ಚಾಮರಾಜನಗರ: ಬೆಂಗಳೂರು ದಿಂಡಿಗಲ್ ರಾಷ್ಟೀಯ ಹೆದ್ದಾರಿ ಹಾದುಹೋಗುವ, ಚಾಮರಾಜನಗರ ತಮಿಳುನಾಡು ಗಡಿಭಾಗವಾದ ಆಸನೂರು ಸಮೀಪ ಆನೆಗಳು ವಾಹನಗಳ ಮೇಲೆ ದಾಳಿ ಮಾಡಿರುವ ಘಟನೆ ಶನಿವಾರ ಸಂಜೆ ನಡೆದಿದೆ‌.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪರಿಷ್ಕೃತ ಪಠ್ಯಕ್ಕೆ ಸುಳ್ಳಿನ ಸಮರ್ಥನೆ ನಾಚಿಕೆಗೇಡು: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ


ದಿಢೀರನೇ ರಸ್ತೆ ಮಧ್ಯಕ್ಕೆ ಮರಿ ಆನೆಯೊಂದಿಗೆ ಬಂದ ಎರಡು ಆನೆಗಳು ಎದುರಿಗೆ ಬಂದ ವಾಹನಗಳ ಮೇಲೆ ದಾಳಿ ಮಾಡಲು ಮುಂದಾಗಿವೆ. ಪೊಲೀಸ್ ಜೀಪೊಂದು ಆನೆ ದಾಳಿಯಿಂದ ತಪ್ಪಿಸಿಕೊಂಡರೇ, ಅದರ ಹಿಂದಿದ್ದ ಎರಡು ಕಾರುಗಳು ಗಜಪಡೆ ಗಲಾಟೆಯಿಂದ ಜಖಂಗೊಂಡಿವೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.


ಆನೆ ದಾಳಿಯಿಂದ ಅರ್ಧ ತಾಸಿಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಬೈಕ್ ಸವಾರರು ಸೇರಿದಂತೆ ವಾಹನ ಸವಾರರು ಆನೆ ದಾಳಿಯಿಂದ ಆತಂಕಕ್ಕೆ ಒಳಗಾಗಿದ್ದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗಟ್ಟಿದರು. ಬಳಿಕ ವಾಹನ ಸಂಚಾರ ಆರಂಭಹಗೊಂಡಿತು. ಕಬ್ಬಿನ ಲಾರಿಗೆ ಅಡ್ಡ ಹಾಕಿ ಕಬ್ಬು ತಿನ್ನುವುದು ಈ ಆನೆಗಳಿಗೆ ಅಭ್ಯಾಸವಾಗಿದೆ. ಆಗಾಗ್ಗೆ ಈ ರಸ್ತೆಯಲ್ಲಿ ಆನೆಗಳು ದಾಳಿ ನಡೆಸಿ ಅವಾಂತರ ಸೃಷ್ಟಿಸುವ ಘಟನೆ ಸಾಮಾನ್ಯವಾಗಿದೆ. 


ಇದನ್ನೂ ಓದಿ: ಹೈಕೋರ್ಟ್ ಲೋಕ ಅದಾಲತ್ 4 ಕೋಟಿ ರೂ.ಗಳಿಗೂ ಅಧಿಕ ಮೊತ್ತದ 221 ಪ್ರಕರಣಗಳ ಇತ್ಯರ್ಥ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.