿ ಇಂಧನ ಹೊಂದಾಣಿಕೆ ಶುಲ್ಕವಾಗಿ 14 ಪೈಸೆ ಸಂಗ್ರಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹೀಗಾಗಿ ವಿದ್ಯುತ್ ಬಳಕೆದಾರದು ಪ್ರತಿ ಯೂನಿಟ್ ಗೆ ಒಟ್ಟು 35 ಪೈಸೆಯಷ್ಟು ಹೆಚ್ಚು ಪಾವತಿಸಬೇಕಾಗುತ್ತದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.