ಎಸ್ಕಾಂಗಳ ದುಸ್ಥಿತಿ.. ಸಿದ್ದರಾಮಯ್ಯ ಅವರ ಪಾಪದ ಕೂಸು: ಸಚಿವ ಸುನಿಲ್ ಕುಮಾರ್
ಅವತ್ತು ಇಲಾಖೆಗೆ ಸಿದ್ದರಾಮಯ್ಯ ಹೇರಿದ ಪಾಪದ ಕೂಸನ್ನು ನಾವು ಈಗ ಸರಿ ದೂಗಿಸುತ್ತಿದ್ದೇವೆ. ನಾನು ಅಧಿಕಾರ ವಹಿಸಿದಾಗ ಹೆಸ್ಕಾಂಗೆ ಸಂಬಳ ಕೊಡಲೂ ಹಣ ಇದ್ದಿಲ್ಲ. ಆ ದುಸ್ಥಿತಿ ಇತ್ತು. ಬೇರೆ ಇಲಾಖೆಗಳಿಂದ ಬರಬೇಕಾದ ಹಣವನ್ನೂ ಆರ್ಥಿಕ ಇಲಾಖೆಯಿಂದ ಸರಿದೂಗಿಸಿಲ್ಲ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಆರೋಪಿಸಿದರು.
ಬೆಂಗಳೂರು: ಅವತ್ತು ಇಲಾಖೆಗೆ ಸಿದ್ದರಾಮಯ್ಯ ಹೇರಿದ ಪಾಪದ ಕೂಸನ್ನು ನಾವು ಈಗ ಸರಿ ದೂಗಿಸುತ್ತಿದ್ದೇವೆ. ನಾನು ಅಧಿಕಾರ ವಹಿಸಿದಾಗ ಹೆಸ್ಕಾಂಗೆ ಸಂಬಳ ಕೊಡಲೂ ಹಣ ಇದ್ದಿಲ್ಲ. ಆ ದುಸ್ಥಿತಿ ಇತ್ತು. ಬೇರೆ ಇಲಾಖೆಗಳಿಂದ ಬರಬೇಕಾದ ಹಣವನ್ನೂ ಆರ್ಥಿಕ ಇಲಾಖೆಯಿಂದ ಸರಿದೂಗಿಸಿಲ್ಲ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಆರೋಪಿಸಿದರು. ರಾಜ್ಯದ ರೈತರ ಪಂಪ್ ಸೆಟ್‌ಗೆ ಮೀಟರ್ ಅಳವಡಿಸುವ ಯೋಚನೆ ಇಲ್ಲ. ಅದು ನಮ್ಮ ಕಾರ್ಯಸೂಚಿಯಲ್ಲೂ ಇಲ್ಲ. ಆದರೆ ಸಿದ್ದರಾಮಯ್ಯ ಮೀಟರ್ ಅಳವಡಿಸುವ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಇದನ್ನೂ ಓದಿ: ರಾಜ್ಯದ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಮತ್ತೆ 142 ಕೋಟಿ ವಿಶೇಷ ಅನುದಾನ: ಸಚಿವೆ ಶಶಿಕಲಾ ಜೊಲ್ಲೆ
ರೈತರ ಪಂಪ್ ಸೆಟ್ ಗೆ ಮೀಟರನ್ನು ಕಾಂಗ್ರೆಸ್ ಅವಧಿಯಲ್ಲಿ ಅಳವಡಿಲು ಹುನ್ನಾರ ಮಾಡಿದ್ದರು. ಈಗಲೂ ಮುಂದೆ ಅಧಿಕಾರಕ್ಕೆ ಬರುವ ಭ್ರಮೆಯಿಂದ ಮೀಟರ್ ಅಳವಡಿಸಲು ವೇದಿಕೆ ಸಜ್ಜುಗೊಳಿಸಲು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ರೈತರು ವಿದ್ಯುತ್ ಕಡಿತ ಆಗುತ್ತೆ ಎಂಬ ಯಾವುದೇ ಭಯ ಬೇಡ. ಅವರಿಗೆ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಮಾಡಿದ ಆರೋಪಗಳಿಗೆ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ ಇವರು, ಸಿದ್ದರಾಮಯ್ಯ ಅವಧಿಯಲ್ಲಿ ಒಂದು ಲಕ್ಷ ಕೋಟಿ ರೂ. ರಾಜ್ಯದ ಜನತೆಯ ಮೇಲೆ ಸಾಲದ ಹೊರೆ ಹಾಕಿದ್ದರು. ನಮ್ಮ ಇಲಾಖೆ ಮೇಲೂ 5.5 ಸಾವಿರ ಕೋಟಿ ರೂ. ಸಾಲ ಹೊರಿಸಿದ್ದರು. ೨೦೧೩ ರಿಂದ ೨೦೧೯ ರ ಅವಧಿಯಲ್ಲಿ 3479 ಕೋಟಿ ರೂ. ಸಬ್ಸಿಡಿ ಬಾಕಿ ಸಿದ್ದರಾಮಯ್ಯ ಕಾಲದಲ್ಲಿ ಸೃಷ್ಟಿಯಾಗಿತ್ತು. ಗ್ರಾಮೀಣಾಭಿವೃದ್ಧಿ ಸೇರಿದಂತೆ ಬೇರೆ ಬೇರೆ ಇಲಾಖೆಗಳಿಂದ ೬೦೦೦ ಕೋಟಿ ರೂ.ಗೂ ಮೇಲ್ಪಟ್ಟು ಬಾಕಿ ಉಳಿಸಿಕೊಂಡರು. ಎಸ್ಕಾಂಗಳು ನಷ್ಟದಲ್ಲಿವೆ ಎಂಬ ಸನ್ನಿವೇಶವನ್ನು ಸೃಷ್ಟಿಸಿ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸಲು ಸಿದ್ದರಾಮಯ್ಯ ಹುನ್ನಾರ ನಡೆಸಿದ್ದರು ಎಂದು ಆರೋಪಿಸಿದರು.
ಇದನ್ನೂ ಓದಿ: BS Yediyurappa : 'ದಕ್ಷಿಣ ರಾಜ್ಯಗಳನ್ನು ನೋಡಿಕೊಳ್ಳಬೇಕೆಂದು ಪಿಎಂ ಮೋದಿ ಹೇಳಿದ್ದಾರೆ'
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಪಂಪ್ ಸೆಟ್ ಗಳಿಗೆ ಮೀಟರ್ ಅಳವಡಿಸುವುದು ಶತಸಿದ್ಧ. ಆದರೆ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದರು.ನಾನು ಅಧಿಕಾರ ವಹಿಸಿಕೊಂಡಾಗ ಎಲ್ಲಾ ಹೆಸ್ಕಾಂ ನಷ್ಟದಲ್ಲಿದ್ದವು. ಈಗಿನ ಸಿಎಂ 8.5 ಸಾವಿರ ಕೋಟಿ ಅನುದಾನ ನೀಡಿ ಕೊರತೆ ಸರಿದೂಗಿಸಿದ್ದೇವೆ. ಇವರು ಇಲಾಖೆಯನ್ನು ಬಡಕೂಸಾಗಿಸಿದ್ದರು ಎಂದು ದೂರಿದ್ದರು.
ವಿಧಾನಸೌಧದಲ್ಲಿ ಒಂದು ಕೂಟ ಇದೆ:
ಹಣದ ವಹಿವಾಟು ನಡೆಸಲು ವಿಧಾನಸೌಧದಲ್ಲಿ ಒಂದು ಕೂಟ ಇದೆ. ಅದಕ್ಕೆ ನಾನು ಈಲ್ಡ್ ಆಗಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ವಿಧಾನಸೌಧದಲ್ಲಿ ಒಂದು ಕೂಟನೂ ಇದೆ. ನೇಮಕಾತಿ, ವರ್ಗಾವಣೆ ವಿಚಾರದಲ್ಲಿ ಲಾಭಿ ನಡೆಸಲು ಬರುತ್ತಿರುತ್ತಾರೆ. ಅದಕ್ಕೆ ನಾನು ಯಾವುದೇ ರೀತಿಯಲ್ಲೂ ಈಲ್ಡ್ ಆಗಿಲ್ಲ. ಯಾರಿಗೂ ಒಂದು ರೂಪಾಯಿ ಕೊಡದೇ ನೇಮಕಾತಿ ಆಗಲಿದೆ ಎಂದು ಬಹಿರಂಗವಾಗಿ ಹೇಳಿದ್ದೇನೆ. ಹಣಕಾಸು ವ್ಯವಹಾರದ ಬಗ್ಗೆ ಒತ್ತಡ ಹೇರಲು ಒಂದು ಕೂಟವೇ ಇದೆ. ಅಂಥ ಯಾವ ಲಾಭಿಗೂ ನಾವು ಈಲ್ಡ್ ಆಗಿಲ್ಲ ಎಂದು ತಿಳಿಸಿದರು. ಇಂಧನ ಇಲಾಖೆಯ ನೇಮಕಾತಿ ಪರೀಕ್ಷೆ ಮಾಡಿರುವುದು ನಮ್ಮ ಇಲಾಖೆ ಅಲ್ಲ. ಕೆಇಎ ಈ ಸಂಬಂಧ ಪರೀಕ್ಷೆ ನಡೆಸಿತ್ತು. ಅದು ನಮ್ಮ ಇಲಾಖೆಗೆ ವ್ಯಾಪ್ತಿಗೆ ಬರಲ್ಲ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.