BS Yediyurappa : 'ದಕ್ಷಿಣ ರಾಜ್ಯಗಳನ್ನು ನೋಡಿಕೊಳ್ಳಬೇಕೆಂದು ಪಿಎಂ ಮೋದಿ ಹೇಳಿದ್ದಾರೆ'

ಬಿಜೆಪಿ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗೆ ಆಯ್ಕೆ‌ ಮಾಡುವ ಮೂಲಕ ನನಗೆ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. 

Written by - Channabasava A Kashinakunti | Last Updated : Aug 17, 2022, 05:54 PM IST
  • ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪ ಅವರಿಗೆ ಸ್ಥಾನ
  • ಯಾವುದೇ ಸ್ಥಾನ ಮಾನ ನಿರೀಕ್ಷೆ ಮಾಡಿರಲಿಲ್ಲ.
  • ಕರ್ನಾಟಕದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ
BS Yediyurappa : 'ದಕ್ಷಿಣ ರಾಜ್ಯಗಳನ್ನು ನೋಡಿಕೊಳ್ಳಬೇಕೆಂದು ಪಿಎಂ ಮೋದಿ ಹೇಳಿದ್ದಾರೆ' title=

ಬೆಂಗಳೂರು : ಬಿಜೆಪಿ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗೆ ಆಯ್ಕೆ‌ ಮಾಡುವ ಮೂಲಕ ನನಗೆ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. 

ಇಂದು ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸ್ಥಾನ ನೀಡಿದ್ದಕ್ಕೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವುದೇ ಸ್ಥಾನ ಮಾನ ನಿರೀಕ್ಷೆ ಮಾಡಿರಲಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ‌ ಕೊಟ್ಟಮೇಲೆ ರಾಜ್ಯ ಪ್ರವಾಸ ಕೈಗೊಂಡು ಬಿಜೆಪಿ ಅಧಿಕಾರಕ್ಕೆ ತರಬೇಕು. ದಕ್ಷಿಣ ರಾಜ್ಯಗಳನ್ನು ನೋಡಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ಕಾರ್ಯಕರ್ತರನ್ನು ಗುರುತಿಸುತ್ತಾರೆ ಎಂಬುದು ಖುಷಿ ಕೊಟ್ಟಿದೆ. ಜವಾಬ್ದಾರಿಯನ್ನು ವಿನಂಬ್ರತೆಯಿಂದ ಸ್ವೀಕರಿಸಿ ರಾಜ್ಯದ ಉದ್ದಗಲಕ್ಕೆ ತೆರಳಿ ಪಕ್ಷ ಸಂಘಟನೆ ಮಾಡಲು ಹೈಕಮಾಂಡ್‌ ಮನಸ್ಸಿನಲ್ಲಿದೆ. ಪಕ್ಷ ಕೈಬಿಡುವುದಿಲ್ಲ ಎಂದು ಉದಾಹರಣೆ ಆಗಿದ್ದೇನೆ.. ರಾಜಕಾರಣ ಮತ್ತು ಬದುಕು ಎರಡು ನಿವೃತ್ತಿ ಇಲ್ಲದ ಬದುಕು ಎಂಬುದನ್ನು ಸಾಕ್ಷೀಕರಿಸಿದ್ದಾರೆ. 150 ಸ್ಥಾನ ಗೆದ್ದು ಅಧಿಕಾರಕ್ಕೆ ಬರಲು ಪ್ರಯತ್ನ ಮಾಡ್ತೇವೆ. ಕೇಂದ್ರದಲ್ಲಿ ಯಾವುದೇ ಶಕ್ತಿ  ನರೇಂದ್ರ ಮೋದಿ ಅವರನ್ನು ತಡೆಯಲು ಸಾಧ್ಯವಿಲ್ಲ. ಕರ್ನಾಟಕದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ ಎಂದರು.

ಇದನ್ನೂ ಓದಿ : ಬಿಜೆಪಿಯ ಹೊಸ ಸಂಸದೀಯ ಮಂಡಳಿಯಲ್ಲಿ ಬಿಎಸ್‌ವೈಗೆ ಸ್ಥಾನ: ಸಿಎಂ ಬೊಮ್ಮಾಯಿ ಸಂತಸ

ನಂತರ ಮಾತನಾಡಿದ ಸಿಎಂ‌ ಬಸವರಾಜ್ ಬೊಮ್ಮಾಯಿ, ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ‌ ನಡೆದ ತೀರ್ಮಾನದಂತೆ ದಕ್ಷಿಣ ರಾಜ್ಯಗಳಲ್ಲಿ‌ ಬಿಜೆಪಿ ಪಕ್ಷ ಅಧಿಕಾರಕ್ಕದ ತರಲು ಯೋಜನೆ ರೂಪಿಸಿದೆ. ಅದಕ್ಕಾಗಿ ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಿದೆ. ಒಟ್ಟು ಪರಿಣಾಮ ಕರ್ನಾಟದಲ್ಲಿ ಪಕ್ಷ‌ ಅಧಿಕಾರಕ್ಕೆ ಶತಸಿದ್ಧ. ಕರ್ನಾಟಕ ಜನರ ಮೂಡು ಇರೋದೆ ಬೇರೆ. 2023 ರ ರಾಜಕಾರಣ ಬದಲಾವಣೆಯಾಗಿದೆ. ಕಾಂಗ್ರೆಸ್ ಬಲ‌ ಕುಂಟಿತವಾಗಿದೆ. ಅಬ್ಬರ ಕೌರವ ಪಾತ್ರ ಆಡಿದರೆ ಜನ ಒಪ್ಪಿಕೊಳ್ಳಲ್ಲ. ಜನಪರ ಕೆಲಸ‌ ಮಾಡಿದ್ದೇವೆ.ಬಿಜೆಪಿಗೆ ಒಲವು ವ್ಯಕ್ತಪಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News