Elephant Viral Video - ಆನೆಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆನೆ ತುಂಬಾ ಶಾಂತ ಪ್ರಾಣಿಯಾದ ಕಾರಣ, ಇಂಟರ್ನೆಟ್ ಬಳಕೆದಾರರಿಗೆ ಇದು ತುಂಬಾ ಇಷ್ಟವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಆನೆಗೆ ಸಂಬಂಧಿಸಿದ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮರಿ ಆನೆಯೊಂದು ನೀರಿನ ಸೆಳೆತದಲ್ಲಿ ಸಿಲುಕಿಕೊಂಡಿದೆ. ಇದಾದ ನಂತರ ತಾಯಿ ಆನೆ ಮಾಡಿರುವ ಕೆಲಸವನ್ನು ನೋಡಿ ನೀವೂ ಮನಸೋಲುವಿರಿ.
ಮರಿ ಆನೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿದೆ
ಆನೆಗಳ ಹಿಂಡು ವೇಗವಾಗಿ ಹರಿಯುವ ನದಿಯನ್ನು ದಾಟುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಈ ಸಮಯದಲ್ಲಿ, ದೊಡ್ಡ ಆನೆಗಳು ಬಹಳ ಸುಲಭವಾಗಿ ಹೊರಬರುತ್ತವೆ, ಆದರೆ ಮರಿ ಆನೆ ನೀರಿನಲ್ಲಿ ಹರಿಯಲು ಪ್ರಾರಂಭಿಸುತ್ತದೆ. ಇದನ್ನು ನೋಡಿದ ಮರಿ ಆನೆಯ ತಾಯಿ ತನ್ನ ಮಗುವಿನತ್ತ ವೇಗವಾಗಿ ಧಾವಿಸಿ ಅದನ್ನು ರಕ್ಷಿಸಲು ಪ್ರಯತ್ನಿಸುತ್ತದೆ. ಆದರೆ, ನೀರಿನ ಹರಿವು ಎಷ್ಟಿತ್ತೆಂದರೆ ಮರಿ ಆನೆ ದೂರದವರೆಗೆ ಕೊಚ್ಚಿಕೊಂಡು ಹೋಗಿದೆ.
ಇದನ್ನೂ ಓದಿ-Crime News: 48 ಮಹಿಳೆಯರ ಜೊತೆಗೆ ಭಾರತೀಯ ಮೂಲದ ವೈದ್ಯನ 'ಗಂಧಿ ಬಾತ್', ನ್ಯಾಯಾಲಯ ಹೇಳಿದ್ದೇನು?
ವೀಡಿಯೋದಲ್ಲಿ ಕಂಡು ಬರುವ ದೃಶ್ಯ ಆತಂಕ ಹುಟ್ಟಿಸುವಂತಿದೆ. ನೀರಿನ ಹರಿವು ತುಂಬಾ ವೇಗವಾಗಿದೆ ಎಂಬುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಇಂತಹ ಪರಿಸ್ಥಿತಿಯಲ್ಲಿ, ಪುಟ್ಟ ಆನೆಗೆ ನೆಲದ ಮೇಲೆ ಪಾದಗಳನ್ನಿಡಲು ಸಾಧ್ಯವಾಗುತ್ತಿಲ್ಲ ಮತ್ತು ಅದು ನೀರಿನೊಂದಿಗೆ ಹರಿಯಲು ಪ್ರಾರಂಭಿಸುತ್ತದೆ. ತಾಯಿ ಅದನ್ನು ರಕ್ಷಿಸಲು ಧಾವಿಸುತ್ತಾಳೆ, ಆದರೆ ತಾಯಿ ತನ್ನ ಎಲ್ಲಾ ಶಕ್ತಿ ಬಳಸಿಯೂ ಕೂಡ ಮರಿಯನ್ನು ಉಳಿಸಲು ವಿಫಲವಾಗುತ್ತಾಳೆ. ಇದಾದ ನಂತರ ಅಲ್ಲಿ ನಿಂತಿದ್ದ ಇತರ ಆನೆಗಳು ಈ ದೃಶ್ಯವನ್ನು ನೋಡಿ ಆ ಜಾಗಕ್ಕೆ ಧಾವಿಸುತ್ತವೆ. ಇದಾದ ನಂತರ ಹಿಂಡಿನಲ್ಲಿದ್ದ ದೊಡ್ಡ ಆನೆಯೊಂದು ಆ ಪುಟ್ಟ ಮರಿ ಆನೆಯನ್ನು ರಕ್ಷಿಸುತ್ತದೆ. ವಿಡಿಯೋ ನೋಡಿ-
ಇದನ್ನೂ ಓದಿ-Horn On Women Chest: ಮಹಿಳೆಯ ಶರೀರದ ಮೇಲೆ ಬೆಳೆದ ಕೊಂಬುಗಳು, ಕಂಡು ಬೆಚ್ಚಿಬಿದ್ದ ವೈದ್ಯರು
ನೆಟ್ಟಿಗರ ಮನಗೆದ್ದ ತಾಯಿ ಆನೆ
ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಮನ ಗೆಲ್ಲುತ್ತಿದೆ. ವಿಡಿಯೋದಲ್ಲಿ ಆನೆಗಳ ಒಗ್ಗಟ್ಟು ಮತ್ತು ತಾಯಿಯ ಪ್ರೀತಿಯನ್ನು ನೋಡಿ, ಸಾಮಾಜಿಕ ಮಾಧ್ಯಮ ಬಳಕೆದಾರರು ತುಂಬಾ ಪ್ರಭಾವಿತರಾಗಿದ್ದಾರೆ. elephants_.world ಹೆಸರಿನ ಇನ್‌ಸ್ಟಾಗ್ರಾಮ್ ಖಾತೆ ಮೂಲಕ ಈ ವೀಡಿಯೊ ಅಪ್‌ಲೋಡ್ ಮಾಡಲಾಗಿದೆ. ಜನರು ಈ ವೀಡಿಯೊವನ್ನು ತುಂಬಾ ಇಷ್ಟಪಡುತ್ತಿದ್ದಾರೆ ಮತ್ತು ವಿಡಿಯೋಗೆ ವೀಕ್ಷಣೆಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿವೆ. ಈ ವಿಡಿಯೋವನ್ನು ಇದುವರೆಗೆ 15 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಇದನ್ನೂ ನೋಡಿ -
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.